ಮುಂಬೈ: ಕೊರೊನಾ ಸಾಂಕ್ರಾಮಿಕ ರೋಗದಿಂದ ವಂಚಿತ ಕುಟುಂಬಗಳಿಗೆ ಸಹಾಯ ಮಾಡುವ ತಮ್ಮ ಮಾನವೀಯ ಕಾರ್ಯವನ್ನು ಬಾಲಿವುಡ್ ನಟ ಸೋನು ಸೂದ್ ಮುಂದುವರೆಸಿದ್ದಾರೆ.
ಭಾನುವಾರ ತಮ್ಮ ಮನೆಯ ಹೊರಗೆ ಸಹಾಯ ಕೋರಿ ಬಂದ ಜನರನ್ನು ಸೋನು ಭೇಟಿಯಾದರು. ಈ ವೇಳೆ ಜನರ ಸಮಸ್ಯೆಗಳನ್ನು ಆಲಿಸಿದರು.
ವಲಸಿಗರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವುದರಿಂದ ಹಿಡಿದು ರೋಗಿಗಳಿಗೆ ಔಷಧಿಗಳು ಮತ್ತು ಇತರ ಕೊರೊನಾ ಪರಿಹಾರ ಸಂಪನ್ಮೂಲಗಳನ್ನು ವ್ಯವಸ್ಥೆ ಮಾಡಿದ ಕೀರ್ತಿ ಸೋನು ಸೂದ್ಗೆ ಸಲ್ಲುತ್ತದೆ.