ETV Bharat / sitara

Oh My God 2 ಪೋಸ್ಟರ್​ ಬಿಡುಗಡೆ: ಶಿವನ ಅವತಾರದಲ್ಲಿ ನಟ ಅಕ್ಷಯ್​ ಕುಮಾರ್​

'ಓ ಮೈ ಗಾಡ್ - 2' ಸಿನಿಮಾದ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಇದರಲ್ಲಿ ಅಕ್ಷಯ್​ ಕುಮಾರ್​ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

akshay
Oh My God 2 ಪೋಸ್ಟರ್​ ಬಿಡುಗಡೆ
author img

By

Published : Oct 23, 2021, 4:08 PM IST

ಹೈದರಾಬಾದ್​​: ಬಾಲಿವುಡ್ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಅವರು 'ಓ ಮೈ ಗಾಡ್ - 2' ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಿದ್ದು, ಚಿತ್ರದಲ್ಲಿ ಅವರು ಶಿವನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಶನಿವಾರ ಅಕ್ಷಯ್​ ಕುಮಾರ್​​ ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ರಿವೀಲ್​ ಮಾಡಿದ್ದಾರೆ. ಜೊತೆಗೆ ಅವರು ಚಿತ್ರದ ಮೊದಲ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದು, ಇದರಲ್ಲಿ ಅವರು ಶಿವನ ಅವತಾರದಲ್ಲಿರುವುದನ್ನು ಕಾಣಬಹುದು.

"ಕರ್ತಾ ಕರೇ ನಾ ಕರ್ ಸಕೆ ಶಿವ ಕರೆ ಸೋ ಹೋಯೆ.#OMG2 ಗೆ ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳು ಬೇಕು, ಇದು ಒಂದು ಪ್ರಮುಖ ಸಾಮಾಜಿಕ ಸಮಸ್ಯೆಯನ್ನು ಪ್ರತಿಬಿಂಬಿಸಲು ನಮ್ಮ ಪ್ರಾಮಾಣಿಕ ಮತ್ತು ವಿನಮ್ರ ಪ್ರಯತ್ನ. ನಮ್ಮ ಈ ಪ್ರಯಾಣಕ್ಕೆ ಆದಿಯೋಗಿಯ ಶಾಶ್ವತ ಶಕ್ತಿಯ ಆಶೀರ್ವಾದ ಇರಲಿ, ಹರ ಹರ ಮಹಾದೇವ''ಎಂದು ಅಕ್ಷಯ್​ ಕುಮಾರ್​ ಕ್ಯಾಪ್ಷನ್​ ಕೊಟ್ಟಿದ್ದಾರೆ.

ಅಮಿತ್ ರೈ ನಿರ್ದೇಶನದ ಈ ಓ ಮೈ ಗಾಡ್- 2 ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಪರೇಶ್ ರಾವಲ್ ಸಹ ನಟಿಸಿದ್ದಾರೆ. ಉಳಿದಂತೆ ಯಾಮಿ ಗೌತಮ್ ಮತ್ತು ಪಂಕಜ್ ತ್ರಿಪಾಠಿ ಚಿತ್ರದಲ್ಲಿದ್ದಾರೆ. ಅಮಲೇಂದು ಚೌಧರಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಮೂಲ ಚಿತ್ರದಲ್ಲಿ ಅಕ್ಷಯ್ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ತಿಂಗಳ ಆರಂಭದಲ್ಲಿ, ಓ ಮೈ ಗಾಡ್ 2 ಅನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಗಳು ವೆಬ್‌ಲಾಯ್ಡ್‌ಗಳಲ್ಲಿ ಹರಿದಾಡಿದ್ದವು. ಆದರೆ, ಚಿತ್ರದ ನಿರ್ಮಾಪಕ ಅಶ್ವಿನ್ ವರ್ದೆ, ತಮ್ಮ ಸಿನಿಮಾ ತಂಡದ ಏಳು ಮಂದಿಗೆ ಕೊರೊನಾ ಬಂದಿದ್ದರಿಂದ ಓ ಮೈ ಗಾಡ್ 2 ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳನ್ನು ನಿರಾಕರಿಸಿದ್ದಾರೆ. ಚಿತ್ರತಂಡ ಈಗ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಚಿತ್ರದ ಮುಂದಿನ ಶೂಟಿಂಗ್​ಗಾಗಿ ಸಜ್ಜಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.