ಮುಂಬೈ (ಮಹಾರಾಷ್ಟ್ರ): ದೀಪಿಕಾ ಪಡುಕೋಣೆ ಓರ್ವ ಶ್ರೇಷ್ಠ ನಟಿ ಮಾತ್ರವಲ್ಲದೇ ಅದ್ಭುತ ಅಡುಗೆ ಮಾಡಬಲ್ಲ ಮಹಿಳೆ ಕೂಡ ಹೌದು ಎಂದು ನಟ ರಣವೀರ್ ಸಿಂಗ್ ಅವರು ಪತ್ನಿಯ ಕೈರುಚಿಯನ್ನು ಹಾಡಿ ಹೊಗಳುವ ಮೂಲಕ ಅಭಿಮಾನಿಗಳ ಹೃದವನ್ನು ಗೆದ್ದುಕೊಂಡಿದ್ದಾರೆ.
ಮಂಗಳವಾರ ರಾತ್ರಿ ಅವರು ಇನ್ಸ್ಟಾಗ್ರಾಂನಲ್ಲಿ ವಿಶೇಷ ಸೆಷನ್ ನಡೆಸಿದರು. ಈ ವೇಳೆ, ಅಭಿಮಾನಿಗಳು ಕೇಳಿದ ತರಹೇವಾರು ಪ್ರಶ್ನೆಗಳಿಗೆ ತಮಾಷೆಯ ಜೊತೆಗೆ ಕುಟುಂಬಕ್ಕೆ ಸಂಬಂಧಿಸಿದ ಕೆಲವು ಉತ್ತರ ನೀಡಿ ನೆಟಿಜನ್ಗಳ ಗಮನ ಸೆಳೆದಿದ್ದಾರೆ.
ದೀಪಿಕಾ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ರಣವೀರ್ ಆ ಎಲ್ಲ ಪ್ರಶ್ನೆಗಳಿಗೆ ಪ್ರೀತಿಯಿಂದಲೇ ಉತ್ತರಿಸಿದ್ದಾರೆ. ನಿಮ್ಮ ಪತ್ನಿ ಮಾಡುವ ಅಡುಗೆ ನಿಮಗೆ ಇಷ್ಟವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದರು. ಈ ವೇಳೆ, ರಣವೀರ್ ಅವರು ಧರ್ಮ ಪತ್ನಿ ದೀಪಿಕಾ ಪಡುಕೋಣೆಯನ್ನು ಹಾಡಿ ಹೊಗಳಿದ್ದಾರೆ.
ದೀಪಿಕಾ ಪಡುಕೋಣೆ ಓರ್ವ ಶ್ರೇಷ್ಠ ನಟಿ ಮಾತ್ರವಲ್ಲ. ಅವಳು ರುಚಿ ರುಚಿಯಾಗಿ ಅಡುಗೆ ಮಾಡಬಲ್ಲ ಬಹುಮುಖ ಪ್ರತಿಭಾವಂತೆ ಎಂದು ಪ್ರಶಂಸನೀಯ ಮಾತುಗಳನ್ನಾಡಿದ್ದಾರೆ. ಈ ಮಾತುಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಪ್ರೀಮಿಯರ್ ಲೀಗ್ ಪಂದ್ಯಗಳನ್ನು ವೀಕ್ಷಿಸಲು ಪ್ರಸ್ತುತ ಯುಕೆಯಲ್ಲಿರುವ ಅವರಿಗೆ ಇದೇ ರೀತಿ ಹತ್ತಾರು ಪ್ರಶ್ನೆಗಳನ್ನು ಕೇಳಿಲಾಗಿತ್ತು. ಇದ್ಯಾವುದಕ್ಕೆ ಹಿಂದೇಟು ಹಾಕದ ಅವರು ಮನಸ್ಸು ಬಿಚ್ಚಿ ಉತ್ತರ ನೀಡಿದ್ದಾರೆ. ಪ್ರತಿಯಾಗಿ ಪತ್ನಿ ದೀಪಿಕಾ ಕೂಡ ಜಾಲತಾಣದಲ್ಲಿ ಸ್ಮೈಲ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2012 ರಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ರಾಮ್ - ಲೀಲಾ ಚಿತ್ರದ ಸಮಯದಲ್ಲಿ ಒಟ್ಟಿಗೆ ನಟಿಸುವ ಮೂಲಕ ದೀಪಿಕಾ ಮತ್ತು ರಣವೀರ್ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಆರು ವರ್ಷಗಳ ಸಂಬಂಧದ ನಂತರ ಅವರು (2018 ರಲ್ಲಿ) ಇಟಲಿಯಲ್ಲಿ ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.