ಮುಂಬೈ: ಮಹಾಮಾರಿ ಕೊರೊನಾ ವೈರಸ್ ಕಾರಣ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಸಿನಿಮಾ ಚಿತ್ರಗಳ ಚಿತ್ರೀಕರಣ ಕೆಲಸ ಇದೀಗ ಶುರುವಾಗಿದೆ. ತಮ್ಮ ಮುಂಬರುವ ಹೊಸ ಚಿತ್ರಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ತಂಡ ವಿದೇಶಕ್ಕೆ ಹಾರಿದೆ.
ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ 'ಬೆಲ್ ಬಾಟಂ' ಚಿತ್ರದಲ್ಲಿ ಲಾರಾ ದತ್ತಾ, ಹುಮಾ ಖುರೇಷಿ, ಆದಿಲ್ ಹುಸೇನ್, ವಾಣಿ ಕಪೂರ್ ಸೇರಿದಂತೆ ಅನೇಕ ನಟರಿದ್ದಾರೆ. ಈ ಚಿತ್ರವನ್ನು ಗ್ಲ್ಯಾಸ್ಗೋ, ಯುಕೆ, ಸ್ಕಾಟ್ಲೆಂಡ್ನಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ.
ನಟ ಅಕ್ಷಯ್ ಕುಮಾರ್ ಜತೆ ಪತ್ನಿ ಟ್ವಿಂಕಲ್ ಖನ್ನಾ ಹಾಗೂ ಮಕ್ಕಳಾದ ಆರವ್ ಮತ್ತು ನಿತಾರಾ ಕೂಡ ಪ್ರಯಾಣಿಸಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ನಿಂದಾಗಿ ಲಾಕ್ಡೌನ್ ಹೇರಿಕೆ ಮಾಡುತ್ತಿದ್ದಂತೆ ಸಿನಿಮಾ ಚಿತ್ರೀಕರಣದ ಮೇಲೆ ನಿರ್ಬಂಧ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ನಾಲ್ಕು ತಿಂಗಳ ಬಳಿಕ ಮೊದಲ ಬಾಲಿವುಡ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
-
Taking off for Glasgow, #Scotland Now @CreativeScots @alangemmell
— Adil hussain (@_AdilHussain) August 6, 2020 " class="align-text-top noRightClick twitterSection" data="
to shoot. First Film Shoot during Covid19 #LockDown after Four months💥❤️ pic.twitter.com/Ru0oSzHBuO
">Taking off for Glasgow, #Scotland Now @CreativeScots @alangemmell
— Adil hussain (@_AdilHussain) August 6, 2020
to shoot. First Film Shoot during Covid19 #LockDown after Four months💥❤️ pic.twitter.com/Ru0oSzHBuOTaking off for Glasgow, #Scotland Now @CreativeScots @alangemmell
— Adil hussain (@_AdilHussain) August 6, 2020
to shoot. First Film Shoot during Covid19 #LockDown after Four months💥❤️ pic.twitter.com/Ru0oSzHBuO