ETV Bharat / state

ಉಡುಪಿ : ಹಿಟ್ ಆ್ಯಂಡ್ ರನ್, ಬೈಕಿಗೆ ಡಿಕ್ಕಿ ಹೊಡೆದ ಜೀಪ್; ಸವಾರ ಸಾವು - HIT AND RUN

ಉಡುಪಿಯ ಬೆಳಪುವಿನ ಮಿಲಿಟರಿ ಕಾಲೋನಿಯಲ್ಲಿ ಬೈಕ್​ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿದ್ದಾರೆ.

Accused Prajwal Shetty
ಆರೋಪಿ ಪ್ರಜ್ವಲ್ ಶೆಟ್ಟಿ (ETV Bharat)
author img

By ETV Bharat Karnataka Team

Published : Nov 17, 2024, 5:20 PM IST

Updated : Nov 17, 2024, 5:53 PM IST

ಉಡುಪಿ : ಬೈಕ್​ಗೆ ಡಿಕ್ಕಿ ಹೊಡೆದ ನಂತರ ಜೀಪ್ ನಿಲ್ಲಿಸದೇ ಚಾಲಕ ಪರಾರಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಳಪುವಿನ ಮಿಲಿಟರಿ ಕಾಲೋನಿಯಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೃತರನ್ನು ಬೆಳಪುವಿನ ಮೊಹಮ್ಮದ್ ಹುಸೇನ್ (39) ಎಂದು ಗುರುತಿಸಲಾಗಿದೆ. ಇವರು ನ. 13 ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಪುಂಚಲಕಾಡು ಬೆಳಪು ರಸ್ತೆಯಲ್ಲಿ ಹೋಗುತ್ತಿದ್ದಾಗ ಬೆಳಪು ಕಡೆಗೆ ಬರುತ್ತಿದ್ದ ಜೀಪ್ ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತಕ್ಕೆ ಕಾರಣವಾದ ಚಾಲಕನು ವಾಹನ ನಿಲ್ಲಿಸದೇ, ತಮ್ಮ ಮಗನನ್ನೂ ಆಸ್ಪತ್ರೆಗೆ ಸಾಗಿಸದೇ ಪರಾರಿಯಾಗಿದ್ದಾನೆ ಎಂದು ಮೃತ ಯುವಕನ ತಂದೆ ಉಮ್ಮರಬ್ಬ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ 83/2024 ಕಲಂ: 281,125(b) BNS and 134(a&b) IMV Act ನಂತೆ ಪ್ರಕರಣ ದಾಖಲಿಸಲಾಗಿದೆ.

ಬೈಕ್ -ಜೀಪ್ ಅಪಘಾತದಿಂದಾಗಿ ಸವಾರ ಮೃತ (ETV Bharat)

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ಆರೋಪಿ ಪ್ರಜ್ವಲ್ ಶೆಟ್ಟಿ ಹಾಗೂ ಜೀಪನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಹುಸೇನ್ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಹುಸೇನ್ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಮಂಡ್ಯ: ಕಾರು-ಬಸ್​ ಅಪಘಾತ; ರಾಷ್ಟ್ರಪ್ರಶಸ್ತಿ ವಿಜೇತ ಬಾಲನಟ ರೋಹಿತ್​ಗೆ ಗಂಭೀರ ಗಾಯ

Last Updated : Nov 17, 2024, 5:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.