ETV Bharat / science-and-technology

ಬುಧನಿಗೆ ಅಪ್ಪಳಿಸಿದ ಸೂರ್ಯನಿಂದ ಹೊರಟ ಪ್ಲಾಸ್ಮಾ ಅಲೆ : ಏನಾಗಿದೆ ಬುಧನ ವಾತಾವರಣದಲ್ಲಿ? - ಕರೋನಲ್ ಮಾಸ್ ಎಜೆಕ್ಷನ್ ಎಂದರೇನು?

ಪ್ಲಾಸ್ಮಾ ಅಲೆಯಿಂದ ಬುಧನಲ್ಲಿ ಉಂಟಾದ ಪರಿಣಾಮಗಳು ಅನೇಕ. ಆ ಪ್ಲಾಸ್ಮಾ ಅಲೆ ಬುಧನ ವಾತಾವರಣದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿದೆ. ಕಾಂತೀಯ ಚಂಡಮಾರುತವೊಂದು ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ..

Sun storms Mercury with a plasma wave
ಬುಧನಿಗೆ ಅಪ್ಪಳಿಸಿದ ಸೂರ್ಯನಿಂದ ಹೊರಟ ಪ್ಲಾಸ್ಮಾ ಅಲೆ: ಏನಾಗಿದೆ ಬುಧನ ವಾತಾರಣದಲ್ಲಿ?
author img

By

Published : Apr 16, 2022, 5:00 PM IST

Updated : Apr 16, 2022, 6:40 PM IST

ವಾಷಿಂಗ್ಟನ್, ಅಮೆರಿಕ : ವಿಶ್ವ ಕುತೂಹಲಗಳ ಕಣಜ. ಒಂದು ಕುತೂಹಲದ ಬೆನ್ನತ್ತಿದರೆ ಲಕ್ಷಾಂತರ ಪ್ರಶ್ನೆಗಳು ಕುತೂಹಲಗಳಾಗಿ ಮಾರ್ಪಾಡಾಗುತ್ತವೆ. ಗೆಲಾಕ್ಸಿ, ಸೌರಮಂಡಲ, ಗ್ರಹಗಳೂ ಈಗಲೂ ವಿಜ್ಞಾನಿಗಳಿಗೆ ಕುತೂಹಲ ಮೂಡಿಸುವ ವಿಚಾರಗಳೇ ಆಗಿವೆ. ಗ್ರಹಗಳ ಕುರಿತ ಸಂಶೋಧನೆಗಳು ನಡೆಯುತ್ತಲೇ ಇವೆ. ಈ ಸಂಶೋಧನೆಗಳು ಒಂದಲ್ಲಾ ಒಂದು ವಿಸ್ಮಯಕಾರಿ ವಿಚಾರವನ್ನು ಬಹಿರಂಗಪಡಿಸುತ್ತವೆ. ಈಗ ಲೈವ್ ಸೈನ್ಸ್​ ಎಂಬ ವಿಜ್ಞಾನದ ವಿಚಾರಗಳನ್ನು ಪ್ರಕಟಿಸುವ ವೆಬ್​ಸೈಟ್ ಒಂದು ಅಚ್ಚರಿಯ ವಿಚಾರವನ್ನು ಬಹಿರಂಗಪಡಿಸಿದೆ.

ಸೌರಮಂಡಲದಲ್ಲಿ ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹ ಬುಧ. ಈ ಗ್ರಹ ಸೂರ್ಯನ ಹತ್ತಿರವಿರುವ ಕಾರಣದಿಂದ ಸೂರ್ಯನಲ್ಲಿ ಯಾವುದೇ ಬದಲಾವಣೆಯಾದರೂ, ಅದರ ಮೊದಲ ಪರಿಣಾಮವನ್ನು ಬುಧ ಗ್ರಹವೇ ಎದುರಿಸುತ್ತದೆ. ಸೂರ್ಯ ಶಾಖವನ್ನು, ಶಾಖದ ಜೊತೆಗೆ ಬೆಳಕನ್ನು ಉಗುಳುವಂತೆ ಹಲವಾರು ವಿಕಿರಣಗಳನ್ನೂ ಉಗುಳುತ್ತಾನೆ ಎಂಬುದು ಗೊತ್ತಿರುವ ವಿಚಾರ. ಆದರೆ, ಈಗ ಸೂರ್ಯ ಪ್ಲಾಸ್ಮಾ ಅಲೆಯನ್ನು ಉಗುಳಿದ್ದಾನೆ. ಹೌದು, ಏಪ್ರಿಲ್ 11ರಂದು ಸಂಜೆ ಸೂರ್ಯ ಬೃಹತ್​ ಮಟ್ಟದಲ್ಲಿ ಪ್ಲಾಸ್ಮಾ ಅಲೆಯನ್ನು ಉಗುಳಿದ್ದಾನೆ.

ಸೂರ್ಯ ಉಗುಳಿದ ಪ್ಲಾಸ್ಮಾ ಅಲೆ ಸಮೀಪದಲ್ಲೇ ಇರುವ ಬುಧ ಗ್ರಹವನ್ನು ಏಪ್ರಿಲ್ 12ರಂದು ಅಪ್ಪಳಿಸಿದೆ. ಅಂದರೆ ಸೂರ್ಯನಿಂದ ಉಗುಳಲ್ಪಟ್ಟ ಪ್ಲಾಸ್ಮಾ ಅಲೆ ಸಮೀಪದ ಬುಧಗ್ರಹವನ್ನು ತಲುಪಿರುವ ಸಮಯ 24 ಗಂಟೆಗಿಂತ ಕಡಿಮೆ ಎಂದು spaceweather.com ವರದಿ ಮಾಡಿದೆ. ಈ ರೀತಿಯಾಗಿ ಸೂರ್ಯ ಪ್ಲಾಸ್ಮಾ ಅನ್ನು ಹೊರ ಹಾಕುವ ಪ್ರಕ್ರಿಯೆಗೆ ಕರೋನಾಲ್ ಮಾಸ್ ಎಜೆಕ್ಷನ್ (CME- Coronal Mass Ejection) ಎಂದು ಕರೆಯಲಾಗುತ್ತದೆ. ತುಂಬಾ ಸರಳವಾಗಿ ಹೇಳುವುದಾದರೆ, ಸೂರ್ಯ ಹೊರಮೈ ಅನ್ನು ಕರೋನಾ ಎಂದು ಕರೆಯಲಾಗುತ್ತದೆ. ಕರೋನಾದಿಂದ ಹೊರ ಹಾಕುವ ಜ್ವಾಲೆ ಅಥವಾ ಇತ್ಯಾದಿಗಳನ್ನು ಕರೋನಾಲ್ ಮಾಸ್ ಎಜೆಕ್ಷನ್ ಎಂದು ಕರೆಯಲಾಗುತ್ತದೆ.

ಭೂಮಿಯಲ್ಲಿ ಇರುವುದು ನಾಲ್ಕು ರೀತಿಯ ದ್ರವ್ಯದ ಸ್ಥಿತಿಗಳು. ನಾವು ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡರೆ ಈ ನಾಲ್ಕು ದ್ರವ್ಯದ ಸ್ಥಿತಿಗಳಲ್ಲಿ ಯಾವುದಾದರೊಂದು ಗುಂಪಿಗೆ ಸೇರಿರುತ್ತದೆ. ಉದಾಹರಣೆಗೆ ಒಂದು ಕಲ್ಲನ್ನು ಘನ ಎಂದೂ, ನೀರನ್ನು ದ್ರವ ಎಂದು, ಗಾಳಿಯನ್ನು ಅನಿಲ ಎಂದು ಕರೆಯಾಗುತ್ತದೆ. ಈ ಮೂರೂ ದ್ರವ್ಯದ ಸ್ಥಿತಿಯನ್ನು ಹೊರತುಪಡಿಸಿದರೆ ಇರುವುದೇ ಪ್ಲಾಸ್ಮಾ. ಇದೇ ಪ್ಲಾಸ್ಮಾವನ್ನೇ ಸೂರ್ಯ ಬುಧಗ್ರಹಕ್ಕೆ ಉಗುಳಿದ್ದಾನೆ. ವಿಜ್ಞಾನಿಗಳು ಅಂದಾಜಿಸಿದ್ದಕ್ಕಿಂತ ವೇಗವಾಗಿ ಈ ಪ್ರಕ್ರಿಯೆ ಜರುಗಿದೆ ಎಂದು ಹೇಳಲಾಗುತ್ತಿದೆ.

ಪ್ಲಾಸ್ಮಾ ಅಲೆಯಿಂದ ಬುಧನಲ್ಲಿ ಉಂಟಾದ ಪರಿಣಾಮಗಳು ಅನೇಕ. ಆ ಪ್ಲಾಸ್ಮಾ ಅಲೆ ಬುಧನ ವಾತಾವರಣದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿದೆ. ಕಾಂತೀಯ ಚಂಡಮಾರುತವೊಂದು ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬುಧ ಗ್ರಹಕ್ಕೆ ಈಗಾಗಲೇ ಧೂಮಕೇತುವಿಗೆ ಇದ್ದಂತೆ ಬಾಲವಿದ್ದು, ಆ ಬಾಲಕ್ಕೆ ಕೆಲ ವಸ್ತುಗಳನ್ನು ಪ್ಲಾಸ್ಮಾ ಅಲೆ ಸೇರಿಸಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಪ್ಲಾಸ್ಮಾ ಅಲೆ ಬಿಡುಗಡೆಯಾಗಿರುವುದು ಸೂರ್ಯನಲ್ಲಿ ಅತ್ಯಂತ ಆಯಸ್ಕಾಂತೀಯ ಗುಣವಿರುವ ಭಾಗಗಳಿಂದ ಪ್ಲಾಸ್ಮಾ ಅಲೆ ಬಿಡುಗಡೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಗೆ ಅತ್ಯಂತ ಹೆಚ್ಚು ಕಾಂತೀಯ ಶಕ್ತಿ ಇದೆ. ಒಂದು ವೇಳೆ ಸೂರ್ಯನಿಂದ ಬರುವ ಯಾವುದಾದರೂ ವಿಕಿರಣವನ್ನು ಅಥವಾ ಪ್ಲಾಸ್ಮಾವನ್ನು ಹೀರಿಕೊಳ್ಳುವ ಶಕ್ತಿ ಭೂಮಿಗೆ ಇದೆ. ಆದರೆ ಬುಧ ಗ್ರಹಕ್ಕೆ ಈ ರೀತಿಯ ಅಯಸ್ಕಾಂತೀಯ ಶಕ್ತಿ ಇಲ್ಲ. ಆದ್ದರಿಂದ ಬುಧ ಗ್ರಹಕ್ಕೆ ಬಂದ ವಿಕಿರಣ ಅಥವಾ ಪ್ಲಾಸ್ಮಾ ಬುಧದ ಆಕಾಶಕ್ಕೆ ಸೆಳೆಯಲ್ಪಡುತ್ತದೆ. ಆದ್ದರಿಂದ ಬುಧಕ್ಕೆ ಬಾಲದ ರೀತಿಯಲ್ಲೋ ಅಥವಾ ಮಂಜು ಮುಸುಕಿದ ರೀತಿಯಲ್ಲೋ ಪ್ಲಾಸ್ಮಾ ಕಾಣಿಸಿಕೊಳ್ಳುತ್ತದೆ ಎಂದು ವಿಜ್ಞಾನಿಗಳ ಅಭಿಪ್ರಾಯ.

ಇದನ್ನೂ ಓದಿ: ಕಕ್ಷೆಯಲ್ಲಿ ಭಾರತ ಹೊಂದಿರುವ ಸಕ್ರಿಯ-ನಿಷ್ಕ್ರಿಯ ಉಪಗ್ರಹಗಳು ಎಷ್ಟು ಗೊತ್ತಾ?

Last Updated : Apr 16, 2022, 6:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.