ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖವಾದ ಮತ್ತು ಅಸಂಖ್ಯ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ ಈಗ ಹೊಸ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ವಾಟ್ಸ್ಆ್ಯಪ್ನಲ್ಲಿ ಕಳುಹಿಸಿದ ಸಂದೇಶವನ್ನು ಮತ್ತೊಮ್ಮೆ ಎಡಿಟ್ಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮೆಟಾ ಮಾಲೀಕತ್ವದ ವಾಟ್ಸ್ಆ್ಯಪ್ ಮತ್ತಷ್ಟು ಅಪ್ಡೇಟ್ ಆಗುತ್ತಿದ್ದು, ಭವಿಷ್ಯದಲ್ಲಿ ಒಮ್ಮೆ ಕಳುಹಿಸಿದ ಸಂದೇಶವನ್ನೇ ಮತ್ತೆ ತಿದ್ದುವ ಅವಕಾಶ ಮಾಡಿಕೊಡುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಾಟ್ಸ್ಆ್ಯಪ್ ಗಮನ ಹರಿಸಿದ್ದು, ಇದರ ಕಾರ್ಯ ಪ್ರಗತಿ ಹಂತದಲ್ಲಿದೆ.
ಒಂದು ವೇಳೆ ಇದು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದರೆ, ಈ ಹಿಂದೆ ಕಳುಹಿಸಿದ ಸಂದೇಶದಲ್ಲಿ ಯಾವುದೇ ದೋಷಗಳು ಅಥವಾ ಬದಲಾವಣೆಗಳು ಇದ್ದರೆ ಅದನ್ನು ಸರಿಪಡಿಸಲು ಬಳಕೆದಾರರಿಗೆ ಅವಕಾಶ ಸಿಕ್ಕಂತೆ ಆಗುತ್ತದೆ. ಈಗಿರುವ ವಾಟ್ಸ್ಆ್ಯಪ್ನಲ್ಲಿ ಒಮ್ಮೆ ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡುವ ಅವಕಾಶ ಇಲ್ಲ. ಆದರೆ, ಎಡಿಟ್ ಫೀಚರ್ಸ್ ಪರಿಚಯಿಸಿದ ನಂತರ ಬಳಕೆದಾರರು ಇದರ ಲಾಭವನ್ನು ಪಡೆಯುಬಹುದು ಎಂದು ವರದಿಯಾಗಿದೆ.
ಇದನ್ನೂ ಓದಿ: ಡಿಜಿಲಾಕರ್ ಸೇವೆ ಇನ್ನು ಮುಂದೆ ವಾಟ್ಸ್ಆ್ಯಪ್ ಮೂಲಕವೂ ಲಭ್ಯ