ETV Bharat / sitara

ಕಾಂಗ್ರೆಸ್​​​ಗೆ ಬೈ...ಶಿವಸೇನೆಗೆ ಜೈ ಎನ್ನುತ್ತಿದ್ದಾರೆ ಊರ್ಮಿಳಾ ಮಾಂತೊಡ್ಕರ್​​​​

2019 ಲೋಕಸಭೆ ಚುನಾವಣೆಯಲ್ಲಿ ಉತ್ತರ ಮುಂಬೈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಲಿವುಡ್ ನಟಿ ಊರ್ಮಿಳಾ ಮಾಂತೊಡ್ಕರ್​​ ಇದೀಗ ಕಾಂಗ್ರೆಸ್ ತೊರೆದು ಶಿವಸೇನೆ ಸೇರಲಿದ್ದಾರೆ. ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಮ್ಮುಖದಲ್ಲಿ ಊರ್ಮಿಳಾ ಶಿವಸೇನೆ ಸೇರಲಿದ್ದಾರೆ.

Urmila Matondkar will join Shiv Sena
ಊರ್ಮಿಳಾ ಮಾಂತೊಡ್ಕರ್​​​​
author img

By

Published : Nov 30, 2020, 10:41 AM IST

'ರಂಗೀಲಾ' ಖ್ಯಾತಿಯ ಬಾಲಿವುಡ್ ನಟಿ ಊರ್ಮಿಳಾ ಮಾಂತೊಡ್ಕರ್​​​ ಮಂಗಳವಾರ ಶಿವಸೇನೆಗೆ ಸೇರಲಿದ್ದಾರೆ. ಇದಕ್ಕೂ ಮುನ್ನ ಊರ್ಮಿಳಾ, ಕಾಂಗ್ರೆಸ್​ ಪಕ್ಷದಲ್ಲಿ ಗುರುತಿಸಿಕೊಂಡಿದ್ದು 2019 ಲೋಕಸಭಾ ಚುನಾವಣೆಯಲ್ಲಿ ಉತ್ತರ ಮುಂಬೈ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಇದೀಗ ಕಾಂಗ್ರೆಸ್ ತೊರೆದು ಶಿವಸೇನೆ ಸೇರುತ್ತಿದ್ದಾರೆ.

ಡಿಸೆಂಬರ್​ 1 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸಮ್ಮುಖದಲ್ಲಿ ಊರ್ಮಿಳಾ ಶಿವಸೇನೆ ಸೇರಲಿದ್ದಾರೆ ಎಂದು ಉದ್ಧವ್ ಠಾಕ್ರೆ ಆಪ್ತ ಸಹಾಯಕ ಹರ್ಷಲ್ ಪ್ರಧಾನ್ ಹೇಳಿದ್ದಾರೆ. ರಾಜ್ಯಪಾಲರ ಖೋಟಾ ಅಡಿಯಲ್ಲಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಊರ್ಮಿಳಾ ಹೆಸರನ್ನು ರಾಜ್ಯಪಾಲ ಭಗತ್ ಸಿಂಗ್​ ಕೋಶ್ಯಾರಿ ಅವರ ಅನುಮೋದನೆಗೆ ಕಳಿಸಿಕೊಡಲಾಗಿತ್ತು. ಊರ್ಮಿಳಾ ಅವರೊಂದಿಗೆ ಇನ್ನೂ 11 ಮಂದಿಯ ಹೆಸರನ್ನು ಕೂಡಾ ಕಳಿಸಿಕೊಡಲಾಗಿತ್ತು. ಆದರೆ ರಾಜ್ಯಪಾಲರು ಇದಕ್ಕೆ ಇನ್ನೂ ಅನುಮೋದನೆ ನೀಡಿಲ್ಲ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.