ಹೈದರಾಬಾದ್: ಮಾಲ್ಡೀವ್ಸ್ ಮಸ್ತಿ ಮುಗಿಸಿ ಹಿಂದಿರುಗಿದ ಬಾಲಿವುಡ್ ತಾರೆ ಜಾನ್ವಿ ಕಪೂರ್, ತಮ್ಮ ಮತ್ತೊಂದು ರಜಾ ದಿನದ ತನ್ನ ಸುಂದರವಾದ ಚಿತ್ರಗಳನ್ನು ಇನ್ಸ್ಟಾಗ್ರಾಂ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಸದ್ಯ ಹಾಲಿಡೇ ಮೋಡ್ನಲ್ಲಿರುವ ನಟಿ ಜಾನ್ವಿ, ಗುಡ್ ಲಕ್ ಜೆರಿ ಚಿತ್ರೀಕರಣದ ಪ್ಯಾಕ್ ಅಪ್ ಬಳಿಕ ಯುಎಸ್ನಲ್ಲಿರುವ ತನ್ನ ಸಹೋದರಿ ಖುಷಿ ಕಪೂರ್ ಭೇಟಿ ಮಾಡಿದ್ದರು. ಅಲ್ಲಿಂದ ಮಾಲ್ಡೀವ್ಸ್ಗೆ ಬಳಿಕ ಉದಯಪುರಕ್ಕೆ ತೆರಳಿದ್ದಾಳೆ. ಸದ್ಯ ಮತ್ತೆ ಬ್ಯಾಗ್ ಪ್ಯಾಕ್ ಮಾಡಿರುವ ಜಾನ್ವಿ ಏಪ್ರಿಲ್ 15 ರಂದು ಮತ್ತೆ ಗೋವಾಕ್ಕೆ ತೆರಳುವ ವಿಮಾನದಲ್ಲಿ ಹತ್ತಿದ್ದಾಳೆ ಎಂದು ವರದಿಯಾಗಿದೆ.
ತನ್ನ ಗ್ಯಾಂಗ್ನೊಂದಿಗೆ ಗೋವಾದಲ್ಲಿದ್ದಾಳೆ ಎಂದು ಹೇಳಲಾಗುವ ಜಾನ್ವಿ, ಸುಂದರವಾದ ಹೂವಿನ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಆಕೆ ಹೂವಿನ ಉಡುಪು ಧರಿಸಿದ್ದಾಳೆ. ಆ ಚಿತ್ರಕ್ಕೆ ಕಿಸ್ಸಸ್ ಫ್ರಂ ದಿ ಸನ್ ('ಸೂರ್ಯನಿಂದ ಕಿಸ್') ಎಂದು ಬರೆದು ಕೊಂಡಿದ್ದಾಳೆ.
- " class="align-text-top noRightClick twitterSection" data="
">
ಜಾನ್ವಿ ಈ ವರ್ಷಾರಂಭದಲ್ಲಿ ತನ್ನ ಗುಡ್ ಲಕ್ ಜೆರ್ರಿ ಚಿತ್ರದ ಚಿತ್ರೀಕರಣ ಮುಗಿಸಿಕೊಂಡಿದ್ದಾರೆ. ಮಲಯಾಳಂ ಚಿತ್ರ ಹೆಲೆನ್ನ ಹಿಂದಿ ರಿಮೇಕ್ನಲ್ಲಿ ಜಾನ್ವಿ ತನ್ನ ತಂದೆ ಬೋನಿ ಕಪೂರ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾಳೆ.