ETV Bharat / sitara

ಸಿನಿಮಾ ಮುಹೂರ್ತಕ್ಕಾಗಿ ಸಹ ನಟಿಯರೊಂದಿಗೆ ಅಯೋಧ್ಯೆಗೆ ಹಾರಿದ ಅಕ್ಕಿ - Akshay kumar in Ayodhya

ಅಕ್ಷಯ್ ಕುಮಾರ್ ತಮ್ಮ 'ರಾಮ ಸೇತು' ಸಿನಿಮಾ ಮುಹೂರ್ತದಲ್ಲಿ ಭಾಗವಹಿಸಲು ಅಯೋಧ್ಯೆಗೆ ತೆರಳಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನುಸ್ರತ್ ಬರುಚಾ ಜೊತೆ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ತಲುಪಿರುವ ಅಕ್ಷಯ್ ಕುಮಾರ್​ ಆ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Akshay Kumar
ಅಕ್ಷಯ್ ಕುಮಾರ್
author img

By

Published : Mar 18, 2021, 1:38 PM IST

ಮುಂಬೈ: ಬಾಲಿವುಡ್ ಬಹುನಿರೀಕ್ಷಿತ ಆ್ಯಕ್ಷನ್​​​​​-ಅಡ್ವೆಂಚರ್​​​​​​​​​​​ 'ರಾಮಸೇತು' ಸಿನಿಮಾ ಚಿತ್ರೀಕರಣ ಶೀಘ್ರವೇ ಆರಂಭವಾಗಲಿದ್ದು ಅಕ್ಷಯ್ ಕುಮಾರ್​​, ಜಾಕ್ವೆಲಿನ್ ಫರ್ನಾಂಡೀಸ್​​​​ ಹಾಗೂ ನುಸ್ರತ್ ಬರುಚಾ ಗುರುವಾರ ಅಯೋಧ್ಯೆ ತಲುಪಿದ್ದಾರೆ. 'ಪರಮಾಣು' ಹಾಗೂ 'ತೇರಿ ಬಿನ್ ಲಾಡೆನ್​' ಸಿನಿಮಾ ಖ್ಯಾತಿಯ ಅಭಿಷೇಕ್ ಶರ್ಮ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ: ಮುಂಬೈ ವಿವಿಧ ಸ್ಥಳಗಳಲ್ಲಿ ಕಾಣಿಸಿಕೊಂಡ ಬಾಲಿವುಡ್ ಸೆಲಬ್ರಿಟಿಗಳು

'ರಾಮಸೇತು' ಚಿತ್ರದಲ್ಲಿ ಅಕ್ಷಯ್ ಕುಮಾರ್, ಆರ್ಕಿಯಾಲಜಿಸ್ಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಹನಟಿಯರೊಂದಿಗಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್, "ವಿಶೇಷ ಸಿನಿಮಾ, ವಿಶೇಷ ಆರಂಭ..'ರಾಮ ಸೇತು' ಸಿನಿಮಾ ಮುಹೂರ್ತಕ್ಕಾಗಿ ಅಯೋಧ್ಯೆಗೆ ಹೊರಡುತ್ತಿದ್ದೇವೆ. ನಿಮ್ಮಿಂದ ವಿಶೇಷ ಆಶೀರ್ವಾದ ಅವಶ್ಯಕತೆ ಇದೆ" ಎಂದು ಅಕ್ಷಯ್ ಕುಮಾರ್ ಬರೆದುಕೊಂಡಿದ್ದಾರೆ. ಕೇಪ್ ಆಫ್ ಗುಡ್ ಫಿಲ್ಮ್ಸ್​, ಅಬುಂದನಿತ ಎಂಟರ್​​​​ಟೈನ್ಮೆಂಟ್​​​​​​​​, ಲೈಕಾ ಪ್ರೊಡಕ್ಷನ್ಸ್ ಹಾಗೂ ಅಮೆಜಾನ್ ಪ್ರೈಂ ಸಹಯೋಗದೊಂದಿಗೆ ಈ ಸಿನಿಮಾ ತಯಾರಾಗುತ್ತಿದೆ. ಚಂದ್ರಪ್ರಕಾಶ್ ದ್ವಿವೇದಿ ಈ ಚಿತ್ರಕ್ಕೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಮುಂದಿನ ಸಿನಿಮಾ ಪೃಥ್ವಿರಾಜ್​​​​ಗೆ ಚಂದ್ರಪ್ರಕಾಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ರಾಮಸೇತು' ಬಹುತೇಕ ಚಿತ್ರೀಕರಣ ಮುಂಬೈನಲ್ಲಿ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.