ETV Bharat / sitara

'83' trailer : 24 ಗಂಟೆಯಲ್ಲೇ 50 ಮಿಲಿಯನ್​ ವೀಕ್ಷಣೆಗೊಳಗಾದ ಮೊದಲ ಹಿಂದಿ ಟ್ರೇಲರ್​​!

author img

By

Published : Dec 1, 2021, 4:26 PM IST

3 ನಿಮಿಷ 50 ಸೆಕೆಂಡ್‌ನ ಈ ಟ್ರೇಲರ್​ ರಿಲೀಸ್​ ಆದ ಕೆಲ ನಿಮಿಷಗಳಲ್ಲೇ ಯುಟ್ಯೂಬ್ ಟ್ರೆಂಡಿಂಗ್​ ಲಿಸ್ಟ್‌ ಸೇರಿದೆ. ಹಿಂದಿ, ತಮಿಳು, ತೆಲಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಸಿನಿಮಾ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡುವ ಸಾಧ್ಯತೆ ಇದೆ..

Ranveer Singh '83' trailer
Ranveer Singh '83' trailer

ಮುಂಬೈ : ಬಾಲಿವುಡ್​ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೊತೆಯಾಗಿ ನಟಿಸಿರುವ 1983ರ ವಿಶ್ವಕಪ್​​ ಕಥೆ ಆಧಾರಿತ '83 ಟ್ರೆಲರ್'​ ನಿನ್ನೆ ರಿಲೀಸ್​ ಆಗಿದೆ.

ಈ ಚಿತ್ರದಲ್ಲಿ ರಣವೀರ್​ ಸಿಂಗ್​ ಹಾಗೂ ದೀಪಿಕಾ ಡಿಫರೆಂಟ್​​ ಲುಕ್​​ನಲ್ಲಿ ಕಾಣಿಸಿದ್ದಾರೆ. ರೋಚಕ ಕಥೆಯೊಂದಿಗೆ ಚಿತ್ರ ನಿರ್ಮಾಣಗೊಂಡಿದೆ ಎಂಬುದು ಟ್ರೇಲರ್​ ನೋಡುವುದರಿಂದಲೇ ಗೊತ್ತಾಗುತ್ತದೆ.

ಹಿಂದಿ, ಕನ್ನಡ, ತೆಲಗು ಸೇರಿದಂತೆ ಐದು ಭಾಷೆಗಳಲ್ಲಿ '83' trailer ರಿಲೀಸ್​ ಆಗಿದೆ. ಕೇವಲ 24 ಗಂಟೆಯಲ್ಲಿ ದಾಖಲೆಯ 50 ಮಿಲಿಯನ್​ ವೀಕ್ಷಣೆಗೊಳಗಾಗಿದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾಗಿರುವ ಮೊದಲ ಹಿಂದಿ ಚಿತ್ರ ಎಂಬ ದಾಖಲೆಗೆ ಪಾತ್ರವಾಗಿದೆ. ಇದರ ಬೆನ್ನಲ್ಲೇ ನಟ ರಣವೀರ್​​ ಸಿಂಗ್​​ ಸಿನಿಮಾ ರಸಿಕರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.

1983ರಲ್ಲಿ ಕಪಿಲ್​ ದೇವ್​ ನೇತೃತ್ವದ ಟೀಂ ಇಂಡಿಯಾ ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್ ತಂದುಕೊಟ್ಟಿತ್ತು. ಈ ಕಥೆ ಆಧರಿಸಿ ಸಿನಿಮಾ ನಿರ್ಮಾಣಗೊಂಡಿದೆ. ಡಿಸೆಂಬರ್​ 24ರಂದು ದೇಶಾದ್ಯಂತ ರಿಲೀಸ್​ ಆಗಲಿದೆ.

3 ನಿಮಿಷ 50 ಸೆಕೆಂಡ್‌ನ ಈ ಟ್ರೇಲರ್​ ರಿಲೀಸ್​ ಆದ ಕೆಲ ನಿಮಿಷಗಳಲ್ಲೇ ಯುಟ್ಯೂಬ್ ಟ್ರೆಂಡಿಂಗ್​ ಲಿಸ್ಟ್‌ ಸೇರಿದೆ. ಹಿಂದಿ, ತಮಿಳು, ತೆಲಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಸಿನಿಮಾ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಾಣ ಮಾಡುವ ಸಾಧ್ಯತೆ ಇದೆ.

ಟೀಂ ಇಂಡಿಯಾ ಕ್ಯಾಪ್ಟನ್ ಕಪಿಲ್ ದೇವ್​ ಪಾತ್ರದಲ್ಲಿ ರಣವೀರ್ ಸಿಂಗ್ ಕಾಣಿಸಿದರೆ, ಅವರ ಪತ್ನಿಯಾಗಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಲಾರ್ಡ್ಸ್‌ ಮೈದಾನದಲ್ಲಿ ನಡೆದ ರೋಚಕ ಫೈನಲ್​​ ಪಂದ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಚಿತ್ರಕ್ಕೆ ಕಬೀರ್ ಖಾನ್ ನಿರ್ದೇಶನವಿದೆ. ಚಿತ್ರದಲ್ಲಿ ತಾಹಿರ್ ರಾಜ್ ಭಾಸಿನ್, ಸಾಕಿಬ್ ಸಲೀಮ್, ಆಮಿ ವಿರ್ಕ್, ಹಾರ್ಡಿ ಸಂಧು, ಪಂಕಜ್ ತ್ರಿಪಾಠಿ ಮತ್ತು ಸಾಹಿಲ್ ಖಟ್ಟರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.