ಪ್ರತಿಯೊಬ್ಬರ ಜೀವನದಲ್ಲಿ ವಿವಾಹವು ಒಂದು ಪ್ರಮುಖ ಘಟ್ಟವಾಗಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಮದುವೆಯಾಗುವ ಬಗ್ಗೆ ತಮ್ಮದೇ ಆದ ಕನಸು ಕಾಣುತ್ತಾರೆ. ಸಿನಿಮಾ ತಾರೆಯರು ಮದುವೆಯಾದರೆ ಆ ಮಾತೇ ಬೇರೆ. ಸಿನಿಮಾ ತಾರೆಯರು ವಿದೇಶದಲ್ಲಿ ಮದುವೆಯಾಗಲು ಬಯಸುತ್ತಿದ್ದರೆ, ಇತ್ತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತಿರುಪತಿಯಲ್ಲಿ ಮದುವೆಯಾಗುವ ಬಗ್ಗೆ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿ ಜಾಹ್ನವಿ ತಮ್ಮ ಮದುವೆಯ ಕುರಿತಾದ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. "ಮದುವೆ ಎರಡು ಅಥವಾ ಮೂರು ದಿನಗಳಲ್ಲಿ ಮುಗಿಯಬೇಕು. ಕ್ಯಾಪ್ರಿ ದ್ವೀಪದಲ್ಲಿ ಖಾಸಗಿ ದೋಣಿಯಲ್ಲಿ ನನ್ನ ಗ್ಯಾಂಗ್ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿದ ನಂತರ ನಾನು ತಿರುಪತಿಯಲ್ಲಿ ಮದುವೆಯಾಗುತ್ತೇನೆ. ಚೆನ್ನೈನ ಮೈಲಾಪುರದ ನನ್ನ ತಾಯಿಯ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಬೇಕು'' ಎಂದು ತಮ್ಮ ಮನದಾಸೆಯನ್ನು ಬಿಚ್ಚಿಟಿದ್ದಾರೆ.
ಅಂದಹಾಗೆ ಈ ನಟಿ ತಿರುಪತಿಯಲ್ಲಿ ಮದುವೆಯಾಗಲಿದ್ದಾರಂತೆ. ನಿಶ್ಚಿತ ವರ ಬುದ್ಧಿವಂತನಾದರೆ ಸಾಕು ಎನ್ನುತ್ತಾರೆ ಜಾಹ್ನವಿ. ಪ್ರಸ್ತುತ ಜಾಹ್ನವಿ 'ಗುಡ್ ಲಕ್ ಜೆರ್ರಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.