ETV Bharat / sitara

ರೋಡೀಸ್ ಖ್ಯಾತಿಯ ರಾಜೀವ್ ಲಕ್ಷ್ಮಣ್ ಜತೆ ರಿಯಾ ಚಕ್ರವರ್ತಿ ಚಿಲ್ಲಿಂಗ್ : ಫೋಟೋ ನೋಡಿ

author img

By

Published : Jan 8, 2021, 3:24 PM IST

ರಿಯಾ ಜೊತೆಗಿನ ಫೋಟೋ ಹಂಚಿಕೊಂಡ ರೋಡೀಸ್​ ರಾಜೀವ್ 'ಮೈ ಗರ್ಲ್' ಎಂದು ಕ್ಯಾಪ್ಷನ್​ ನೀಡಿದ್ದಾರೆ. ಜೊತೆಗೆ ಫೋಟೋ ಟ್ರೋಲ್​ ಆಗದಂತೆ ತಡೆಯಲು ತಮ್ಮ ಇನ್ಸ್‌ಸ್ಟಾ ಅಕೌಂಟ್​​ನ ಕಾಮೆಂಟ್ ಆಯ್ಕೆಯನ್ನು ಆಫ್ ಮಾಡಿದ್ದಾರೆ..

Rhea Chakraborty chills with Roadies fame Rajiv Lakshman
ರಿಯಾ ಚಕ್ರವರ್ತಿ

ಹೈದರಾಬಾದ್ : ರೋಡೀಸ್​​ ಖ್ಯಾತಿಯ ರಾಜೀವ್ ಲಕ್ಷ್ಮಣ್ ಮತ್ತು ಅವರ ಕುಟುಂಬದೊಂದಿಗೆ ಮಹಾರಾಷ್ಟ್ರದ ಮಾಂಡ್ವಾ ಪ್ರವಾಸದಲ್ಲಿರುವ ಬಾಲಿವುಡ್​ ಬೆಡಗಿ ರಿಯಾ ಚಕ್ರವರ್ತಿ ಸಖತ್​ ಎಂಜಾಯ್​ ಮೂಡ್​ನಲ್ಲಿದ್ದಾರೆ.

ಗೆಳೆಯ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಿಡದೇ ಬೆನ್ನಟ್ಟುತ್ತಿರುವ ಕಾನೂನು ತೊಡಕುಗಳಿಂದಾಗಿ ನಟಿ ರಿಯಾ ಚಕ್ರವರ್ತಿ ಸೋಶಿಯಲ್​ ಮೀಡಿಯಾಗಳಿಂದ ಕೊಂಚ ದೂರು ಸರಿದಿದ್ರು. ಮೂರು ಸ್ವಾಯತ್ತ ತನಿಖಾ ಸಂಸ್ಥೆಗಳು ತನಿಖೆ ನಡೆಸಿದ ನಂತರ ಡ್ರಗ್ಸ್ ‌ಕೇಸ್​ನಲ್ಲಿ ಆರೋಪಿಯಾಗಿ 28 ದಿನಗಳ ಕಾಲ ಬೈಕುಲ್ಲಾ ಜೈಲಿನಲ್ಲಿ ಸೆರೆವಾಸ ಅನುಭವಿಸಿದ ರಿಯಾ, ಸದ್ಯ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೂ ಅವರು ಮುಂದಿನ ಆರು ತಿಂಗಳವರೆಗೆ ಪ್ರತಿ ತಿಂಗಳ ಮೊದಲ ಸೋಮವಾರ, ತನಿಖಾ ಸಂಸ್ಥೆಗೆ ವರದಿ ಮಾಡಬೇಕು.

ಇತ್ತೀಚೆಗಷ್ಟೇ ನಿರ್ಮಾಪಕ ರೂಮಿ ಜಾಫೆರಿ 2021ರಲ್ಲಿ ರಿಯಾ ಸಿನಿಮಾಗಳಿಗೆ ರೀ ಎಂಟ್ರಿ ಕೊಡುವ ಕುರಿತು ಸುಳಿವು ನೀಡಿದ್ದರು. ಇದೀಗ ರಿಯಾ ರಾಜೀವ್ ಲಕ್ಷ್ಮಣ್ ಜೊತೆಗಿನ ಫೋಟೋಗಳನ್ನು ರಾಜೀವ್​ ತಮ್ಮ ಇಸ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್​ ಮಾಡಿದ್ದು, ಇದು ರಿಯಾ ಚಕ್ರವರ್ತಿ ಅಭಿಮಾನಿಗಳಿಗೆ ಖುಷಿ ತಂದಿದೆ.

ರಿಯಾ ಜೊತೆಗಿನ ಫೋಟೋ ಹಂಚಿಕೊಂಡ ರೋಡೀಸ್​ ರಾಜೀವ್​''ಮೈ ಗರ್ಲ್'' ಎಂದು ಕ್ಯಾಪ್ಷನ್​ ನೀಡಿದ್ದಾರೆ. ಜೊತೆಗೆ ಫೋಟೋ ಟ್ರೋಲ್​ ಆಗದಂತೆ ತಡೆಯಲು ತಮ್ಮ ಇನ್ಸ್‌ಸ್ಟಾ ಅಕೌಂಟ್​​ನ ಕಾಮೆಂಟ್ ಆಯ್ಕೆಯನ್ನು ಆಫ್ ಮಾಡಿದ್ದಾರೆ.

ಸದ್ಯ ರಿಯಾ ಚಕ್ರವರ್ತಿ ಈ ವರ್ಷ ನಿರ್ಮಾಪಕ ರೂಮಿ ಜಾಫೆರಿ ಅವರ ಮುಂದಿನ ಸಿನಿಮಾ 'ಚೆಹೆರೆ'ನಲ್ಲಿ ನಟಿಸಲಿದ್ದು, ಈ ಸಿನಿಮಾದಲ್ಲಿ ಅಮಿತ್​ ಬಾ ಬಚ್ಚನ್​ ಹಾಗೂ ಇಮ್ರಾನ್​ ಹಶ್ಮಿ ಸಹ ಇದ್ದಾರೆ.

ಇದನ್ನೂ ಓದಿ:ಆಂಧ್ರ ಹುಡುಗ, ಅಫ್ಘಾನ್​ ಹುಡುಗಿಗೂ ಲವ್​: ಹಿಂದೂ ಸಂಪ್ರದಾಯದಂತೆ ಮ್ಯಾರೇಜ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.