ETV Bharat / sitara

ಅನನ್ಯಾ ಪಾಂಡೆ ಬಗ್ಗೆ ಆಸಕ್ತಿದಾಯಕ ವಿಚಾರ ಬಹಿರಂಗಪಡಿಸಿದ ದೀಪಿಕಾ ಪಡುಕೋಣೆ - ಅನನ್ಯ ಪಾಂಡೆ ಬಗ್ಗೆ ಆಸಕ್ತಿದಾಯಕ ವಿಚಾರ ಬಹಿರಂಗ

ದೀಪಿಕಾ ಪಡುಕೋಣೆ ತಮ್ಮ ಗೆಹ್ರೈಯಾನ್ ಸಹನಟಿ ಅನನ್ಯಾ ಪಾಂಡೆ ಬಗ್ಗೆ ಗೊತ್ತಿಲ್ಲದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಚಿತ್ರದ ಪ್ರಚಾರ ಸಂದರ್ಶನದಲ್ಲಿ, ಅನನ್ಯಾ ತನ್ನ ಆಹಾರವನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ದೀಪಿಕಾ ಹೇಳಿದ್ದಾರೆ.

Deepika Padukone Reveals Interesting Trivia About Ananya Panday
ಅನನ್ಯ ಪಾಂಡೆ ಬಗ್ಗೆ ಆಸಕ್ತಿದಾಯಕ ವಿಚಾರ ಬಹಿರಂಗಪಡಿಸಿದ ದೀಪಿಕಾ ಪಡುಕೋಣೆ
author img

By

Published : Feb 18, 2022, 8:59 PM IST

ಹೈದರಾಬಾದ್: ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅಭಿನಯದ ಗೆಹ್ರೈಯಾನ್ ಸಿನಿಮಾ ​ ಒಟಿಟಿ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಪಡೆದಿದೆ. ಸಿನಿಮಾದಲ್ಲಿ ದೀಪಿಕಾ, ಅನನ್ಯಾ ಪಾಂಡೆ ಸೋದರ ಸಂಬಂಧಿಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರತಂಡ ಪರಸ್ಪರ ಮನೆಗಳಿಗೆ ಭೇಟಿ ನೀಡಿ ಸುತ್ತಾಡಿದ್ದು, ಈ ವೇಳೆ, ಅನನ್ಯಾ ಬಗ್ಗೆ ತಿಳಿಯದ ಸಂಗತಿಯನ್ನು ದೀಪಿಕಾ ಹಂಚಿಕೊಂಡಿದ್ದಾರೆ.

ಚಿತ್ರದ ಪ್ರಚಾರ ಸಂದರ್ಶನದಲ್ಲಿ, ಅನನ್ಯಾ ತನ್ನ ಆಹಾರವನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂಬ ವಿಷಯವನ್ನು ದೀಪಿಕಾ ಬಹಿರಂಗ ಪಡಿಸಿದ್ದಾರೆ. ಗೆಹ್ರೈಯಾನ್ ಚಿತ್ರೀಕರಣದ ದಿನಗಳ ಘಟನೆಯನ್ನು ವಿವರಿಸಿದ ದೀಪಿಕಾ, ಅನನ್ಯಾ ರಾತ್ರಿಯ ಊಟಕ್ಕೆ ಕೀಮಾ ಪಾವೊ ತಿನ್ನಲಿದ್ದಾಳೆ ಎಂದು ತಿಳಿದ ನಂತರ ಅವಳೇ ಒಮ್ಮೆ ತಮ್ಮನ್ನು ಅವರ ಮನೆಗೆ ಆಹ್ವಾನಿಸಿದಳು. ಆದರೆ ನೀವು ಬರಲು ಬಯಸಿದರೆ ದಯವಿಟ್ಟು ಬನ್ನಿ, ಆದರೆ ನಿಮ್ಮೆಲ್ಲರಿಗೂ ಸಾಕಷ್ಟು ಪಾವೊ ಇಲ್ಲ ಎಂದಿದ್ದಳು ಎಂದು ಹೇಳಿದರು.

ಚಿತ್ರಿಕರಣದ ವೇಳೆ ಚಿತ್ರತಂಡ ನಮಗಾಗಿ ಬೇರೆ ಊಟವನ್ನು ಆರ್ಡರ್ ಮಾಡಿತ್ತು. ಅದಕ್ಕಾಗಿ ನಾವು 40 ನಿಮಿಷಗಳಿಂದ ಕಾಯುತ್ತಿದ್ದೆವು. ಆದರೆ, ಅನನ್ಯಾ ಮಾತ್ರ ತನ್ನ ಊಟವನ್ನು ಯಾರಿಗೂ ನೀಡದೇ ತಿನ್ನುತ್ತಲೇ ಇದ್ದಳು ಎಂದು ತಮಾಷೆಯಾಗಿ ದೀಪಿಕಾ ಹೇಳಿದರು. ಆಗ ಅನನ್ಯಾ ತಾನು ಶಕುನ್ ಬಾತ್ರಾಗೆ 2-3 ಮಟರ್ (ಬಟಾಣಿ) ನೀಡಿದ್ದೇನೆ ಎಂದು ಹೇಳಿ ನಕ್ಕರು.

ಗೆಹ್ರೈಯಾನ್ ಚಿತ್ರಕ್ಕೆ ಜನರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದೀಪಿಕಾ, ಅನನ್ಯಾ, ಸಿದ್ಧಾಂತ್ ಚತುರ್ವೇದಿ ಮತ್ತು ಧೈರ್ಯ ಕರ್ವಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳೆಯೊಬ್ಬಳು ಜೀವನದಲ್ಲಿ ಒಂದು ಕವಲುದಾರಿಯಲ್ಲಿ ತನ್ನನ್ನು ತಾನು ಕಂಡುಕೊಳ್ಳುವ ಕುರಿತ ಕಥೆಯನ್ನು ಗಹ್ರೈಯಾನ್ ಹೊಂದಿದೆ.

ಇದನ್ನೂ ಓದಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿಯೇ ಅತಿದೊಡ್ಡ OTT ಒಪ್ಪಂದ ಮಾಡಿಕೊಳ್ತಾ ಲೈಗರ್ ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.