ನವದೆಹಲಿ: ವಾಟ್ಸ್ಆ್ಯಪ್ ಪೇ ಇಂಡಿಯಾ ಮುಖ್ಯಸ್ಥ ವಿನಯ್ ಚೋಲೆಟ್ಟಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹುದ್ದೆಗೆ ಏರಿದ ನಾಲ್ಕು ತಿಂಗಳಲ್ಲೇ ಅವರು ಹುದ್ದೆ ತ್ಯಜಿಸಿದ್ದಾರೆ. ನವೆಂಬರ್‌ನಲ್ಲಿ ಮೆಟಾದ ಮುಖ್ಯಸ್ಥ ಅಜಿತ್ ಮೋಹನ್ ರಾಜೀನಾಮೆ ನೀಡಿದ್ದರು. ಅದಾದ ನಂತರ ಚೋಲೆಟ್ಟಿ ಈಗ ರಾಜೀನಾಮೆ ನೀಡಿದ್ದು, ಸುಮಾರು ಒಂದೂವರೆ ತಿಂಗಳ ಅವಧಿಯಲ್ಲಿ ಭಾರತದಲ್ಲಿ ಮೆಟಾದಿಂದ ನಾಲ್ಕನೇ ಉನ್ನತ ಪ್ರೊಫೈಲ್ ಅಧಿಕಾರಿ ನಿರ್ಗಮನವಾದಂತಾಗಿದೆ.
ಮೋಹನ್ ನಂತರ, ವಾಟ್ಸ್ಆ್ಯಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಮೆಟಾ ಇಂಡಿಯಾ ಪಬ್ಲಿಕ್ ಪಾಲಿಸಿ ಹೆಡ್ ರಾಜೀವ್ ಅಗರ್ವಾಲ್ ಕೂಡ ಕಳೆದ ತಿಂಗಳು ಕಂಪನಿಗೆ ರಾಜೀನಾಮೆ ನೀಡಿದ್ದರು. ಚೋಲೆಟ್ಟಿ ಲಿಂಕ್ಡ್‌ಇನ್‌ನಲ್ಲಿ WhatsApp ನಿರ್ಗಮಿಸುವ ಕುರಿತು ಅಪ್ಡೇಟ್ ಹಾಕಿದ್ದಾರೆ.
ವಾಟ್ಸ್ಆ್ಯಪ್ ಪೇನಲ್ಲಿ ಇಂದು ನನ್ನ ಕೊನೆಯ ದಿನವಾಗಿತ್ತು. ನಾನು ಸೈನ್ ಆಫ್ ಮಾಡುವಾಗ, ಭಾರತದಲ್ಲಿ ವಾಟ್ಸ್ಆ್ಯಪ್ ಬೆಳವಣಿಗೆ ಮತ್ತು ಅದರ ಪ್ರಭಾವವನ್ನು ನೋಡುವುದು ಒಂದು ವಿನಮ್ರ ಅನುಭವವಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ ಎಂದು ಚೋಲೆಟ್ಟಿ ಬುಧವಾರ ಲಿಂಕ್ಡ್ಇನ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ವಿನಯ್ ಚೋಲೆಟ್ಟಿ ಅಕ್ಟೋಬರ್ 2021 ರಲ್ಲಿ ಅಮೆಜಾನ್ ಬಿಟ್ಟು ವಾಟ್ಸ್ಆ್ಯಪ್ ಸೇರಿದ್ದರು. ಇವರ ರಾಜೀನಾಮೆಯ ಬಗ್ಗೆ ಸ್ಪಷ್ಟೀಕರಣ ಕೋರಿ WhatsApp ಗೆ ಕಳುಹಿಸಲಾದ ಇಮೇಲ್ ಪ್ರಶ್ನೆಗೆ ಯಾವುದೇ ಉತ್ತರ ಬಂದಿಲ್ಲ.
ಇದನ್ನೂ ಒದಿ: ಭಾರತದಲ್ಲಿ 23 ಲಕ್ಷ ನಕಲಿ ವಾಟ್ಸ್ಆ್ಯಪ್ ಖಾತೆಗಳ ಬ್ಯಾನ್ ಮಾಡಿದ ಮೆಟಾ