ಆಯುಷ್ಮಾನ್ ಖುರಾನಾ ನಟಿಸಿರುವ 'ಡ್ರೀಮ್ ಗರ್ಲ್' ಚಿತ್ರದ ಟ್ರೇಲರ್ ಬಿಟೌನ್ಲ್ಲಿ ಸಿಕ್ಕಾಪಟ್ಟೆ ಟಾಕ್ ಶುರು ಮಾಡಿದೆ. ಔಟ್ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ ಟ್ರೇಲರ್ ಚಿತ್ರದ ಮೇಲಿನ ನಿರೀಕ್ಷೆ ದುಪ್ಟಟ್ಟುಗೊಳಿಸಿದೆ.
ಈ ವರ್ಷ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ ಡ್ರೀಮ್ ಗರ್ಲ್. ಟ್ರೇಲರ್ನಲ್ಲಿ ಅನಾವರಣಗೊಂಡಿರುವಂತೆ ಪಕ್ಕಾ ಎಂಟರ್ಟ್ರೈನರ್ ಮೂವಿ. ಹಾಸ್ಯದ ಹೊನಲು ಹರಿಸುವ ಈ ಚಿತ್ರಕ್ಕೆ ಸ್ಫೂರ್ತಿ ಏನು ಎಂಬುದು ಇದೀಗ ರಿವೀಲ್ ಆಗಿದೆ.
ಇತ್ತೀಚಿಗೆ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಡ್ರೀಮ್ ಗರ್ಲ್ ಬಗ್ಗೆ ಇಂಟ್ರೆಸ್ಟಿಂಗ್ ಕಹಾನಿ ಹೇಳಿದ್ದಾರೆ ನಿರ್ದೇಶಕ ರಾಜ್ ಶಾಂಡಿಲ್ಯ. ಚಿತ್ರದ ಕಥೆಗೆ ಫೇಕ್ ಫೇಸ್ಬುಕ್ ಅಕೌಂಟ್ಗಳೇ ಸ್ಫೂರ್ತಿಯಂತೆ. ಹುಡುಗಿಯರ ಹೆಸರಿನ ಸಾಕಷ್ಟು FB ಅಕೌಂಟ್ಗಳು ಸಕ್ರಿಯವಾಗಿರುತ್ತವೆ. ಎಲ್ಲರೂ ಕೂಡ ಒಂದಿಲ್ಲೊಂದು ನಕಲಿ ಹೆಸರಿನ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿರುತ್ತಾರೆ. ಇಂತಹ ನಕಲಿ ಅಕೌಂಟ್ಗಳು ಹುಡುಗರನ್ನು ಮೋಸ ಮಾಡುತ್ತವೆ, ಹಣ ಪೀಕುತ್ತವೆ. ಇದನ್ನೇ ಹಾಸ್ಯವಾಗಿ ತೋರಿಸಿದ್ದೇವೆ. ನಮ್ಮ ಉದ್ದೇಶ ನೋಡುಗರನ್ನು ಎಂಟರ್ಟ್ರೈನ್ ಮಾಡುವುದೊಂದೆ ಎಂದಿದ್ದಾರೆ ನಿರ್ದೇಶಕರು.
- " class="align-text-top noRightClick twitterSection" data="">
ಡ್ರೀಮ್ ಗರ್ಲ್ ಚಿತ್ರದಲ್ಲಿ ನಟ ಆಯುಷ್ಮಾನ್ ಖುರನಾ ಪೂಜಾ ಹೆಸರಿನಲ್ಲಿ ಕಸ್ಟಮರ್ ಕೇರ್ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಟ್ರೇಲರ್ನಲ್ಲಿ ಕಂಡಂತೆ ಅವರ ಈ ಪಾತ್ರ ಸಖತ್ ವರ್ಕೌಟ್ ಆಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತೆ.