ETV Bharat / sitara

ನಟಿಯರ ಜೊತೆ ಸಖತ್​ ಡ್ಯಾನ್ಸ್​​ ಮಾಡಿ, ಹೀರೋಯಿನ್​ ಕಾಲಿಗೆ ಬಿದ್ದ ರಾಮ್​ಗೋಪಾಲ್​ ವರ್ಮಾ! - ರಾಮ್​ಗೋಪಾಲ್​ ವರ್ಮಾ ನ್ಯೂಸ್​

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಸಖತ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಕೆಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

Ram Gopal Varma
Ram Gopal Varma
author img

By

Published : Aug 26, 2021, 4:01 PM IST

Updated : Aug 26, 2021, 7:37 PM IST

ಹೈದರಾಬಾದ್​: ಸದಾ ಒಂದಿಲ್ಲೊಂದು ರೀತಿಯ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಇದೀಗ ನಟಿಯರ ಜೊತೆ ಸಖತ್​ ಆಗಿ ಡ್ಯಾನ್ಸ್​ ಮಾಡಿರುವ ವಿಡಿಯೋವೊಂದು ವೈರಲ್​​ ಆಗಿದ್ದು, ಇದರ ತುಣುಕು ಖುದ್ದಾಗಿ ಹಂಚಿಕೊಂಡಿರುವ ಆರ್​​​​ಜಿವಿ, ಈ ವಿಡಿಯೋದಲ್ಲಿರುವ ವ್ಯಕ್ತಿ ದೇವರಾಣೆ ನಾನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಡ್ಯಾನ್ಸ್​​

ನಟಿ ಇನಾಯಾ ಹುಟ್ಟುಹಬ್ಬದ ದಿನ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ನಟಿಯ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್​ ಆಗಿತ್ತು. ಇದಾದ ಬಳಿಕ ನಟಿ ಇನಾಯಾ ಕೂಡ ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಇದರ ತುಣುಕು ಶೇರ್ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ರಾಮ್​ಗೋಪಾಲ್​ ವರ್ಮಾರ ನಡುವಳಿಕೆಗೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿತ್ತು.

ಇದಾದ ಬಳಿಕ ರಾಮ್​ಗೋಪಾಲ್​ ವರ್ಮಾ ಹಾಸ್ಯಾಸ್ಪದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ನಾನಲ್ಲ. ಜೊತೆಗೆ ಕೆಂಪು ಬಣ್ಣದ ಬಟ್ಟೆ ಹಾಕಿಕೊಂಡಿರುವವರು ಇನಾಯಾ ಅಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಇದರಲ್ಲಿರುವುದು ಅಮೆರಿಕದ ಅಧ್ಯಕ್ಷ ಜೋ ಬೈಡನ್​​​ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ: ಯುವಕನ ಕಿಡ್ನಾಪ್​ ಮಾಡಿ, ಅಮಾನವೀಯ ರೀತಿ ಥಳಿಸಿದ ವಿಡಿಯೋ ವೈರಲ್​!

ಈ ವಿಡಿಯೋ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ ಇನಾಯಾ, ಇದು ನನ್ನ ಹುಟ್ಟುಹಬ್ಬ ಪಾರ್ಟಿ. ರಾಮ್​ ಗೋಪಾಲ್​ ವರ್ಮಾ ಇದರಲ್ಲಿ ರೋಮ್ಯಾಂಟಿಕ್​ ಹಾಗೂ ಹಾಟ್​​ ಆಗಿ ಡ್ಯಾನ್ಸ್​​ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ ಮತ್ತೋರ್ವ ನಟಿ ಜ್ಯೋತಿ ಕೂಡ ಕಾಣಿಸಿಕೊಂಡಿದ್ದಾರೆ.

Last Updated : Aug 26, 2021, 7:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.