ETV Bharat / science-and-technology

ಪ್ಲೇ ಸ್ಟೋರ್​ನಲ್ಲಿ 2023ರ ಬೆಸ್ಟ್​ ಆ್ಯಪ್ ಮತ್ತು ಗೇಮ್​ ಯಾವುದು? ಇಲ್ಲಿದೆ ಪಟ್ಟಿ

ಪ್ಲೇಸ್ಟೋರ್​ನಲ್ಲಿ 2023ರಲ್ಲಿ ಅತಿ ಹೆಚ್ಚು ಜನಪ್ರಿಯ ಆ್ಯಪ್​ ಮತ್ತು ಗೇಮ್​ಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ.

Google announces Play Store's best apps, games of 2023 in India

author img

By ETV Bharat Karnataka Team

Published : Nov 30, 2023, 2:34 PM IST

ನವದೆಹಲಿ: ಭಾರತದಲ್ಲಿ ಗೂಗಲ್ ಪ್ಲೇ ಸ್ಟೋರ್​ನ 2023 ರ ಅತ್ಯುತ್ತಮ ಅಪ್ಲಿಕೇಶನ್​ಗಳು ಮತ್ತು ಗೇಮ್​ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. "2023 ರಲ್ಲಿ ಮತ್ತೊಮ್ಮೆ ಸೆಲ್ಫ್ ಕೇರ್, ವೈಯಕ್ತಿಕ ಬೆಳವಣಿಗೆ ಮತ್ತು ಇ-ಕಾಮರ್ಸ್ ಅಪ್ಲಿಕೇಶನ್​ಗಳು ಈ ವರ್ಷ ನಮ್ಮ ಪಟ್ಟಿಯಲ್ಲಿ ಅತ್ಯಧಿಕ ಜನಪ್ರಿಯವಾಗಿವೆ" ಎಂದು ಗೂಗಲ್ ಬ್ಲಾಗ್ ಪೋಸ್ಟ್​ನಲ್ಲಿ ತಿಳಿಸಿದೆ.

ಲೆವೆಲ್ ಸೂಪರ್ ಮೈಂಡ್ (Level SuperMind) ಅಪ್ಲಿಕೇಶನ್ ವರ್ಷದ ಅತ್ಯುತ್ತಮ ಅಪ್ಲಿಕೇಶನ್ ಪ್ರಶಸ್ತಿ ಪಡೆದುಕೊಂಡಿದೆ. ಇದು ಧ್ಯಾನ, ವ್ಯಾಯಾಮ, ನಿಯತಕಾಲಿಕೆಗಳು ಮತ್ತು ನಿದ್ರೆ ಬರಿಸುವ ಕಥೆಗಳ ಮಿಶ್ರಣವನ್ನು ಒಳಗೊಂಡಿರುವ ವೈಯಕ್ತೀಕರಿಸಿದ ಎಐ-ಸಾಮರ್ಥ್ಯದ ಅಪ್ಲಿಕೇಶನ್ ಆಗಿದೆ. ಇದು ಜನರಿಗೆ ಸಮಗ್ರ ಯೋಗಕ್ಷೇಮದ ಮಾರ್ಗದರ್ಶನ ಮಾಡುವ ಆ್ಯಪ್ ಆಗಿದೆ.

ಎಐ ವಿಭಾಗದಲ್ಲಿ ಸ್ಟಿಮ್ಯುಲರ್ (Stimuler) ಬೆಸ್ಟ್ ಆ್ಯಪ್ ಆಗಿದೆ. ಇದು ಎಐ ಚಾಲಿತ ಧ್ವನಿ ತಂತ್ರಜ್ಞಾನದ ಮೂಲಕ ಬಳಕೆದಾರರಿಗೆ ಇಂಗ್ಲಿಷ್ ಮಾತನಾಡುವ ಕೌಶಲ್ಯ ನೀಡುವ ಆ್ಯಪ್ ಆಗಿದೆ. ಅನೇಕ ಭಾರತೀಯ ಭಾಷೆಗಳಲ್ಲಿ ವೈಯಕ್ತೀಕರಿಸಿದ ಕಲಿಕಾ ವಿಷಯ ಹೊಂದಿರುವ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸಹಾಯ ಮಾಡಲು ಸಂಭಾಷಣಾತ್ಮಕ ಎಐ ಚಾಟ್​ಬಾಟ್​ ಬಳಸುವ ಸ್ವಿಫ್ಟ್​ ಚಾಟ್ (SwiftChat) ಈ ವಿಭಾಗದ ಮತ್ತೊಂದು ಬೆಸ್ಟ್​ ಆ್ಯಪ್ ಆಗಿದೆ ಎಂದು ಗೂಗಲ್ ಹೇಳಿದೆ.

ಆರೋಗ್ಯ ಚಿಕಿತ್ಸೆ ಅಥವಾ ಥೆರಪಿ ಅಪ್ಲಿಕೇಶನ್ ಆಗಿರುವ ಥಾಪ್ (THAP) ಈ ವಿಭಾಗದ ಜನಪ್ರಿಯ ಆ್ಯಪ್ ಆಗಿದೆ. ಜನ ತಮ್ಮ ಮಾನಸಿಕ ಯೋಗಕ್ಷೇಮ ಸುಧಾರಿಸಲು ಮತ್ತು ಖಿನ್ನತೆ, ಆತಂಕ ಮತ್ತು ಒತ್ತಡದಂತಹ ಸಮಸ್ಯೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಉತ್ತಮ ವಿಷಯ ಸಂಗ್ರಹಣೆ ಹೊಂದಿದ್ದು, ಪರವಾನಗಿ ಪಡೆದ ಅಧಿಕೃತ ವೈದ್ಯರಿಂದ ಸಮಾಲೋಚನೆ ಕೂಡ ಇದರಲ್ಲಿ ಲಭ್ಯವಿದೆ.

ವೈಯಕ್ತಿಕ ಬೆಳವಣಿಗೆಗೆ ಸಹಾಯ ಮಾಡುವ ಆ್ಯಪ್​ಗಳನ್ನು ನೋಡುವುದಾದರೆ- ಇನ್ಫಿನಿಟಿ ಲರ್ನ್ (Infinity Learn) ಮತ್ತು ಅಪ್​ಗ್ರಾಡ್ (upGrad) ಉತ್ತಮ ಗುಣಮಟ್ಟದ ಮತ್ತು ಆಕರ್ಷಕ ಕಲಿಕೆಯ ಮಾರ್ಗಗಳೊಂದಿಗೆ ಇ-ಕಲಿಕೆಯ ಅಗತ್ಯಗಳನ್ನು ಪೂರೈಸುತ್ತಿವೆ. ಹಾಗೆಯೇ ಆಂಬಿಷನ್ ಬಾಕ್ಸ್ (AmbitionBox) ಜನರಿಗೆ ಹೆಚ್ಚು ಮಾಹಿತಿಯುಕ್ತ ವೃತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಿದೆ ಎಂದು ಗೂಗಲ್ ಹೇಳಿದೆ.

ಗೇಮಿಂಗ್ ವಿಭಾಗದಲ್ಲಿ ಮೊನೊಪಲಿ ಗೋ (Monopoly Go) ವರ್ಷದ ಅತ್ಯುತ್ತಮ ಗೇಮ್ ಪ್ರಶಸ್ತಿ ಪಡೆದಿದೆ. ಈ ಗೇಮ್ ವರ್ಷಪೂರ್ತಿ ಹೊಸ ಮತ್ತು ರೋಮಾಂಚಕ ಬೋರ್ಡ್​ಗಳು, ಪಾತ್ರಗಳು ಮತ್ತು ಘಟನೆಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಅತಿ ಜನಪ್ರಿಯ ಮಲ್ಟಿಪ್ಲೇಯರ್ ಬೋರ್ಡ್ ಗೇಮ್​ ಆಗಿದೆ ಎಂದು ಗೂಗಲ್ ತಿಳಿಸಿದೆ.

ಸಾಹಸ ಹಾಗೂ ರೋಮಾಂಚಕ ಗೇಮ್ ಸಬ್ ವೇ ಸರ್ಫರ್ಸ್​ ಕ್ರೂ (Subway Surfers crew) ಹಾಗೂ ಸಬ್​ವೇ ಸರ್ಫರ್ಸ್​ ಬ್ಲಾಸ್ಟ್​ (Subway Surfers Blast) ಕೂಡ ಭಾರತದಲ್ಲಿ ಜನಪ್ರಿಯ ಗೇಮ್​ಗಳಾಗಿ ಹೊರಹೊಮ್ಮಿವೆ. ಬೆಸ್ಟ್ ಪಿಕ್ ಅಪ್ & ಪ್ಲೇ ವಿಭಾಗದಲ್ಲಿ ಮೈಟಿ ಡೂಮ್ (Mighty Doom) ಮುಂಚೂಣಿಯಲ್ಲಿದೆ.

ಇನ್ನು ಬ್ಯಾಟಲ್ ಗ್ರೌಂಡ್ಸ್​ ಮೊಬೈಲ್ ಇಂಡಿಯಾ (ಬಿಜಿಎಂಐ) (Battlegrounds Mobile India) ಹೊಸ NUSA ಮ್ಯಾಪ್ ಮತ್ತು ಡ್ರ್ಯಾಗನ್ ಸೂಪರ್ ಬಾಲ್ ಪಾತ್ರಗಳ ಏಕೀಕರಣದಂತಹ ಹೊಸ ಅಪ್ಡೇಟ್​ಗಳಿಂದ ಗೇಮಿಂಗ್ ಸಮುದಾಯದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದೆ. ಇದು ಗೂಗಲ್ ಪ್ಲೇನ Best Ongoing Game category ವಿಭಾಗದ ವಿಜೇತರಲ್ಲಿ ಒಂದಾಗಿದೆ.

ಇದನ್ನೂ ಓದಿ : ಸ್ಪೀಚ್ ರೆಕಗ್ನಿಷನ್ ಸಾಫ್ಟ್​ವೇರ್ ಅಳವಡಿಸಿಕೊಳ್ಳಲಿದೆ ಯುಪಿ ವಿಧಾನಸಭೆ: ಟೆಂಡರ್ ಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.