ETV Bharat / science-and-technology

ವಿಂಡೋಸ್​​ 11ನಲ್ಲಿ 'Unsupported Processor' ದೋಷ; ಹೊಸ ಅಪ್ಡೇಟ್​ ನಂತರ ಶುರುವಾದ ಸಮಸ್ಯೆ​

ವಿಂಡೋಸ್​ 11 ರಲ್ಲಿ ಹೊಸ ಅಪ್ಡೇಟ್​​ ಇನ್​ಸ್ಟಾಲ್ ಮಾಡಿದ ನಂತರ Unsupported Processor ದೋಷ ಕಾಣಿಸಿಕೊಂಡಿದೆ ಎಂದು ವರದಿಗಳು ಹೇಳಿವೆ.

Microsoft investigating 'unsupported processor'

author img

By ETV Bharat Karnataka Team

Published : Aug 24, 2023, 7:45 PM IST

ಸ್ಯಾನ್ ಫ್ರಾನ್ಸಿಸ್ಕೋ : ಈ ವಾರದ ಆರಂಭದಲ್ಲಿ ಬಿಡುಗಡೆಯಾದ ಹೊಸ ಅಪ್ಡೇಟ್​​ ಇನ್​ಸ್ಟಾಲ್​ ಮಾಡಿದ ನಂತರ ಕೆಲ ವಿಂಡೋಸ್ 11 ಪಿಸಿಗಳಲ್ಲಿ "UNSUPPORTED_PROCESSOR" ದೋಷ ಕಾಣಿಸಿಕೊಂಡಿದೆ. UNSUPPORTED_PROCESSOR ಸಂದೇಶದೊಂದಿಗೆ ಕಾಣಿಸುವ ಬ್ಲೂ ಸ್ಕ್ರೀನ್ ಆಫ್ ಡೆತ್ (ಬಿಎಸ್ಒಡಿ) ವರದಿಗಳ ಬಗ್ಗೆ ತನಿಖೆ ನಡೆಸುವುದಾಗಿ ಮೈಕ್ರೋಸಾಫ್ಟ್ ಹೇಳಿದೆ.

ಹೊಸ ಅಪ್ಡೇಟ್​​ ಸಾಮಾನ್ಯ ಮಾಸಿಕ ಪರಿಹಾರಗಳನ್ನು ಒಳಗೊಂಡಿದೆ, ಆದರೆ ಇದು ಕೆಲವು ಎಂಎಸ್ಐ ಮದರ್​ಬೋರ್ಡ್​​ಗಳಲ್ಲಿ ದೋಷ ಉಂಟು ಮಾಡುತ್ತಿದೆ ಎಂದು ವರದಿಗಳು ಹೇಳಿವೆ. "ಇದು ಮೈಕ್ರೋಸಾಫ್ಟ್​​ನಿಂದ ಎದುರಾದ ಸಮಸ್ಯೆಯೇ ಎಂಬುದನ್ನು ನಿರ್ಧರಿಸಲು ನಾವು ಪ್ರಸ್ತುತ ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿ ಲಭ್ಯವಾದ ನಂತರ ನಾವು ಈ ಬಗ್ಗೆ ಅಪ್ಡೇಟ್​ ನೀಡುತ್ತೇವೆ" ಎಂದು ಮೈಕ್ರೋಸಾಫ್ಟ್​ನ ವಿಂಡೋಸ್ ಹೆಲ್ತ್​​ ಸೆಂಟರ್​ನ ನೋಟ್​​ನಲ್ಲಿ ತಿಳಿಸಲಾಗಿದೆ.

ಯಾವುದೋ ಗಂಭೀರ ದೋಷದ ಕಾರಣದಿಂದ ವಿಂಡೋಸ್​ ಶಟ್​ಡೌನ್ ಆಗುವುದು ಅಥವಾ ಅನಿರೀಕ್ಷಿತವಾಗಿ ರಿಸ್ಟಾರ್ಟ್​​ ಆಗಲು ಆರಂಭಿಸಿದರೆ ಆವಾಗ ಬ್ಲೂ ಸ್ಕ್ರೀನ್​ ದೋಷ ಕಾಣಿಸಿಕೊಳ್ಳುತ್ತದೆ. ಇದನ್ನು ಕೆಲ ಬಾರಿ ಬ್ಲ್ಯಾಕ್ ಸ್ಕ್ರೀನ್ ದೋಷ ಅಥವಾ STOP code ದೋಷ ಎಂದೂ ಕರೆಯಲಾಗುತ್ತದೆ. "ನಿಮ್ಮ ಕಂಪ್ಯೂಟರ್ ಗೆ ಹಾನಿಯಾಗದಂತೆ ತಡೆಯಲು ವಿಂಡೋಸ್​​ ಅನ್ನು ಶಟ್‌ಡೌನ್ ಮಾಡಲಾಗಿದೆ" ಎಂಬ ಸಂದೇಶ ಅಥವಾ ಇದೇ ರೀತಿಯ ಸಂದೇಶ ಕಾಣಿಸಿಕೊಳ್ಳುತ್ತಿದೆ ಎಂದು ಮೈಕ್ರೊಸಾಫ್ಟ್​ ಹೇಳಿದೆ.

ಕಂಪನಿಯ ಪ್ರಕಾರ, ಈ ದೋಷಗಳು ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಸಮಸ್ಯೆಗಳಿಂದಲೂ ಉಂಟಾಗಬಹುದು. ಇದಲ್ಲದೆ, ಅಪ್ಡೇಟ್​​ ಅನ್ನು ಇನ್​ಸ್ಟಾಲ್ ಮಾಡಿದ ನಂತರ ಹಲವಾರು ರೆಡ್ಡಿಟ್ ಬಳಕೆದಾರರು ಅದೇ ರೀತಿಯ ಬಿಎಸ್ಒಡಿ ದೋಷವನ್ನು ವರದಿ ಮಾಡಿದ್ದಾರೆ. ಅವರೆಲ್ಲರೂ ಇತ್ತೀಚಿನ ಬಯೋಸ್ ಅಪ್ಡೇಟ್​​ಗಳೊಂದಿಗೆ ಎಂಎಸ್ಐ ಮದರ್​ಬೋರ್ಡ್​ಗಳೊಂದಿಗೆ ಇಂಟೆಲ್ ಸಿಸ್ಟಮ್​ಗಳನ್ನು ಹೊಂದಿದ ಕಂಪ್ಯೂಟರ್​ಗಳನ್ನು ಬಳಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಆದಾಗ್ಯೂ ಮೈಕ್ರೊಸಾಫ್ಟ್​ ದೋಷ ಕಾಣಿಸಿಕೊಂಡ ಕಂಪ್ಯೂಟರುಗಳಿಂದ ಇತ್ತೀಚಿನ (ಕೆಬಿ 5029351) ಅಪ್ಡೇಟ್​​ ಅನ್ನು ಹಿಂತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಆದರೆ ಇದು ಇನ್ನೂ ಎಲ್ಲರಿಗೂ ಲಭ್ಯವಿದೆ. ಏತನ್ಮಧ್ಯೆ, ಮೈಕ್ರೋಸಾಫ್ಟ್ ವಿಂಡೋಸ್ 11 ನಲ್ಲಿ ತನ್ನ ಡಿಜಿಟಲ್ ಅಸಿಸ್ಟಂಟ್​​ ಕೊರ್ಟಾನಾ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಸ್ವತಂತ್ರ ಅಪ್ಲಿಕೇಶನ್ ಆಗಿ ವಿಂಡೋಸ್​ನಲ್ಲಿ ಕೊರ್ಟಾನಾ ಅನ್ನು ತೆಗೆದುಹಾಕಲಾಗಿದ್ದರೂ, ಟೀಮ್ಸ್ ಮೊಬೈಲ್, ಮೈಕ್ರೋಸಾಫ್ಟ್ ಟೀಮ್ಸ್ ಡಿಸ್ ಪ್ಲೇ ಮತ್ತು ಮೈಕ್ರೋಸಾಫ್ಟ್ ಟೀಮ್ಸ್ ರೂಮ್ ಗಳಲ್ಲಿ ಕೊರ್ಟಾನಾಗೆ ಸಪೋರ್ಟ್​ 2023 ರ ಅಂತ್ಯದಲ್ಲಿ ಕೊನೆಗೊಳ್ಳಲಿದೆ.

ಮೈಕ್ರೋಸಾಫ್ಟ್ ವಿಶ್ವದ ಅತಿದೊಡ್ಡ ಕಂಪ್ಯೂಟರ್ ಸಾಫ್ಟ್ ವೇರ್ ಮಾರಾಟಗಾರ ಕಂಪನಿಯಾಗಿದೆ. ಇದು ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳು, ವಿಡಿಯೋ ಗೇಮ್‌ಗಳು, ಕಂಪ್ಯೂಟರ್ ಮತ್ತು ಗೇಮಿಂಗ್ ಹಾರ್ಡ್ ವೇರ್, ಹುಡುಕಾಟ ಮತ್ತು ಇತರ ಆನ್‌ಲೈನ್ ಸೇವೆಗಳ ಪ್ರಮುಖ ಪೂರೈಕೆದಾರನಾಗಿದೆ. ಮೈಕ್ರೋಸಾಫ್ಟ್​ನ ಕಾರ್ಪೊರೇಟ್ ಪ್ರಧಾನ ಕಚೇರಿ ರೆಡ್ಮಂಡ್ ವಾಶ್​ನಲ್ಲಿದೆ. ಇದು 60 ಕ್ಕೂ ಹೆಚ್ಚು ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ.

ಇದನ್ನೂ ಓದಿ : 370ನೇ ವಿಧಿ ಮೇಲಿನ ನಿಮ್ಮ ತೀರ್ಪು ಮಾನಸಿಕ ದ್ವಂದ್ವ ಕೊನೆಗಾಣಿಸಲಿದೆ: ಸುಪ್ರೀಂ ಕೋರ್ಟ್​ನಲ್ಲಿ ಕೇಂದ್ರದ ವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.