ಮುಂಬೈ: ಗ್ರೀಕ್ ಮೂಲಕದ ನಟಿ ಎಲ್ಲಿ ಅವಿರಮ್ ಬಾಲಿವುಡ್ ನಟ ಆಮೀರ್ ಖಾನ್ ಜೊತೆ 'ಕೊಯಿ ಜಾನೇ ನ' ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ಆಮೀರ್ ಜೊತೆಗಿನ ಆ್ಯಕ್ಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಹರ್ ಫನ್ ಮೌಲಾ.. ಹಾಡಿನಲ್ಲಿ ನಟಿಸಿರುವ ಎಲ್ಲಿ ಅವರಿಮ್, ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್, ಚಿತ್ರೀಕರಣದ ವೇಳೆ ಎಂದಿಗೂ ನಾನು ಭಯ ಪಡುವಂತೆ ನಡೆದುಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿನಿಮಾ ಮುಹೂರ್ತಕ್ಕಾಗಿ ಸಹ ನಟಿಯರೊಂದಿಗೆ ಅಯೋಧ್ಯೆಗೆ ಹಾರಿದ ಅಕ್ಕಿ
"ಸಾಮಾನ್ಯವಾಗಿ ಹೊಸ ನಟ-ನಟಿಯರು ಹಿರಿಯ ನಟರು, ಸೂಪರ್ ಸ್ಟಾರ್ಗಳ ಜೊತೆ ನಟಿಸುವಾಗ ಹೆದರುತ್ತಾರೆ. ಆದರೆ 5 ದಿನಗಳ ಚಿತ್ರೀಕರಣದಲ್ಲಿ ಅವರು ಎಂದಿಗೂ ನಾನು ಭಯಪಡುವಂತೆ ನಡೆದುಕೊಳ್ಳಲಿಲ್ಲ. ಅವರು ಸ್ಟಾರ್ ನಟ ಆದರೂ ಉತ್ತಮ ವ್ಯಕ್ತಿತ್ವದ ವ್ಯಕ್ತಿ. ಹೊಸ ನಟಿ ಆದರೂ ಅವರು ನನಗೆ ಬಹಳ ಪ್ರೋತ್ಸಾಹ ನೀಡಿದರು. ಅವರೊಂದಿಗೆ ಕೆಲಸ ಮಾಡಿದ್ದು ಉತ್ತಮ ಅನುಭವ" ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಹಾಡು, ಸಿನಿಮಾದ ಹೈಲೈಟ್ ಆಗಿದ್ದು ಏಪ್ರಿಲ್ 2 ರಂದು 'ಕೋಯಿ ಜಾನೇ ನಾ' ಬಿಡುಗಡೆಯಾಗಲಿದೆ. ಚಿತ್ರವನ್ನು ಅಮಿನ್ ಹಜೆ ನಿರ್ದೇಶಿಸಿದ್ದಾರೆ. ಇದೊಂದು ಸೈಕಲಾಜಿಕಲ್ ಸಸ್ಪೆನ್ಸ್ ಸಿನಿಮಾವಾಗಿದ್ದು ಅಮಿನ್ ಹಜೆ ಫಿಲ್ಮ್ ಕಂಪನಿ ಹಾಗೂ ಭೂಷಣ್ ಕುಮಾರ್ ಟಿ ಸೀರೀಸ್ ಬ್ಯಾನರ್ ಅಡಿ ಸಿನಿಮಾವನ್ನು ನಿರ್ಮಿಸಲಾಗಿದೆ. ಕುನಾಲ್ ಕಪೂರ್ ಹಾಗೂ ಅಮ್ಯರ ದಸ್ತೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.