ಮುಂಬೈ: ಕೊರೊನಾ ಭೀತಿಯಿಂದ ಅನೇಕ ಜನರು, ಸೆಲೆಬ್ರಿಟಿಗಳು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಹ ಸೇರಿಕೊಂಡಿದ್ದು, ಇತ್ತೀಚೆಗೆ ಅವರು ಫೈಜರ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ, ಈ ಲಸಿಕೆಯನ್ನು ಅವರು ಲಂಡನ್ನಲ್ಲಿ ಪಡೆದುಕೊಂಡಿದ್ದಾರೆ.
ಲಸಿಕೆ ಪಡೆದ ಬಳಿಕ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ನಟಿ, "ನನ್ನ ಲಸಿಕೆ ಇಲ್ಲಿ ಸಿಕ್ಕಿತು. ಕೆಲ ಫೋಟೋಗಳನ್ನು ತೆಗೆದುಕೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, "ಹಾಗಾದರೆ ಭಾರತದ ವ್ಯಾಕ್ಸಿನ್ ಮೇಲೆ ನಂಬಿಕೆ ಇಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಪ್ರಶ್ನೆಗೆ ನಟಿ ಇನ್ನೂ ಉತ್ತರಿಸಿಲ್ಲ.
-
Got my vaccine here. Took some photos. Then reality hit. 🤣 📸 @priyankachopra. #Pfizer #London. P.S. To all those extra smart people in the comments .... selfies get inverted. Left arm it is. pic.twitter.com/mtd7034w4A
— Parineeti Chopra (@ParineetiChopra) July 14, 2021 " class="align-text-top noRightClick twitterSection" data="
">Got my vaccine here. Took some photos. Then reality hit. 🤣 📸 @priyankachopra. #Pfizer #London. P.S. To all those extra smart people in the comments .... selfies get inverted. Left arm it is. pic.twitter.com/mtd7034w4A
— Parineeti Chopra (@ParineetiChopra) July 14, 2021Got my vaccine here. Took some photos. Then reality hit. 🤣 📸 @priyankachopra. #Pfizer #London. P.S. To all those extra smart people in the comments .... selfies get inverted. Left arm it is. pic.twitter.com/mtd7034w4A
— Parineeti Chopra (@ParineetiChopra) July 14, 2021
ಸದ್ಯ ಲಸಿಕೆ ಪಡೆದಿರುವ ನಟಿ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಪರಿಣಿತಿ ಚೋಪ್ರಾ ಲಂಡನ್ನಲ್ಲಿ ತನ್ನ ಸಹೋದರಿ ನಟಿ ಪ್ರಿಯಾಂಕ ಚೋಪ್ರಾ ಜತೆ ಸಮಯ ಕಳೆಯುತ್ತಿದ್ದು, ಅವರ ನಟನೆಯ 'ಸೈನಾ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.