ವಾಷಿಂಗ್ಟನ್: ಟ್ವಿಟರ್ನಲ್ಲಿ ನೂತನ ಬದಲಾವಣೆಯೊಂದು ಆಗಿದೆ. ಪ್ರತಿ ಖಾತೆಗೂ ಬ್ಲೂಟಿಕ್ ಇದ್ದಿದ್ದು, ಇದೀಗ ಕೆಲವು ಖಾತೆಗಳು ಚಿನ್ನದ ಬಣ್ಣಕ್ಕೆ ತಿರುಗಿವೆ. ಕಂಪನಿಗಳ ಖಾತೆಗಳಿಗೆ ಚಿನ್ನದ ಬಣ್ಣ, ಸರ್ಕಾರದ ಖಾತೆಗೆ ಬೂದು ಬಣ್ಣ ಮತ್ತು ಸೆಲಿಬ್ರಿಟಿ ಅಥವಾ ಇತರೆ ವ್ಯಕ್ತಿಗಳ ಖಾತೆಗಳು ಬ್ಲೂ ಬಣ್ಣದ ಟಿಕ್ಗಳನ್ನು ಪಡೆಯುತ್ತದೆ ಎಂದು ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.
ಹಲವು ಬಳಕೆದಾರರು ಟ್ವಿಟರ್ ಚಂದಾದಾರ ಯೋಜನೆಯನ್ನು ಪಡೆದುಕೊಂಡು ಖ್ಯಾತ ವ್ಯಕ್ತಿಗಳ ಹೆಸರಿನಲ್ಲಿ ಟ್ವಿಟರ್ ಖಾತೆಗಳನ್ನು ತೆರೆದು ಜನರನ್ನು ಹಾದಿತಪ್ಪಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಎಲಾನ್ ಮಸ್ಕ್(Elon Musk) ಚಂದಾ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮುಂದಿನ ಶುಕ್ರವಾರದಿಂದ ಪುನಾರಂಭಿಸಲಾಗುವುದು ಎಂದು ಹೇಳಿದ್ದರು. ಆ ಬಳಿಕ ಖಾತೆಗಳ ಬಣ್ಣಗಳು ಬದಲಾಗಲಿವೆ ಎಂಬ ಮಾಹಿತಿಯನ್ನು ಹೊರಹಾಕಿದ್ದರು. ಇದೀಗ ಅಧಿಕೃತವಾಗಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಟ್ವಿಟರ್ ಭಾನುವಾರದಿಂದ ಎಲ್ಲಾ ಬಳಕೆದಾರರಿಗೆ 'ಕಮ್ಯೂನಿಟಿ ನೋಟ್ಸ್' ಎನ್ನುವ ಹೊಸ ಆಪ್ಷನ್ ಒಂದನ್ನು ನೀಡಿದ್ದು, ಕಮ್ಯೂನಿಟಿ ನೋಟ್ಸ್ ಮೂಲಕ ಉತ್ತಮ ಮಾಹಿತಿಯುಳ್ಳ ಜಗತ್ತನ್ನು ನಿರ್ಮಿಸುವ ಗುರಿಯನ್ನು ಟ್ವಿಟರ್ ಹೊಂದಿದೆ. ಇಲ್ಲಿ ಟ್ವಿಟ್ಟರ್ ಬಳಕೆದಾರರು ಯಾವುದೇ ಟ್ವೀಟ್ ಮೇಲೆ ಟಿಪ್ಪಣಿಗಳನ್ನು ಬರೆಯಬಹುದು. ಅಲ್ಲದೇ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ನಲ್ಲಿ ಅಕ್ಷರಗಳ ಮಿತಿಯನ್ನು 280 ರಿಂದ 4000ಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ:ಟ್ವಿಟರ್ ಪದಗಳ ಮಿತಿ 280 ರಿಂದ 4000 ಕ್ಕೆ ಹೆಚ್ಚಳ: ಬಳಕೆದಾರರ ಪ್ರಶ್ನೆಗೆ ಹೌದು ಎಂದ ಎಲಾನ್ ಮಸ್ಕ್