ETV Bharat / sitara

ಬಾಂದ್ರಾ ಠಾಣೆಗೆ ವಿಚಾರಣೆಗೆ ಹಾಜರಾದ ಕಂಗನಾ ರಣಾವತ್, ರಂಗೋಲಿ ಚಂಡೇಲ್​ - ಬಾಂದ್ರಾ ಠಾಣೆಯಲ್ಲಿ ಕಂಗನಾ ರನೌತ್ ವಿರುದ್ಧ ಪ್ರಕರಣ

ನಟಿ ಕಂಗನಾ ರಣಾವತ್​​ ಮತ್ತು ಅವರ ಸಹೋದರಿ ರಂಗೋಲಿ ಚಂಡೇಲ್ ವಿರುದ್ಧ ಬಾಂದ್ರಾ ಠಾಣೆಯಲ್ಲಿ ಪ್ರಕರಣವಿದ್ದು, ಈ ಸಂಬಂಧ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

Kangana Ranaut appears at Bandra police station for questioning Today
ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ಕಂಗನಾ ರನೌತ್
author img

By

Published : Jan 8, 2021, 9:56 AM IST

Updated : Jan 8, 2021, 2:28 PM IST

ಮುಂಬೈ : ಬಾಂದ್ರಾ ಪೊಲೀಸ್​ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಬಾಲಿವುಡ್​ ನಟಿ ಕಂಗನಾ ರಣಾವತ್ ಮತ್ತು ಸಹೋದರಿ ರಂಗೋಲಿ ಚಂಡೇಲ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಬಾಂದ್ರಾ ಪೊಲೀಸರು ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೂ, ವೈಯುಕ್ತಿಕ ಕಾರಣಗಳಿಂದ ಕಂಗನಾ ಹಾಜರಾಗಿರಲಿಲ್ಲ. ಈ ಕುರಿತು ಈಗಾಗಲೇ ಬಾಂಬೆ ಹೈಕೋರ್ಟ್​ಗೆ ಕಂಗನಾ ಮಾಹಿತಿ ನೀಡಿದ್ದರು, ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಕಂಗನಾ ರಣಾವತ್​ ವಿರುದ್ಧದ ಪ್ರಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸದಂತೆ ಮುಂಬೈ ಹೈಕೋರ್ಟ್ ಈಗಾಗಲೇ ಆದೇಶಿಸಿದೆ.

ಓದಿ : ಡಿಸಿ ಡಿಸೈನ್ ಕಂಪನಿ ಅಧ್ಯಕ್ಷ ದಿಲೀಪ್ ಛಾಬ್ರಿಯಾ ವಿರುದ್ಧ ಮತ್ತೆ ಎಫ್‌ಐಆರ್

ಈ ನಡುವೆ ಕಂಗನಾ ಬಾಲಿವುಡ್​ ಬಗ್ಗೆ ಹಲವು ವಿವಾದಾತ್ಮಕ ಟ್ವೀಟ್​, ಪೋಸ್ಟ್​ಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಟ್ವೀಟ್​ ಒಂದನ್ನು ಮಾಡಿದ್ದ ಕಂಗನಾ, ಬಾಲಿವುಡ್​ನಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಬಂಧ ಸರಿಯಿಲ್ಲ, ಎರಡು ಗುಂಪುಗಳಿವೆ. ಮುಸ್ಲಿಂ ಬಾಹುಳ್ಯದ ಬಾಲಿವುಡ್​ನಲ್ಲಿ ನಾನು ಹೆಸರು ಮಾಡಿದ್ದೇನೆ ಎಂದಿದ್ದರು.

ಕಂಗನಾ ಮತ್ತು ಅವರ ಸಹೋದರಿ ರಂಗೋಲಿ ಚಂಡೇಲ್ ವಿರುದ್ಧ ಬಾಂದ್ರಾ ಠಾಣೆಯಲ್ಲಿ ಪ್ರಕರಣವಿದೆ. ವಿಚಾರಣೆಗೆ ಹಾಜರಾಗದ ಕುರಿತು ಹೈಕೋರ್ಟ್ ಕಂಗನಾಗೆ ವಿನಾಯಿತಿ ನೀಡಿದ್ದರಿಂದ, ಸ್ವಲ್ಪ ಸಮಯ ಆರಾಮಾಗಿದ್ದರು, ಇಂದು ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

Last Updated : Jan 8, 2021, 2:28 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.