ETV Bharat / sitara

ಫುಟ್​​ಬಾಲ್ 'ಮೈದಾನ'ದಲ್ಲಿ ಅಜಯ್ ದೇವಗನ್, ಕೀರ್ತಿ ಸುರೇಶ್ ರೊಮ್ಯಾನ್ಸ್! - ಬೋನಿ ಕಪೂರ್

ಕೀರ್ತಿ ಸುರೇಶ್ ಹಾಗೂ ಅಜಯ್ ದೇವಗನ್ ಜೊತೆಯಾಗಿ ನಟಿಸುತ್ತಿರುವ 'ಮೈದಾನ್' ಚಿತ್ರದ ಶೂಟಿಂಗ್ ನಿನ್ನೆಯಿಂದ ಆರಂಭವಾಗಿದೆ. ಇದು ಕೀರ್ತಿ ನಟಿಸುತ್ತಿರುವ ಮೊದಲ ಬಾಲಿವುಡ್ ಸಿನಿಮಾ. ಫುಟ್​​​​ಬಾಲ್ ಕೋಚ್ ಸಯ್ಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ.

ಮೈದಾನ್
author img

By

Published : Aug 20, 2019, 11:07 AM IST

'ಮಹಾನಟಿ' ಚಿತ್ರದ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿ ಪಡೆದ ನಂತರ ಕೀರ್ತಿ ಸುರೇಶ್ ಕೀರ್ತಿ ಇನ್ನೂ ಎತ್ತರಕ್ಕೆ ಬೆಳೆದಿದೆ. ಆ ಸಿನಿಮಾ ನಂತರ ಕೀರ್ತಿಗೆ ಮತ್ತಷ್ಟು ಆಫರ್​​ಗಳು ಹುಡುಕಿ ಬರುತ್ತಿವೆ. ಕೆಲವೊಂದು ಬಿಗ್​​​ ಬಜೆಟ್ ಸಿನಿಮಾಗಳಿಗೆ ಅವರು ಸಹಿ ಹಾಕಿದ್ದಾರೆ.

ಕೀರ್ತಿ ಸುರೇಶ್ ಈಗ ಬಾಲಿವುಡ್​​​ಗೂ ಕಾಲಿರಿಸಿದ್ದು, ಅಜಯ್ ದೇವಗನ್ ಜೊತೆ 'ಮೈದಾನ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ ಕೀರ್ತಿ ತೂಕ ಇಳಿಸಿಕೊಂಡು ಬಹಳ ಸ್ಲಿಮ್ ಆಗಿದ್ದು, ಆ ಫೊಟೋ ಕೂಡಾ ವೈರಲ್ ಆಗಿತ್ತು. ಭಾರತೀಯ ಫುಟ್​​ಬಾಲ್​​ ಸುವರ್ಣ ಯುಗ ಎಂದೇ ಕರೆಯಲ್ಪಡುವ 1952-62ರ ಸಮಯದಲ್ಲಿನ ಕಥೆಯನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಲಾಗಿದೆ. ಫುಟ್​​​​ಬಾಲ್ ಕೋಚ್ ಸಯ್ಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ನಿನ್ನೆಯಿಂದ ಆರಂಭವಾಗಿದೆ. 1962 ಏಷ್ಯನ್ ಗೇಮ್ಸ್​​ ಸ್ಪರ್ಧೆಯಲ್ಲಿ ಭಾರತೀಯ ಫುಟ್​​ಬಾಲ್​​​ ತಂಡವನ್ನು ಗೆಲ್ಲಿಸುವುದಕ್ಕಾಗಿ ಸಯ್ಯದ್ ಪಟ್ಟ ಶ್ರಮ, ಕಾರ್ಯತಂತ್ರಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಅಮಿತ್ ಶರ್ಮಾ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಬೋನಿ ಕಪೂರ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

Intro:Body:

keerthy suresh

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.