ಮುಂಬೈ: ದೇಶದ ಅತ್ಯುತ್ತಮ ಮತ್ತು ಪ್ರತಿಭಾವಂತ ಗಾಯಕರಲ್ಲಿ ಒಬ್ಬರಾದ ಅರ್ಮಾನ್ ಮಲಿಕ್ ಅವರು ತಮ್ಮ ಪ್ರೀತಿಯ ಅಜ್ಜಿ ಕಳೆದುಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಜ್ಜಿಯನ್ನು ತಬ್ಬಿಕೊಂಡಿರುವ ವಿಡಿಯೋ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.
ಅರ್ಮಾನ್ ಮಲಿಕ್ ಮತ್ತು ಅಮಲ್ ಮಲ್ಲಿಕ್ ಅವರು ತಮ್ಮ ದಾದಿಜಾನ್ ನಿಧನ ಹೊಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ತಮ್ಮ ಇನ್ಸ್ಟಾಗ್ರಾಂನಲ್ಲಿ ಹಳೆ ನೆನಪುಗಳನ್ನು ಮೆಲಕು ಹಾಕಿದ್ದಾರೆ. ನನ್ನ ಜೀವನದ ಬೆಳಕು ಅಂದ್ರೆ ಅದು ನನ್ನ ದಾದಿಜಾನ್, ಇಂದು ನನ್ನ ಉತ್ತಮ ಸ್ನೇಹಿತೆಯನ್ನು ಕಳೆದುಕೊಂಡಿದ್ದೇನೆ.
ಯಾರೂ ನಿಮ್ಮ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ನಿಮ್ಮೊಂದಿಗೆ ತುಂಬಾ ಸಮಯವನ್ನು ಕಳೆದಿದ್ದೇನೆ, ನಿಮ್ಮ ಪ್ರೀತಿ, ಅಪ್ಪುಗೆ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಆತ್ಮಕ್ಕೆ ಅಲ್ಲಾ ಶಾಂತಿ ನೀಡಲಿ ಎಂದು ಭಾವನಾತ್ಮಕವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ದಾದಿಜಾನ್ ನೆನಪಿಗಾಗಿ ಅಜ್ಜಿಯನ್ನು ತಬ್ಬಿಕೊಂಡಿರುವ ವಿಡಿಯೋವನ್ನು ಅರ್ಮಾನ್ ಮಲಿಕ್ ಹಂಚಿಕೊಂಡಿದ್ದು, ಚಲನಚಿತ್ರ ಮತ್ತು ಸಂಗೀತ ಉದ್ಯಮದ ಸದಸ್ಯರು ಸಹ ಸಂತಾಪ ಸೂಚಿಸಿದ್ದಾರೆ.