ಸದಾ ಒಂದಿಲ್ಲೊಂದು ವಿಷಯಗಳಿಂದ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಇದೀಗ ಮತ್ತೊಮ್ಮೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದು, ಇದರ ಜೊತೆಗೆ ಟ್ವಿಟರ್ನಲ್ಲಿ ಅವರ ವಿರುದ್ಧ ಟ್ರೆಂಡ್ವೊಂದು ಶುರುವಾಗಿದ್ದು, ಸಿನಿಮಾ ರಂಗದಿಂದ ಬಹಿಷ್ಕಾರ ಹಾಕುವಂತೆ ಟ್ವಿಟರ್ ಟ್ರೆಂಡ್ ಶುರುವಾಗಿದೆ.
ರಾಧಿಕಾ ಆಪ್ಟೆ ನಟನೆ ಮಾಡಿದ್ದ ಪರ್ಚೆಡ್ ಚಿತ್ರದಲ್ಲಿ ಬೆತ್ತಲಾಗಿ ಕಾಣಿಸಿಕೊಂಡಿದ್ದಳು. 2016ರಲ್ಲಿ ಈ ಚಿತ್ರ ತೆರೆ ಕಂಡಿದ್ದೂ, ಅದರಲ್ಲಿನ ವಿಡಿಯೋ ತುಣಕವೊಂದು ಇದೀಗ ಹೆಚ್ಚು ಹರಿದಾಡುತ್ತಿರುವ ಕಾರಣ ಅನೇಕ ನೆಟ್ಟಿಗರು ಅವರ ವಿರುದ್ಧ ತಿರುಗಿಬಿದ್ದಿದ್ದಾರೆ. ಇದು ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು, ಇವರ ವಿರುದ್ಧ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
-
THEY ARE AGAINST OUR CULTURE😡@YogiDevnath2#BoycottRadhikaApte pic.twitter.com/okKnRvlcVQ#BoycottRadhikaApte
— Rahul Jaiswal (@Rahul22578409) August 13, 2021 " class="align-text-top noRightClick twitterSection" data="
">THEY ARE AGAINST OUR CULTURE😡@YogiDevnath2#BoycottRadhikaApte pic.twitter.com/okKnRvlcVQ#BoycottRadhikaApte
— Rahul Jaiswal (@Rahul22578409) August 13, 2021THEY ARE AGAINST OUR CULTURE😡@YogiDevnath2#BoycottRadhikaApte pic.twitter.com/okKnRvlcVQ#BoycottRadhikaApte
— Rahul Jaiswal (@Rahul22578409) August 13, 2021
'Boycott Radhika Apte' ಟ್ರೆಂಡ್ ಶುರುವಾಗಿದ್ದು, ತಕ್ಷಣವೇ ಅವರಿಗೆ ಸಿನಿಮಾ ರಂಗದಿಂದ ಹೊರಹಾಕಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಿತ್ರಗಳಲ್ಲಿ ಅವರು ನಟನೆ ಮಾಡುತ್ತಿದ್ದಾರೆ ಎಂಬ ವಾದ ಕೇಳಿ ಬಂದಿದೆ.
ಪರ್ಚೆಡ್ ಚಿತ್ರದ ಪೋಸ್ಟರ್ನಲ್ಲಿ ನಟಿ ರಾಧಿಕಾ ಅಪ್ಟೆ ನಟ ಅದಿಲ್ ಹುಸೇನ್ ಜೊತೆಗಿನ ಪೋಟೋದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಳು. ಇದಕ್ಕೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಇದೇ ಕಾರಣಕ್ಕೆ ಟ್ವಿಟರ್ನಲ್ಲಿ ಈಗ Boycott Radhika Apte ಟ್ರೆಂಡ್ ಆಗಿದೆ.
ರಾಧಿಕಾ ಪರ್ಚೆಡ್ ಚಿತ್ರದಲ್ಲಿ ಇಂಟಿಮೇಟ್ ದೃಶ್ಯವೊಂದರಲ್ಲಿ ಟಾಪ್ಲೆಸ್ ಆಗಿ ಕಾಣಿಸಿಕೊಂಡಿದ್ದು, ಇದರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಶ್ಲೀಲ ವಿಷಯ ಹೆಚ್ಚು ಪ್ರಸಾರ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಕೂಡ ಅನೇಕ ರೀತಿಯ ಬೋಲ್ಡ್ ಚಿತ್ರಗಳಲ್ಲಿ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದು, ಇದೀಗ ಅವರ ವಿರುದ್ಧ ಹೆಚ್ಚಿನ ಆಕ್ರೋಶ ವ್ಯಕ್ತವಾಗುತ್ತಿದೆ.
ರಾಧಿಕಾ ಆಪ್ಟೆ ನಟನೆಯ 'ದಿ ವೆಡ್ಡಿಂಗ್ ಗೆಸ್ಟ್' ಸಿನಿಮಾದಲ್ಲೂ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿನ ಹಸಿಬಿಸಿ ಸೀನ್ಗಳು, ಬೋಲ್ಡ್ ಫೋಟೋ ಲೀಕ್ ಆಗಿದ್ದವು. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹರಿದಾಡುತ್ತಿದ್ದ ಈ ವಿಡಿಯೋ ತುಣುಕುಗಳು ರಾಧಿಕಾ ಬಗ್ಗೆ ನೆಗೆಟಿವ್ ವೈಬ್ಸ್ ಕ್ರಿಯೇಟ್ ಮಾಡಿದ್ದವು.
ಇದನ್ನೂ ಓದಿರಿ: ಎದ್ದು ನಿಂತು ಚಪ್ಪಾಳೆ: ಕನ್ನಡಿಗನ ಶತಕದಾಟಕ್ಕೆ ಸಹ ಆಟಗಾರರು ಅಭಿನಂದಿಸಿದ್ದು ಹೀಗೆ!