ಹೈದರಾಬಾದ್: ಹಿಂದಿ ಕಿರುತೆರೆಯಲ್ಲಿ ಮಿಂಚಿ ಇದೀಗ ಬಾಲಿವುಡ್ಗೆ ಎಂಟ್ರಿ ಕೊಟ್ಟಿರುವ ನಟಿ ರಾಧಿಕಾ ಮದನ್ ಹಾಗೂ ಮೌನಿ ರಾಯ್ ಹಾಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಹವಾ ಎಬ್ಬಿಸಿವೆ.
- " class="align-text-top noRightClick twitterSection" data="
">
ನಟಿ ಮೌನಿ ರಾಯ್ ದುಬೈನಲ್ಲಿ ತಮ್ಮ ರಜಾ ದಿನಗಳನ್ನು ಎಂಜಾಮ್ ಮಾಡುತ್ತಿದ್ದು, ಅಲ್ಲಿ ಮಾಡಿಸಿದ ಫೋಟೋಶೂಟ್‌ನ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಿಡ್ರಿಫ್-ಬೇರಿಂಗ್ ಟಾಪ್ ಮತ್ತು ಉದ್ದನೆಯ ಸ್ಕರ್ಟ್ನಲ್ಲಿ ಮೌನಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೋಗಳಿಗೆ 'ಇಫ್ ಇಟ್ ಫೀಲ್ ಗುಡ್ ಇಟ್ ಮಸ್ಟ್ ಬಿ' ಎಂದಿ ಶೀರ್ಷಿಕೆ ನೀಡಿದ್ದಾರೆ.
ಸದ್ಯ ಮೌನಿ ರಾಯ್ ಅಯನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ನಾಗಾರ್ಜುನ ಸೇರಿದಂತೆ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಈ ನಡುವೆ ರಾಧಿಕಾ ಕೂಡ ಬೋಲ್ಡ್ ಸ್ಟೈಲ್ ಸ್ಟೇಟ್‌ಮೆಂಟ್ ನೀಡುವುದರಲ್ಲಿ ಬ್ಯುಸಿಯಾಗಿದ್ದು, ಛಾಯಾಗ್ರಾಹಕ ಪೆಹೆಲ್ ಅಗರ್ವಾಲ್ ಅವರೊಂದಿಗಿನ ಫೋಟೋಶೂಟಿನ ಪೋಟೋಗಳನ್ನು 'ಜಸ್ಟ್ ಹ್ಯಾಂಗ್ ಇನ್ ದೇರ್' ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ರಾಧಿಕಾ ಕೊನೆಯದಾಗಿ ಸನ್ನಿ ಕೌಶಲ್ ಜೊತೆಗೆ ಶಿದ್ದತ್ನಲ್ಲಿ ಕಾಣಿಸಿಕೊಂಡಿದ್ದರು. ನಟಿ ತನ್ನ ಮುಂಬರುವ ಯೋಜನೆಗಳನ್ನು ಇನ್ನೂ ಘೋಷಿಸಿಲ್ಲ. ಇನ್ನು ಇಬ್ಬರು ನಟಿಯರ ಬೋಲ್ಡ್ ಫೋಟೋಗಳಿಗೆ ಅಭಿಮಾನಿಗಳ ಪುಲ್ ಫಿದಾ ಆಗಿದ್ದಾರೆ.
ಇದನ್ನೂ ಓದಿ: 'ಯುವರತ್ನ' ಸ್ಪೇನ್ ಚಿತ್ರೀಕರಣ ಕ್ಯಾನ್ಸಲ್ ಆಗಲು ಪುನೀತ್ಗೆ ಇದ್ದ ಆ ಅಭ್ಯಾಸವೇ ಕಾರಣವಂತೆ..