ETV Bharat / sitara

'ತಲೈವಿ'ಗೆ ಪಾಸಿಟಿವ್​ ರೆಸ್ಪಾನ್ಸ್​.. ಪಾರ್ಟ್-2 ಕೂಡ ಬರಲಿದ್ಯಾ!?

ಹಲವಾರು ವರದಿಗಳ ಪ್ರಕಾರ, ತಲೈವಿ ಶೀಘ್ರದಲ್ಲೇ ಮುಂದುವರಿದ ಭಾಗದಲ್ಲಿಯೂ ಮೂಡಿಬರಲಿದ್ದಾರೆ. ವೆಬ್‌ಲೋಯ್ಡ್ ಉಲ್ಲೇಖಿಸಿದಂತೆ "ಚಿತ್ರದ ಉತ್ತರಭಾಗವು ಖಂಡಿತವಾಗಿಯೂ ಬರಲಿದೆ. ಜಯಲಲಿತಾ ಅವರ ಜೀವನದ ಬಗ್ಗೆ ಬಹಿರಂಗಪಡಿಸಲು ಇನ್ನೂ ಬಹಳಷ್ಟಿದೆ..

author img

By

Published : Sep 11, 2021, 8:41 PM IST

sequel
ಬಾಲಿವುಡ್ ನಟಿ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನಚರಿತ್ರೆ ಕುರಿತಾದ ಸಿನಿಮಾ 'ತಲೈವಿ' ಸಪ್ಟೆಂಬರ್ 10ರಂದು ಬಿಡುಗಡೆಯಾಗಿದೆ.

ಪಾಸಿಟಿವ್ ವಿಮರ್ಶೆಗಳು ಈ ಚಿತ್ರಕ್ಕೆ ಬಂದಿವೆ. 1991 ಮತ್ತು 2016ರ ನಡುವೆ 14 ವರ್ಷಗಳಿಗಿಂತಲೂ ಹೆಚ್ಚು ಕಾಲ ತಮಿಳುನಾಡಿನಲ್ಲಿ ಆಡಳಿತ ನಡೆಸಿದ ತಲೈವಿ ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಪುರುಷರ ಜಗತ್ತಿಗೆ ಪ್ರವೇಶಿಸುವ ಮಹಿಳೆಯಾಗಿ ದಿವಂಗತ ರಾಜಕಾರಣಿಯ ಲೈಫ್​ ಜರ್ನಿಯನ್ನು ತೆರೆದಿಡುತ್ತದೆ.

ಆದರೆ, ಅವರ ನೈಜ ಜೀವನದ ದ್ವಿತೀಯಾರ್ಧವನ್ನು ಚಿತ್ರದಲ್ಲಿ ಹೆಚ್ಚು ತೋರಿಸಿಲ್ಲ. ಹೀಗಾಗಿ, ಇದು ಸಿನಿಮಾ ನಿರ್ದೇಶಕರು ಮುಂದುವರಿದ ಭಾಗವನ್ನು ಆಧರಿಸಿ ತಲೈವಿ-2 ಸಿನಿಮಾ ಮಾಡಲು ಪ್ರೇರೇಪಿಸಿದಂತಿದೆ.

ಹಲವಾರು ವರದಿಗಳ ಪ್ರಕಾರ, ತಲೈವಿ ಶೀಘ್ರದಲ್ಲೇ ಮುಂದುವರಿದ ಭಾಗದಲ್ಲಿಯೂ ಮೂಡಿಬರಲಿದ್ದಾರೆ. ವೆಬ್‌ಲೋಯ್ಡ್ ಉಲ್ಲೇಖಿಸಿದಂತೆ "ಚಿತ್ರದ ಉತ್ತರಭಾಗವು ಖಂಡಿತವಾಗಿಯೂ ಬರಲಿದೆ. ಜಯಲಲಿತಾ ಅವರ ಜೀವನದ ಬಗ್ಗೆ ಬಹಿರಂಗಪಡಿಸಲು ಇನ್ನೂ ಬಹಳಷ್ಟಿದೆ. ಜನರು ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ ಮತ್ತು ಖಂಡಿತವಾಗಿ, ಇದು ನಿರ್ಮಾಪಕರಿಗೆ ಒಂದು ಸೀಕ್ವೆಲ್ ಮಾಡಲು ಕಾರಣವನ್ನು ನೀಡುತ್ತದೆ" ಎಂದಿದೆ.

ಇನ್ನು, ಸಿನಿಮಾ ಕುರಿತಾದ ಸಂದರ್ಶನವೊಂದರಲ್ಲಿ ಕಂಗನಾ ಈ ಚಿತ್ರವು ಜಯಲಲಿತಾ ಪ್ರಯಾಣದ ಬಗ್ಗೆ ಮತ್ತು ಪುರುಷ ಪ್ರಧಾನ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಮನಸ್ಥಿತಿಯನ್ನು ಬದಲಾಯಿಸಲು ಎಂದಿಗೂ ಉದ್ದೇಶಿಸಿಲ್ಲ ಎಂದು ಹೇಳಿದರು.

ಜಯಲಲಿತಾ ಹಲವಾರು ಬಾರಿ ಚುನಾವಣೆಯಲ್ಲಿ ಗೆದ್ದರು, ಮಾತ್ರವಲ್ಲದೆ ಮುಖ್ಯಮಂತ್ರಿಯಾದರು. ಮತ್ತು ರಾಜಕೀಯದಲ್ಲಿ ಅವರ ಗುರು ಅಥವಾ ಮಾರ್ಗದರ್ಶಕ ಎಂಜಿಆರ್ ಯಾವಾಗಲೂ ಅವರನ್ನು ಬೆಂಬಲಿಸುತ್ತಿದ್ದರು.

ಹಾಗಾಗಿ, ಮಹಿಳೆ ಜೀವನದಲ್ಲಿ ಬೆಳೆಯಲು ಪುರುಷರು ಸಹ ಕೆಲವು ಬಾರಿ ಹೇಗೆ ಬೆಂಬಲ ನೀಡುತ್ತಾರೆ ಎಂಬುದನ್ನು ಈ ಚಿತ್ರ ತೋರಿಸುತ್ತದೆ ಎಂದು ತಲೈವಿ ಸಿನಿಮಾ ಬಗ್ಗೆ ಹೇಳಿಕೊಂಡಿದ್ರು.

ತಲೈವಿಯಾಗಿ ಚಿತ್ರದಲ್ಲಿ ಕಂಗನಾ ರಣಾವತ್ ಜಯಲಲಿತಾ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು, ಹಿಂದಿ ಮತ್ತು ತೆಲುಗಿನಲ್ಲಿ ಚಿತ್ರವನ್ನು ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ, ಇದನ್ನು ಎಎಲ್ ವಿಜಯ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ : ಸಿನಿ ರಸಿಕರಿಗೆ ನಿರಾಸೆ​ ​: ರಾಜಮೌಳಿಯ 'RRR' ಚಿತ್ರ ಬಿಡುಗಡೆ ಮತ್ತೊಮ್ಮೆ ಮುಂದೂಡಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.