ETV Bharat / state

ಶಿವಮೊಗ್ಗ: ಕಾಯಕಯೋಗಿ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ, ಗಣ್ಯರ ಸಂತಾಪ - SHIVALINGESHWAR SWAMIJI PASSES AWAY

ಬಳ್ಳಿಗಾವಿ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಗಳಾಗಿದ್ದ ಶಿವಲಿಂಗೇಶ್ವರ ಸ್ವಾಮೀಜಿ ಭಾನುವಾರ ಲಿಂಗೈಕ್ಯರಾಗಿದ್ದಾರೆ.

ಶಿವಲಿಂಗೇಶ್ವರ ಸ್ವಾಮೀಜಿ
ಶಿವಲಿಂಗೇಶ್ವರ ಸ್ವಾಮೀಜಿ (ETV Bharat)
author img

By ETV Bharat Karnataka Team

Published : Nov 17, 2024, 5:43 PM IST

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಯಾಗಿದ್ದ ಶಿವಲಿಂಗೇಶ್ವರ ಸ್ವಾಮೀಜಿ ಭಾನುವಾರ ಬೆಳಗ್ಗೆ ಹುಬ್ಬಳ್ಳಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.

ಶಿವಲಿಂಗೇಶ್ವರ ಸ್ವಾಮೀಜಿ ಅವರು ಸೊರಬ ತಾಲೂಕಿನ ಗೆರೆಕೊಪ್ಪ ಬೆಪ್ಪಗೊಂಡನಕೊಪ್ಪ ಇಂದೂಧರೇಶ್ವರ ಮಠ, ಬೀದರ್​ ಜಿಲ್ಲೆ ಬಸವಕಲ್ಯಾಣದ ಕೆಳಗಿ ಪೀಠದ ಪೀಠಾಧಿಪತಿಯೂ ಆಗಿದ್ದರು. ಶಿವಲಿಂಗೇಶ್ವರ ಸ್ವಾಮೀಜಿ, ವಚನಕಾರ ಅಲ್ಲಮಪ್ರಭು ಜನ್ಮಸ್ಥಳ ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯ ವಿರಕ್ತಮಠವನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಹೊಂದಿದ್ದರು. ಅಲ್ಲಮಪ್ರಭು ಅವರ ಮನೆಯನ್ನು ಅನುಭವ ಮಂಟಪವನ್ನಾಗಿಸಲು ಸಿದ್ಧತೆ ನಡೆಸಿದ್ದರು. ಗ್ರಂಥ ಪ್ರಕಟಣೆಗಳ ಮೂಲಕ ವಚನ ಸಂರಕ್ಷಣೆಗೆ ಮುಂದಾಗಿದ್ದರು.

ಶಿವಲಿಂಗೇಶ್ವರ ಸ್ವಾಮೀಜಿ ಅವರ ನಿಧನದಿಂದ ಅವರ ಅಪಾರ ಭಕ್ತ ಸಮೂಹ ದುಃಖಿತರಾಗಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಸಂಸದ ಬಿ. ವೈ. ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು‌ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಉಡುಪಿ : ಹಿಟ್ ಆ್ಯಂಡ್ ರನ್, ಬೈಕಿಗೆ ಡಿಕ್ಕಿ ಹೊಡೆದ ಜೀಪ್; ಸವಾರ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.