ETV Bharat / sitara

ಮತ್ತೊಂದು ಹೊಸ ಚಿತ್ರದಲ್ಲಿ ಜೊತೆಯಾಗುತ್ತಿರುವ ದೀಪ್​​​ವೀರ್​​​​ - ರೋಹಿತ್ ಶೆಟ್ಟಿ ನಿರ್ದೇಶನದ ಸರ್ಕಸ್

'83' ಚಿತ್ರದಲ್ಲಿ ರಣವೀರ್ ಹಾಗೂ ದೀಪಿಕಾ ಜೋಡಿಯಾಗಿ ನಟಿಸುತ್ತಿದ್ದು ಇದೀಗ ಹೊಸ ಸಿನಿಮಾದಲ್ಲಿ ಕೂಡಾ ಇಬ್ಬರೂ ತೆರೆ ಹಂಚಿಕೊಳ್ಳುತ್ತಿದ್ದಾರೆ. ರೋಹಿತ್ ಶೆಟ್ಟಿ ಅಭಿನಯದ 'ಸರ್ಕಸ್' ಚಿತ್ರದಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

Deepveer
ದೀಪ್​​​ವೀರ್​​​​
author img

By

Published : Feb 19, 2021, 1:20 PM IST

ಹೈದರಾಬಾದ್​​: ರೋಹಿತ್​ ಶೆಟ್ಟಿ ಹಾಗೂ ರಣವೀರ್ ಸಿಂಗ್ ಮತ್ತೊಮ್ಮೆ 'ಸರ್ಕಸ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದು ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡಾ ನಟಿಸುತ್ತಿರುವುದು ಬಹುತೇಕ ಖಚಿತವಾಗಿದೆ. ವಿಲಿಯಂ ಷೇಕ್ಸ್​​ಪಿಯರ್ 'ಕಾಮಿಡಿ ಆಫರ್ ಎರರ್ಸ್​' ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ದೀಪಿಕಾ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.

ಇದನ್ನೂ ಓದಿ: "ನಿಮ್ಮ ಪ್ರೀತಿ ಅಭಿಮಾನಕ್ಕೆ ಕೊನೆಯವರೆಗೂ ಚಿರಋಣಿ ಆಗಿರ್ತೀನಿ"ಎಂದ ಚಿರು

ಮತ್ತೊಂದೆಡೆ ರಣವೀರ್ ಹಾಗೂ ದೀಪಿಕಾ '83' ಚಿತ್ರದಲ್ಲಿ ಕೂಡಾ ಪತಿ-ಪತ್ನಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೂಡಾ ಅವರು ಜೋಡಿಗಳಾಗಿ ನಟಿಸುತ್ತಿದ್ದು ತೆರೆ ಮೇಲೆ ಇಬ್ಬರ ಕಾಂಬಿನೇಷನ್ ಹೇಗಿರಲಿದೆ ಎಂಬುದನ್ನು ಮತ್ತೊಮ್ಮೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ವರ್ಷ ನವೆಂಬರ್​​​​ನಲ್ಲಿ ಈ 'ಸರ್ಕಸ್​' ಚಿತ್ರೀಕರಣ ಆರಂಭವಾಗಿದೆ. ಮುಂಬೈ ಜೊತೆಗೆ ಊಟಿ, ಗೋವಾ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಡಬಲ್ ರೋಲ್​​​ನಲ್ಲಿ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ, ಜಾಕ್ವೆಲಿನ್ ಫರ್ನಾಂಡಿಸ್, ವರುಣ್ ಶರ್ಮಾ, ಜಾನಿ ಲಿವರ್, ಸಿದ್ದಾರ್ಥ್ ಜಾಧವ್ ಹಾಗೂ ಇನ್ನಿತರರು ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೇ ವರ್ಷದ ಅಂತ್ಯದಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ 'ಸರ್ಕಸ್' ಚಿತ್ರವನ್ನು ಹೊರತುಪಡಿಸಿ ಬಾಲಿವುಡ್​​ನಲ್ಲಿ 1982 ರಲ್ಲಿ ಸಂಜೀವ್ ಕುಮಾರ್, ದೇವನ್ ವರ್ಮಾ ನಟಿಸಿದ್ದ ಅಂಗೂರ್, 1968 ರಲ್ಲಿ ಕಿಶೋರ್ ಕುಮಾರ್ ಹಾಗೂ ಅಸಿತ್ ಸೇನ್ ನಟಿಸಿದ್ದ ದೊ ದೋನಿ ಚಾರ್​​​​​​ ಚಿತ್ರದಲ್ಲಿ ಕೂಡಾ ವಿಲಿಯಂ ಷೇಕ್ಸ್​​​ಪಿಯರ್ ಬರೆದ ಕಥೆಗಳನ್ನು ಅಳವಡಿಸಿಕೊಳ್ಳಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.