ETV Bharat / sitara

ತನ್ನನ್ನು ಮಾತನಾಡಿಸಲು ಬಂದ ಬೀದಿಬದಿ ಮಕ್ಕಳೊಂದಿಗೆ ಬಾಲಿವುಡ್​​​​​​​​ ನಟಿ ನಡೆದುಕೊಂಡ ರೀತಿ ಹೇಗಿದೆ ನೋಡಿ...!

'ಜವಾನಿ ಜಾನೇಮನ್' ನಟಿ ಅಲಾಯ ಮುಂಬೈನ ಜುಹು ಪ್ರದೇಶದಲ್ಲಿ ತಮ್ಮನ್ನು ಮಾತನಾಡಿಸಲು ಬಂದ ಮಕ್ಕಳಿಗೆ ಹಣ ನೀಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಕ್ಕಳಿಗೆ ದುಡ್ಡು ನೀಡಿದ್ದಲ್ಲದೆ ಅವರು ಕೇಳುವ ಪ್ರಶ್ನೆಗಳಿಗೂ ನಗುತ್ತಲೇ ಉತ್ತರಿಸಿರುವ ಅಲಾಯಗೆ ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

author img

By

Published : Dec 5, 2020, 1:21 PM IST

Updated : Dec 5, 2020, 1:26 PM IST

Alaya
ಅಲಾಯ

ಬಾಲಿವುಡ್​​​ ನಟಿ ಪೂಜಾ ಬೇಡಿ ಹೆಸರನ್ನು ನೀವು ಕೇಳಿರಬಹುದು. ನಟಿಸಿದ್ದು ಕೆಲವೇ ಸಿನಿಮಾಗಳಲ್ಲಾದರೂ ಆಕೆ ಬಾಲಿವುಡ್ ಚಿತ್ರರಂಗದಲ್ಲಿ ಹೆಸರು ಮಾಡಿದ್ದರು. ಪೂಜಾ ಬೇಡಿ ಪುತ್ರಿ ಅಲಾಯ ಕೂಡಾ 'ಜವಾನಿ ಜಾನೇಮನ್' ಚಿತ್ರದ ಮೂಲಕ ಬಾಲಿವುಡ್​​​ಗೆ ಎಂಟ್ರಿ ನೀಡಿದ್ದಾರೆ. ಅಲಾಯ ಅವರ ಬಗ್ಗೆ ಹೆಚ್ಚಿನ ಜನಕ್ಕೆ ಗೊತ್ತಿಲ್ಲ, ಆದರೆ ಅವರ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದ್ದು ನೆಟಿಜನ್ಸ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಮುಂಬೈನ ಜುಹು ಪ್ರದೇಶದಲ್ಲಿ ತಮ್ಮ ಕಾರು ಹತ್ತುತ್ತಿದ್ದ ಅಲಾಯ ಅವರನ್ನು ನೋಡಿದ ಬೀದಿಬದಿ ಮಕ್ಕಳು ಆಕೆಯ ಬಳಿ ಓಡಿ ಬಂದು ತಿನ್ನಲು ಏನಾದರೂ ಕೊಡಿ ಎಂದು ಕೇಳಿದ್ದಾರೆ. ಮಕ್ಕಳನ್ನು ನೋಡಿದ ಅಲಾಯ, ಅವರನ್ನು ಪ್ರೀತಿಯಿಂದಲೇ ಮಾತನಾಡಿಸಿದ್ದಾರೆ. ಕೂಡಲೇ ತಮ್ಮ ಪರ್ಸ್​​​​ನಿಂದ ತಿಂಡಿ ಖರೀದಿಸಲು ಸ್ವಲ್ಪ ಹಣ ನೀಡಿದ್ದಾರೆ. ಅಲ್ಲದೆ ಮಕ್ಕಳು ಕೇಳುವ ಮುಗ್ಧ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಗುಂಪಿನಲ್ಲಿದ್ದ ಹುಡುಗನೊಬ್ಬ ಅಕ್ಕಾ, ನೀವು ಸಿನಿಮಾ ಹೀರೋಯಿನ್ನಾ...? ಎಂದು ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಅಲಾಯ, 'ಈಗ ಹೀರೋಯಿನ್ ಆಗುತ್ತಿದ್ದೇನೆ, ಇನ್ನೂ ಸ್ವಲ್ಪ ಸಮಯ ಬೇಕು' ಎಂದು ಹೇಳಿದ್ದಾರೆ. ಅಲಾಯ ತಮ್ಮ ಪರ್ಸಿನಿಂದ ಹಣ ನೀಡಿ ಕಾರು ಹತ್ತುತ್ತಿದ್ದಂತೆ ಮಕ್ಕಳು ಕಾರಿನ ಬಾಗಿಲು ಹಾಕುತ್ತಾ ಥ್ಯಾಂಕ್ಸ್ ಹೇಳಿ ಸಂತೋಷದಿಂದ ಅಲ್ಲಿಂದ ಹೊರಟಿದ್ದಾರೆ.

ಈ ರೀತಿ ತಮ್ಮ ಬಳಿ ಹಣ ಕೇಳಲು ಬರುವ ಬೀದಿ ಬದಿಯ ಮಕ್ಕಳನ್ನು ಸೌಜನ್ಯಕ್ಕಾದರೂ ಮಾತನಾಡಿಸದೆ, ದೂರ ತಳ್ಳಿರುವುದಕ್ಕೆ ಅನೇಕ ಬಾಲಿವುಡ್​​​​ ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್​​​ಗೆ ಗುರಿಯಾಗಿದ್ದಾರೆ. ಅದರೆ ಅಲಾಯ ಮಕ್ಕಳನ್ನು ಮಾತನಾಡಿಸಿರುವ ರೀತಿ ನೋಡಿ ನೆಟಿಜನ್ಸ್​ ಆಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಜಾನ್ವಿ ಕಪೂರ್ ಕೂಡಾ ಇದೇ ರೀತಿ ತಮ್ಮನ್ನು ಮಾತನಾಡಿಸಲು ಬಂದ ಮಕ್ಕಳಿಗೆ ಹಣ ನೀಡಿದ್ದರು.

ಅಲಾಯ ನಟಿಸಿದ್ದ 'ಜವಾನಿ ಜಾನೇಮನ್' ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ನ್ಯೂಯಾರ್ಕ್ ಫಿಲ್ಮ್​ ಅಕಾಡೆಮಿಯಲ್ಲಿ ಅಲಾಯ ಆ್ಯಕ್ಟಿಂಗ್​ನಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್​​​ನಲ್ಲಿ ಸ್ವಜನ ಪಕ್ಷಪಾತದ ವಿಚಾರವಾಗಿ ಹೆಚ್ಚು ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಅಲಾಯ, ನಾನು ಸಿನಿಮಾದಲ್ಲಿ ನಟಿಸಲು ನನ್ನ ತಾಯಿ ಪೂಜಾ ಬೇಡಿ ಹೆಸರನ್ನು ಬಳಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Last Updated : Dec 5, 2020, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.