ಮುಂಬೈ: ಲಾಕ್ಡೌನ್ನಿಂದ ಮನೆಯೊಳಗೆ ಲಾಕ್ ಆಗಿರುವ ಸಿನಿಮಾ ಮಂದಿ ತಮ್ಮ ಬೇಸರ ಕಳೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಕೆಲ ನಟಿಯರಂತು ಪುಸ್ತಕಗಳ ಮೊರೆ ಹೋಗಿದ್ದಾರೆ.
- " class="align-text-top noRightClick twitterSection" data="
">
80ರ ದಶಕದ ಚೆಲುವೆ ಮಾಧುರಿ ದೀಕ್ಷಿತ್ ಹಾಗೂ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಲಾಕ್ಡೌನ್ ಸಮಯದಲ್ಲಿ ತಮ್ಮ ನೆಚ್ಚಿನ ಪುಸ್ತಕಗಳನ್ನು ಓದುವ ಮೂಲಕ ಲಾಕ್ಡೌನ್ ಸಮಯ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ. ಇಬ್ಬರೂ ತಾವು ಪುಸ್ತಕ ಓದುತ್ತಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಕಿಕ್ ನಟಿ ಜಾಕ್ವೆಲಿನ್ ನಿಕ್ ಹಾರ್ನ್ಬೈ ಅವರ ಫನ್ನಿ ಗರ್ಲ್ ಇಂಗ್ಲೀಷ್ ಪುಸ್ತಕ ಓದೋದ್ರಲ್ಲಿ ಕಳೆದ್ಹೋಗಿದ್ರೆ, ಧಕ್ ಧಕ್ ಬ್ಯೂಟಿ ಮಾಧುರಿ ದೀಕ್ಷಿತ್ ಸೌತ್ ಆಫ್ರಿಕಾದ ಫೇಮಸ್ ಕಾಮಿಡಿಯನ್ ಟ್ರೇವರ್ ನೋಹ್ನ ಆತ್ಮಚರಿತ್ರೆ ಬೋರ್ನ್ ಎ ಕ್ರೇಮ್ ಪುಸ್ತಕ ಓದೋದ್ರಲ್ಲಿ ಮಗ್ನರಾಗಿದ್ದಾರೆ. ಅಲ್ಲದೇ ಈ ಲಾಕ್ಡೌನ್ ಸಮಯದಲ್ಲಿ ಓದಿದ ಪುಸ್ತಕಗಳು ತನಗೆ ದೈನಂದಿನ ಲೈಫ್ನಲ್ಲಿ ಕೃತಜ್ಞತೆ ಹೇಳುವ ಮನೋಭಾವ ಮೂಡಿಸಿದೆ ಎಂದು ಹೇಳಿಕೊಂಡಿದ್ದಾರೆ.