'ಸೆವೆನ್ ಒ ಕ್ಲಾಕ್' ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ವೃತ್ತಿ ಬದುಕನ್ನು ಆರಂಭಿಸಿ ಜೋಷ್, ಮೈನಾ, ಕೋಟಿಗೊಬ್ಬ 3 ಸೇರಿ ತಮಿಳು, ಹಿಂದಿ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕೂಡಾ ಹೆಸರು ಮಾಡಿರುವ ನಿತ್ಯಾ ಮೆನನ್ ಮತ್ತೆ ಸುದ್ದಿಯಲಿದ್ದಾರೆ.
ಕೆಲವು ದಿನಗಳ ಹಿಂದೆ ನಿತ್ಯಾ ಮೆನನ್, ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದರು. ದಪ್ಪ ಆಗುವುದು, ಸಣ್ಣ ಆಗುವುದು ಅವರವರಿಗೆ ಬಿಟ್ಟ ವಿಚಾರ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದು ತಪ್ಪು. ದಪ್ಪ ಆಗಿದ್ದೇನೆ ಎಂದು ಕೆಟ್ಟದಾಗಿ ಕಮೆಂಟ್ ಮಾಡುವವರೇ ಹೆಚ್ಚು, ಆದರೆ ಯಾವ ಕಾರಣಕ್ಕೆ ಹೀಗಾದೆ ಎಂದು ಯಾರೂ ಕೇಳುವುದಿಲ್ಲ. ಏನೋ ಕಾಯಿಲೆ ಇದೆ ಎನ್ನುವಂತೆ ಎಲ್ಲರೂ ಮಾತನಾಡುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರದ ಮೂಲಕ ಕೆಲವು ದಿನಗಳ ಹಿಂದೆ ನಿತ್ಯಾ ಸುದ್ದಿಯಲ್ಲಿದ್ದರು.
ಇದೀಗ ನಿತ್ಯಾ ವೆಬ್ ಸೀರೀಸ್ನಲ್ಲಿ ನಟಿಸುವ ಮೂಲಕ ಸುದ್ದಿಯಲ್ಲಿದ್ದಾರೆ. 'ಬ್ರೀತ್' ಸೀರೀಸ್ ಸೀಸನ್ 2 ರಲ್ಲಿ 'ಇನ್ ಟು ದಿ ಶಾಡೋಸ್' ನಲ್ಲಿ ನಿತ್ಯಾ ಮೆನನ್ ಅಭಿಷೇಕ್ ಬಚ್ಚನ್ ಹಾಗೂ ಅಮೀತ್ ಸಾಧ್ ಜೊತೆ ಅಭಿನಯಿಸಿದ್ದಾರೆ. ಈ ಸೀರೀಸ್ನಲ್ಲಿ ನಿತ್ಯಾ, ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಜುಲೈ 10 ರಂದು ಈ ಸೀರೀಸ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಈ ಸೀರೀಸ್ನ ಟ್ರೇಲರ್ ಬಿಡುಗಡೆಯಾಗಿದ್ದು ಭಾರೀ ಕುತೂಹಲ ವ್ಯಕ್ತವಾಗಿದೆ. ನಿತ್ಯಾ ಮೆನನ್ 'ಮಿಷನ್ ಮಂಗಳ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸಿ ಗಮನ ಸೆಳೆದಿದ್ದರು. ಇದೀಗ ಅಭಿಷೇಕ್ ಜೊತೆ ನಟಿಸುವ ಮೂಲಕ ಸುದ್ದಿಯಲಿದ್ದಾರೆ.