ಮುಂಬೈ (ಮಹಾರಾಷ್ಟ್ರ): ನಟ, ನಿರೂಪಕಿ ಮತ್ತು ಗಾಯಕಿ ಅನುಷಾ ದಾಂಡೇಕರ್ ಅವರು ಹಿಂದಿ ಬಿಗ್ಬಾಸ್ 15 ನಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಇದಕ್ಕೆ ಅನುಷಾ ಪ್ರತಿಕ್ರಿಯಿಸಿದ್ದಾರೆ.
ಅನುಷಾ ದಾಂಡೇಕರ್ ನಟ ಕರಣ್ ಕುಂದ್ರಾ ಅವರ ಮಾಜಿ ಗೆಳತಿಯಾಗಿದ್ದು, ಇವರು ಬಿಗ್ಬಾಸ್ಗೆ ಹೋದರೆ ಹೆಚ್ಚಿನ ತಿರುವುಗಳು ಸಿಗುತ್ತದೆ ಎಂದ ಜನರು ನಿರೀಕ್ಷಿಸುತ್ತಿದ್ದರು. ಆದರೆ ಅನುಷಾ ಅವರು ಈ ರೀತಿಯಾಗಿ ಸುಳ್ಳು ಸುದ್ದಿಗಳನ್ನು ಹಬ್ಬದಂತೆ ವಿನಿಂತಿಸಿಕೊಂಡಿದ್ದಾರೆ.
![Anusha Dandekar](https://etvbharatimages.akamaized.net/etvbharat/prod-images/240439732_169870105229010_1559083118383950493_n_2010newsroom_1634724792_871.jpg)
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಉದ್ದೇಶಿಸಿ ಅನುಷಾ ದಾಂಡೇಕರ್ ತಮ್ಮ ಫೋಟೋವನ್ನು ಹಂಚಿಕೊಂಡಿದ್ದು, ಲೇಖನವನ್ನು ಬರೆದಿದ್ದಾರೆ.
- " class="align-text-top noRightClick twitterSection" data="
">
ಇದು ನನ್ನ ಜೀವನ, ನನ್ನ ಸಂತೋಷದ ಸ್ಥಳ ಮತ್ತು ದೇವರ ಪ್ರೀತಿಗಾಗಿ ದಯವಿಟ್ಟು ಬಿಗ್ಬಾಸ್ನಲ್ಲಿ ನನ್ನ ಬಗ್ಗೆ ಅಸಂಬದ್ಧತೆಯನ್ನು ನಿಲ್ಲಿಸಿ, ನಾನು ಈ ಡ್ರಾಮಾದ ಭಾಗ ಅಲ್ಲ. ನಾನು ನಿಮಗೆ ನನ್ನ ಸತ್ಯವನ್ನು ಹೇಳಿದ್ದೇನೆ.
ನಾನು ಈಗ ಪೋಸ್ಟ್ ಮಾಡುವ ಪ್ರತಿಯೊಂದು ಚಿತ್ರ ಹಿಂದಿನದಲ್ಲ, ನನ್ನ ಬೆಳವಣಿಗೆಯ ಕುರಿತಾದವುಗಳು. ಸ್ವಯಂ ನಿರ್ಮಿತ ಮಹಿಳೆಯಾಗಿ ನನ್ನ ಸಾಧನೆಗಳನ್ನು ದುರ್ಬಲಗೊಳಿಸುವುದನ್ನು ನಿಲ್ಲಿಸಿ. ನನ್ನು ಜೀವನದಲ್ಲಿ ನಾನೇ ಬಾಸ್, ಅದನ್ನು ಸಾಬೀತುಪಡಿಸಲು ನಾನು ಯಾವುದೇ ಮನೆಗೆ ಹೋಗಬೇಕಾದ ಅವಶ್ಯಕತೆ ಇಲ್ಲ.
ಆದ್ದರಿಂದ ಅನಾರೋಗ್ಯಕರವಾಗಿ ಗೀಳಾಗಿರುವ ಜನರು ನಿದ್ರೆ ಮಾಡಿ. ನನ್ನನ್ನು ಬದುಕಲು ಮತ್ತು ಸಂತೋಷವನ್ನು ಹರಡಲು ಅವಕಾಶ ನೀಡಿದ ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಸಮ್ವೇರ್ ಓವರ್ ದ ರೈನ್ ಬೋ ಇನ್ ಮಸ್ಸೂರಿ ': ಹೀಗಂತಾ ಬರೆದು ಫೋಟೋ ಹರಿಬಿಟ್ರು ಈ ಸುಂದರ ನಟಿ