ETV Bharat / sitara

ಅಕ್ಷಯ್ ಕುಮಾರ್ ಜೊತೆ ತೆರೆ ಹಂಚಿಕೊಳ್ಳುತ್ತಿರುವ ವಾಣಿ ಕಪೂರ್​​​​​​ - Vani kapoor new movie

1980 ರಲ್ಲಿ ನಡೆದ ನೈಜ ಘಟನೆ ಆಧರಿತ 'ಬೆಲ್​ ಬಾಟಮ್'​​ ಸಿನಿಮಾ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ. ಚಿತ್ರದಲ್ಲಿ ಅಕ್ಷಯ್ ಜೊತೆ ನಾಯಕಿಯಾಗಿ ವಾಣಿ ಕಪೂರ್ ನಟಿಸಲಿದ್ಧಾರೆ.

vani kapoor in bell bottom
ಬೆಲ್​ ಬಾಟಮ್
author img

By

Published : Jul 2, 2020, 4:24 PM IST

ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಥ್ರಿಲ್ಲರ್​​​ ಚಿತ್ರ 'ಬೆಲ್ ಬಾಟಮ್​​'ನಲ್ಲಿ ಅಕ್ಕಿ ಜೊತೆ ನಾಯಕಿಯಾಗಿ ವಾಣಿ ಕಪೂರ್ ನಟಿಸಲು ಆಯ್ಕೆಯಾಗಿದ್ದಾರೆ. ಅಕ್ಷಯ್ ಜೊತೆ ವಾಣಿ ನಟಿಸುತ್ತಿರುವ ಮೊದಲ ಸಿನಿಮಾ ಇದು.

'ಅಕ್ಷಯ್ ಕುಮಾರ್ ಅವರೊಂದಿಗೆ ನಟಿಸಲು ಅವಕಾಶ ದೊರೆತಿದ್ದು ನಿಜಕ್ಕೂ ಬಹಳ ಅದೃಷ್ಟ. ಅವರೊಂದಿಗೆ ತೆರೆ ಹಂಚಿಕೊಳ್ಳಲು ನಾನು ಬಹಳ ಉತ್ಸುಕಳಾಗಿದ್ದೇನೆ' ಎಂದು ವಾಣಿ ಹೇಳಿದ್ದಾರೆ. 1980 ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಸಿನಿಮಾ ಇದಾಗಿದೆ. ಚಿತ್ರವನ್ನು ರಂಜಿತ್ ಎಂ. ತಿವಾರಿ ನಿರ್ದೇಶಿಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರಲಿದೆ. ಆಸಿಮ್ ಅರೋರ ಹಾಗೂ ಪರ್ವೇಜ್ ಶಾಯಿಕ್ ಈ ಚಿತ್ರದ ಕಥೆ ಬರೆದಿದ್ದಾರೆ.

ವಾಣಿ ಅವರನ್ನು ಚಿತ್ರತಂಡಕ್ಕೆ ಸ್ವಾಗತ ಕೋರಿರುವ ನಿರ್ದೇಶಕ ರಂಜಿತ್​, 'ಈ ಚಿತ್ರದಲ್ಲಿ ವಾಣಿ ಅವರ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ' ಎಂದು ಹೇಳಿಕೊಂಡಿದ್ದಾರೆ. ಚಿತ್ರವನ್ನು ಜಾಕಿ ಭಗ್ನಾನಿ ನಿರ್ಮಿಸುತ್ತಿದ್ದು 'ಚಿತ್ರದ ಸ್ಕ್ರಿಪ್ಟ್ ನನಗೆ ಬಹಳ ಹಿಡಿಸಿತು ಆದ್ದರಿಂದ ಸಿನಿಮಾ ಮಾಡಲು ಒಪ್ಪಿಕೊಂಡೆ' ಎಂದು ಹೇಳಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಅಕ್ಷಯ್ ಕುಮಾರ್ ಈ ತಿಂಗಳ ಅಂತ್ಯದಲ್ಲಿ ಲಂಡನ್​​​ಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ಚಿತ್ರವನ್ನು ಮುಂದಿನ ವರ್ಷ ಏಪ್ರಿಲ್​​​​​ 2 ರಂದು ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ.

ಕಳೆದ ವರ್ಷ ಅಕ್ಷಯ್ ಕುಮಾರ್ ಕೇಸರಿ, ಮಿಷನ್ ಮಂಗಳ್, ಹೌಸ್​​​ಫುಲ್ 4, ಸೂರ್ಯವಂಶಿ, ಗುಡ್​​ನ್ಯೂಸ್​​​​​​​​​​​​​​​​​​​​​​​​​​​​​​ನಂತ ಸಾಲು ಸಾಲು ಹಿಟ್​ ಚಿತ್ರಗಳನ್ನು ನೀಡಿದ್ದರು. ಸೂರ್ಯವಂಶಿ, ಪೃಥ್ವಿರಾಜ್ ಹಾಗೂ ಅತರಂಗಿ ರೇ ಅಕ್ಷಯ್ ಕುಮಾರ್ ಅಭಿನಯದ ಮುಂಬರುವ ಸಿನಿಮಾಗಳು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.