ಬಾಲಿವುಡ್ ಖಳ್ನಾಯಕ್ ಸಂಜಯ್ ದತ್ಗೆ ಇಂದು ಬಹಳ ವಿಶೇಷವಾದ ದಿನ ಹಾಗೂ ಅಷ್ಟೇ ಬೇಸರದ ದಿನ ಕೂಡಾ. ಇಂದು ಸಂಜಯ್ ದತ್ ಪತ್ನಿ ಮಾನ್ಯತಾ ಹುಟ್ಟಿದ ದಿನ. ಇದು ಸಂತೋಷದ ವಿಚಾರವಾದರೆ ಈ ಸಮಯದಲ್ಲಿ ಮಾನ್ಯತಾ ಜೊತೆ ಇಲ್ಲದಿರುವುದು ಅವರ ಬೇಸರಕ್ಕೆ ಕಾರಣವಾಗಿದೆ.
ದುಬೈನಲ್ಲಿ ನೆಲೆಸಿರುವ ಪತ್ನಿಗೆ ಸಂಜಯ್ ದತ್ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಲ್ಲದೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೂಡಾ ಮಾನ್ಯತಾ ಜೊತೆಗಿನ ಕೆಲವೊಂದು ಪೋಟೋಗಳನ್ನು ವಿಡಿಯೋ ರೂಪದಲ್ಲಿ ಅಪ್ಲೋಡ್ ಮಾಡಿ 'Happy Birthday Mom'ಎಂದು ಶುಭ ಕೋರಿದ್ದಾರೆ.
- " class="align-text-top noRightClick twitterSection" data="
">
ಅಲ್ಲದೆ 'ಯಾರಿಗೂ ತಿಳಿದಿಲ್ಲ ಅಲ್ಲವೇ..ನಾನು ಮಾನ್ಯತಾಳನ್ನು ಅಮ್ಮ ಎಂದು ಕರೆಯುತ್ತೇನೆ. ನನ್ನ ಜೀವನದಲ್ಲಿ ಬಂದು ಅದನ್ನು ಸುಂದರವಾಗಿಸಿದ್ದಕ್ಕೆ ನಿನಗೆ ಧನ್ಯವಾದಗಳು. ನೀನು ಬಹಳ ಅದ್ಭುತ ವ್ಯಕ್ತಿತ್ವವುಳ್ಳವಳು. ನಿನ್ನನ್ನು ನಾನು ಬಹಳ ಪ್ರೀತಿಸುತ್ತೇನೆ. ಈ ಸಮಯದಲ್ಲಿ ನಾನು ನಿನ್ನೊಂದಿಗೆ , ಮಕ್ಕಳೊಂದಿಗೆ ಇರಬೇಕಿತ್ತು' ಎಂದು ಸಂಜಯ್ ದತ್ ಬರೆದುಕೊಂಡಿದ್ದಾರೆ.
ಸಂಜಯ್ ದತ್ ಪತ್ನಿ ಮಾನ್ಯತಾ ಹಾಗೂ ಇಬ್ಬರು ಮಕ್ಕಳೊಂದಿಗೆ ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದರು. ಆದರೆ ವಾಪಸ್ ಬರುವಷ್ಟರಲ್ಲಿ ಲಾಕ್ ಡೌನ್ ಆರಂಭವಾದ ಕಾರಣ ಮಾನ್ಯತಾ ಹಾಗೂ ಮಕ್ಕಳು ದುಬೈನಲ್ಲೇ ಉಳಿದುಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೆ ಸಂಜಯ್ ದತ್ ತಮ್ಮ ಕುಟುಂಬವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಆಗ್ಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಾ ಬಂದಿದ್ದಾರೆ.
ಜುಲೈ 29 ರಂದು ಸಂಜಯ್ ದತ್ ಹುಟ್ಟುಹಬ್ಬವಾಗಿದ್ದು ಕೆಜಿಎಫ್ -2 ಚಿತ್ರತಂಡ ಅವರಿಗೆ ಸ್ಪೆಷಲ್ ಬರ್ತ್ಡೇ ಗಿಫ್ಟ್ ನೀಡಲು ಕಾಯುತ್ತಿದೆ ಎನ್ನಲಾಗಿದೆ. ಸಂಜಯ್ ದತ್ ಕೆಜಿಎಫ್ ಸೀಕ್ವೆಲ್ನಲ್ಲಿ ಅಧೀರನಾಗಿ ನಟಿಸುತ್ತಿದ್ದು ಬಹುಶ: ಆ ದಿನ ಸಂಜಯ್ ದತ್ ಪಾತ್ರದ ಟೀಸರ್ ಬಿಡುಗಡೆ ಮಾಡಬಹುದು ಎನ್ನಲಾಗುತ್ತಿದೆ.