ಮುಂಬೈ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ನಟ ಮನೋಜ್ ಬಾಜಪೇಯಿ, ದಿಲ್ಜಿತ್ ದೋಸಾಂಜ್ ಮತ್ತು ಫಾತಿಮಾ ಸನಾ ಶೇಖ್ ಅಭಿನಯದ 'ಸೂರಜ್ ಪೆ ಮಂಗಲ್ ಭಾರಿ' ಚಿತ್ರ ಬಿಡುಯಾಗಿದ್ದು ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ.
ಮನೋಜ್ ಮತ್ತು ದಿಲ್ಜಿತ್ ಅವರ ಮನತಟ್ಟುವ ನಟನೆ ಬಗ್ಗೆ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ಸೂರಜ್ ಪೆ ಮಂಗಲ್ ಭಾರಿ' ಇದೊಂದು ಕಾಮಿಡಿ ಚಿತ್ರವಾಗಿದ್ದು ಲಾಕ್ಡೌನ್ ಬಳಿಕ ಬಿಡುಗಡೆಯಾದ ಚಿತ್ರಗಳ ಪಟ್ಟಿಯಲ್ಲಿ ಇದು ಕೂಡ ಒಂದು.
ಅಭಿಷೇಕ್ ಶರ್ಮಾ ನಿರ್ದೇಶನದಡಿಯಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಹಾಗೇ ಬಂದು ಹೀಗೆ ಹೋಗುವ ಫಾತಿಮಾ ಸಿನಿಮಾ ನಟನೆ ನೋಡುವ ಪ್ರೇಕ್ಷರಿಗೆ ಥ್ರಿಲ್ ನೀಡುತ್ತದೆ.
ತೊಂಬತ್ತರ ದಶಕದ ಹಿಂದಿನ ಕಥೆಯನ್ನು ಹೊತ್ತು ತರುವ ಸೂರಜ್ ಪೆ ಮಂಗಲಾ ಚಿತ್ರ, ಬಾಂಬೆಯಲ್ಲಿ ನಡೆಯುತ್ತಿದ್ದ ಸ್ಥಳೀಯ ಮತ್ತು ಹೊರಗಿನವರ ಸಂಘರ್ಷಣಾತ್ಮ ದೃಶ್ಯಗಳನ್ನು ಕೇಂದ್ರಿಕರಿಸಿ ಚಿತ್ರ ತಯಾರಿಸಲಾಗಿದೆ. ಅವುಗಳನ್ನು ಪರದೆ ಮೇಲೆ ತರಲು ಅಭಿಷೇಕ್ ಶರ್ಮಾ ಯಶಸ್ವಿಯಾಗಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.