ETV Bharat / sitara

ಟೀಕೆ ಮಾಡಿದ್ರೇ ಸೋನಾಕ್ಷಿ ಸುಮ್ನಿರಲ್ಲ.. ಅಂಥವರ ಬಾಯಿನೇ ಮುಚ್ಚಿಸ್ತಾರೆ.. ಹೇಗಂತೀರಾ? - ಸೋಷಿಯಲ್ ಮೀಡಿಯಾ

ನಟಿ ಸೋನಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ 27 ಲಕ್ಷ ಫಾಲೋವರ್ಸ್‌ನ​ ಹೊಂದಿದ್ದಾರೆ. ತಮ್ಮ ಅಭಿಮಾನಿಗಳಿಂದ ಬೆಟ್ಟದಟ್ಟು ಪ್ರೀತಿಯನ್ನು ಪಡೆದಿದ್ದಾರೆ. ಇದರ ಜತೆಗೆ ಕೆಲವರು ಇವರನ್ನು ಟೀಕಿಸುತ್ತಾರೆ. ಇಂತಹವರನ್ನು ಹಿಂದೆ ಮುಂದೆ ನೋಡದೇ ಬ್ಲಾಕ್ ಮಾಡಿ ಬಿಡ್ತಾರೆ.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ( ಚಿತ್ರಕೃಪೆ : ಇನ್​ಸ್ಟಾಗ್ರಾಂ )
author img

By

Published : Mar 27, 2019, 10:54 AM IST

ಮುಂಬೈ : ಸೋಷಿಯಲ್ ಮೀಡಿಯಾದಲ್ಲಿ ಹೊಗಳಿಗೆ ತೆಗಳಿಕೆ ಕಾಮನ್​​. ಇವುಗಳನ್ನು ಸೆಲಿಬ್ರಿಟಿಗಳು ಸಮನಾಗಿ ಸ್ವೀಕರಿಸಿ ಮುನ್ನೆಡೆಯಬೇಕಾಗುತ್ತೆ.

ಸಾಕಷ್ಟು ಜನ ಟ್ರೋಲ್​ಗಳಿಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಿಲ್ಲ. ಆಡಿಕೊಳ್ಳೋರು ಆಡಿಕೊಳ್ಳಲಿ ಬಿಡಿ ಅಂತಾ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ. ಆದರೆ, ಕೆಲವೊಂದಿಷ್ಟು ತಾರೆಯರು ಟೀಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ವಿರೋಧಿಗಳಿಗೆ ಸರಿಯಾದ ಪಂಚ್​​ ಕೊಟ್ಟು ಬಾಯಿ ಮುಚ್ಚಿಸುತ್ತಾರೆ. ಇನ್ನೂ ಕೆಲವರು ಸಾಕಪ್ಪಾ ಈ ಸೋಷಿಯಲ್ ಮೀಡಿಯಾ ಸಹವಾಸ ಎಂದು ನಿರ್ಗಮಿಸಿ ಬಿಡುತ್ತಾರೆ.ಸ್ಯಾಂಡಲ್​​​ವುಡ್​​ನ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ, ನಟಿ ಮೇಘನಾ ಗಾಂವ್ಕರ್ ಸೇರಿದಂತೆ ಸಾಕಷ್ಟು ಸೆಲಿಬ್ರಿಟಿಗಳು ಟ್ರೋಲಿಗರ ಕಾಟಕ್ಕೆ ಬೇಸತ್ತು ಸೋಷಿಯಲ್ ಮೀಡಿಯಾಗಳಿಗೆ ಗುಡ್​ಬೈ ಹೇಳಿದ್ದುಂಟು.

ಈಗ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಸೋಷಿಯಲ್ ಮೀಡಿಯಾ ಬಾಯ್ಬಡುಕರಿಗೆ ಹೇಗೆ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅವರು ತಮ್ಮ ವಿರೋಧಿಗಳಿಗೆ ಮುಟ್ಟಿ ನೋಡಿಕೊಳ್ಳುವಂತಹ ಖಡಕ್ ಉತ್ತರ ನೀಡುತ್ತಾರಂತೆ. ಜತೆಗೆ ಅವರನ್ನು ನಿರ್ಬಂಧಿಸುತ್ತಾರಂತೆ (ಬ್ಲಾಕ್ ಮಾಡ್ತಾರಂತೆ).

ಪ್ರಾರಂಭದಲ್ಲಿ ನೆಗೆಟಿವ್ ಕಾಮೆಂಟ್​ಗಳನ್ನು ಸೀರಿಯಸ್​ ಆಗಿ ಓದುತ್ತಿದ್ದ ಸೋನು, ಈ ಜನ ಯಾವ ಆಧಾರದ ಮೇಲೆ ಹೀಗೆಲ್ಲ ಮಾತಾಡ್ತಾರೆ ಅಂತಾ ಯೋಚಿಸುತ್ತಿದ್ದರಂತೆ. ಒಬ್ಬ ವ್ಯಕ್ತಿಯ ಎದುರು ನಿಂತು ಹೀಗೆ ಮಾತಾಡಲು ಧೈರ್ಯ ಬೇಕು. ಒಂದು ವೇಳೆ ಯಾರಾದರೂ ನನ್ನ ಎದುರಿಗೆ ಬಂದು ಕೆಟ್ಟದಾಗಿ ಮಾತಾಡಿದ್ರೇ ಕಪಾಳಕ್ಕೆ ಹೊಡೆಯುತ್ತೇನೆ ಎನ್ನುವ ಸಿನ್ಹಾ, ಒಮ್ಮೊಮ್ಮೆ ಟ್ರೋಲ್​ಗಳನ್ನು ನೋಡಿ ಸುಮ್ಮನೆ ನಕ್ಕು ಬಿಡುತ್ತೇನೆ ಎನ್ನುತ್ತಾರೆ.

ಪ್ರಶಂಸೆ ಮತ್ತು ಟೀಕೆಗಳು ಎರಡೂ ಇರಬೇಕು. ಆದರೆ, ಅವುಗಳು ಸಕಾರಾತ್ಮಕವಾಗಿರಬೇಕು ಎಂಬುದು ಸೋನಾಕ್ಷಿ ತತ್ವದ ಮಾತು. ಇತ್ತೀಚಿಗಂತೂ ಟ್ರೋಲಿಗರ ವಿರುದ್ಧ ಕಠಿಣ ನಿರ್ಧಾರಕ್ಕೆ ಬಂದಿರುವ ಅವರು, ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಬ್ಲಾಕ್ ಮಾಡುತ್ತೇನೆ ಎಂದಿದ್ದಾರೆ. ನಟ ಅರ್ಬಾಜ್ ಖಾನ್ ನಡಿಸಿಕೊಡುವ ಚಾಟ್ ಶೋನಲ್ಲಿ ಸೋನಾಕ್ಷಿ ಸಿನ್ಹಾ ಈ ಎಲ್ಲ ಮಾತುಗಳನ್ನಾಡಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.