ETV Bharat / sitara

ಊರ್ಮಿಳಾ ಮಾತೋಂಡ್ಕರ್ 'ಸಾಫ್ಟ್ ಪೋರ್ನ್‌ ಸ್ಟಾರ್': ಕಂಗನಾ ವಾಗ್ದಾಳಿ - ಊರ್ಮಿಳಾ ಮಾತೋಂಡ್ಕರ್ ವಿರುದ್ಧ ಕಂಗನಾ ರಣಾವತ್​ ವಾಗ್ದಾಳಿ

ನಟಿ ಊರ್ಮಿಳಾ ಮಾತೋಂಡ್ಕರ್ ಒಬ್ಬ ಸಾಫ್ಟ್ ಪೋರ್ನ್‌ ಸ್ಟಾರ್ ಎಂದು ಅವರ ವಿರುದ್ಧ ನಟಿ ಕಂಗನಾ ರಣಾವತ್​ ಕಿಡಿಕಾರಿದ್ದಾರೆ.

kangana
kangana
author img

By

Published : May 15, 2021, 7:55 PM IST

ಹೈದ್ರಾಬಾದ್​: ಬಾಲಿವುಡ್‌ನಲ್ಲಿ ಡ್ರಗ್​ ಮಾಫಿಯಾ ಭೀತಿಯ ವಿಚಾರವಾಗಿ ನಟಿಯರಾದ ಊರ್ಮಿಳಾ ಮಾತೋಂಡ್ಕರ್ ಹಾಗೂ ಕಂಗನಾ ರಣಾವತ್ ನಡುವೆ ಪರಸ್ಪರ ವಾಗ್ದಾಳಿ ನಡೆದಿದೆ. ಊರ್ಮಿಳಾ ಅವರ ವಿರುದ್ಧ ಕಿಡಿಕಾರಿರುವ ಕಂಗನಾ, ಅವಳು ಸಾಫ್ಟ್ ಪೋರ್ನ್‌ ಸ್ಟಾರ್ ಎಂದಿದ್ದಾರೆ.

2020 ರ ಸೆಪ್ಟೆಂಬರ್​ನಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ರಣಾವತ್, ಬಾಲಿವುಡ್‌ನಲ್ಲಿ ಮಾದಕವಸ್ತು ಭೀತಿ ಇದೆ ಎಂದು ಹೇಳಿದ್ದರು. ಈ ವಿಚಾರವಾಗಿ ಗರಂ ಆಗಿದ್ದ ಊರ್ಮಿಳಾ ಮಾತೋಂಡ್ಕರ್, ಇಡೀ ದೇಶವು ಮಾದಕ ದ್ರವ್ಯಗಳ ಭೀತಿಯನ್ನು ಎದುರಿಸುತ್ತಿದೆ. ಹಿಮಾಚಲವು ಡ್ರಗ್ಸ್ ನ ಮೂಲ ಎಂದು ಅವಳಿಗೆ ತಿಳಿದಿದೆಯೇ? ಅವಳು ತನ್ನ ರಾಜ್ಯದಿಂದಲೇ ಪ್ರಾರಂಭಿಸಬೇಕು ಎಂದು ಟೀಕಿಸಿದ್ದರು.

ಸದ್ಯ ಊರ್ಮಿಳಾ ಟೀಕೆಗೆ ಪ್ರತ್ಯುತ್ತರ ನೀಡಿರುವ ಕಂಗನಾ, "ಊರ್ಮಿಳಾ ಅವರ ಅವಹೇಳನಕಾರಿ ಸಂದರ್ಶನವನ್ನು ನಾನು ನೋಡಿದ್ದೇನೆ. ಅವಳು ಸಾಫ್ಟ್‌ ಪೋರ್ನ್‌ ಸ್ಟಾರ್. ಅದರಿಂದಲೇ ಇಷ್ಟು ಹೆಸರುವಾಸಿಯಾಗಿದ್ದಾಳೆಯೇ ಹೊರತು ನಟನೆಯಿಂದಲ್ಲ" ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ, ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ, ಕೆಲವೊಮ್ಮೆ ಆಕ್ರಮಣಕಾರಿ ಭಾಷೆಗಳನ್ನು ಬಳಸುತ್ತಾರೆ. ಆದರೆ ಅದು ವಾಕ್ ಸ್ವಾತಂತ್ರ್ಯ. ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಊರ್ಮಿಳಾ ಬಗ್ಗೆ, ಅವರ ಅಭಿನಯದ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಾದರೆ, ಅವರ ಬಹುಮುಖ ಪ್ರತಿಭೆಯನ್ನು ನಾನು ಪ್ರಶಂಸಿಸುತ್ತೇನೆ ಎಂದಿದ್ದಾರೆ. ಕಂಗನಾ ಹೇಳಿದ್ದು ಅವಳ ದೃಷ್ಟಿಕೋನ. ಕಂಗನಾ ಹೇಳುವ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯಿಸಲ್ಲ ಎಂದು ಆರ್​ಜಿವಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.