ಸ್ಯಾಂಡಲ್ವುಡ್ನಲ್ಲಿ ಆರಂಭವಾದ ಡ್ರಗ್ಸ್ ಪ್ರಕರಣ ಇದೀಗ ಬಾಲಿವುಡ್ಗೂ ಕಾಲಿಟ್ಟಿದೆ. ಇಷ್ಟು ದಿನ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಇದೀಗ ಡ್ರಗ್ಸ್ ವಿಚಾರಣೆ ಎದುರಿಸುತ್ತಿದ್ದಾರೆ.
ನಿನ್ನೆ ಎನ್ಸಿಬಿ ವಿಚಾರಣೆಯಲ್ಲಿ ಸಾರಾ ಅಲಿಖಾನ್, ರಕುಲ್ ಪ್ರೀತ್ ಸಿಂಗ್ ಹಾಗೂ ಫ್ಯಾಷನ್ ಡಿಸೈನರ್ ಖಂಬಟ್ಟಾ ಕೂಡಾ ಡ್ರಗ್ಸ್ ಸೇವಿಸುತ್ತಾರೆ ಎಂದು ನಟಿ ರಿಯಾ ಚಕ್ರವರ್ತಿ ಹೇಳಿದ್ದಾರೆ.
ಈ ಮೂವರೂ ತನಗೆ ಹಾಗೂ ಸುಶಾಂತ್ಗೆ ಡ್ರಗ್ಸ್ ತಂದು ನೀಡುತ್ತಿದ್ದರು ಎಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ರಿಯಾ ಹೇಳಿರುವ ಪ್ರಕಾರ ಬಾಲಿವುಡ್ನ ಶೇಕಡ 80 ರಷ್ಟು ನಟ-ನಟಿಯರು ಡ್ರಗ್ಸ್ಗೆ ಅಡಿಕ್ಟ್ ಆಗಿದ್ದು ಸದ್ಯಕ್ಕೆ ಸುಮಾರು 25 ಮಂದಿ ನಟ-ನಟಿಯರನ್ನು ಎನ್ಸಿಬಿ ವಿಚಾರಣೆಗೆ ಕರೆಸಲಾಗುವುದು ಎನ್ನಲಾಗುತ್ತಿದೆ.
ಮತ್ತೊಂದು ವರದಿಯ ಪ್ರಕಾರ ಸ್ಟಾರ್ ಕಿಡ್ಗಳನ್ನು ಬಾಲಿವುಡ್ಗೆ ಪರಿಚಯಿಸುತ್ತಿರುವ ಹಾಗೂ ಭೂಗತ ಲೋಕದ ವ್ಯಕ್ತಿಗಳಿಂದ ಹಣ ಪಡೆಯುತ್ತಿರುವ ನಿರ್ಮಾಪಕರೊಬ್ಬರ ಮೇಲೆ ಕೂಡಾ ಎನ್ಸಿಬಿ ಕಣ್ಣಿಟ್ಟಿದೆ. 5 ಎನ್ಸಿಬಿ ತಂಡ ಸದ್ಯಕ್ಕೆ ಈ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದೆ ಎನ್ನಲಾಗಿದೆ. ಇನ್ನು ಸುಶಾಂತ್ ಸಿಂಗ್ ರಜಪೂತ್ಗೆ ಡ್ರಗ್ಸ್ ನೀಡುವುದು ಹಾಗೂ ಹಣಕಾಸಿನ ನಿರ್ವಹಣೆ ಮಾಡುತ್ತಿದ್ದಾಗಿ ರಿಯಾ ಚಕ್ರವರ್ತಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಸುಶಾಂತ್ ಆತ್ಮಹತ್ಯೆ ಪ್ರಕರಣದ ಮೂಲಕ ಆರಂಭವಾದ ವಿಚಾರಣೆ ಈಗ ಡ್ರಗ್ಸ್ ಮಾಫಿಯಾವರೆಗೂ ಬಂದು ನಿಂತಿದ್ದು ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕು.