ನವದೆಹಲಿ : ಇತ್ತೀಚೆಗೆ ಸಂಭವಿಸುತ್ತಿರುವ ಕಾಳ್ಗಿಚ್ಚುಗಳಿಂದ ಹೊಹೊಮ್ಮುತ್ತಿರುವ ದಟ್ಟ ಹೊಗೆಯು ಭೂಮಿಯ ಓಝೋನ್ ಪದರದ ಚೇತರಿಕೆಯನ್ನು ನಿಧಾನಗೊಳಿಸುವ ಮತ್ತು ಮತ್ತೆ ಓಝೋನ್ ಪದರಕ್ಕೆ ಹಾನಿಯಾಗುವ ಅಪಾಯವನ್ನುಂಟುಮಾಡುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಓಝೋನ್ ಪದರವು ಸೂರ್ಯನ ಹಾನಿಕಾರಕ ನೇರಳಾತೀತ ವಿಕಿರಣದಿಂದ ಭೂಮಿಯನ್ನು ರಕ್ಷಿಸುವ ರಕ್ಷಣಾತ್ಮಕ ಹೊದಿಕೆಯಾಗಿದೆ. ಯುಎಸ್‌ನ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ಸಂಶೋಧಕರು ಈ ಬಗ್ಗೆ ಅಧ್ಯಯನ ಮಾಡಿದ್ದು, ಕಾಳ್ಗಿಚ್ಚು ವಾಯುಮಂಡಲಕ್ಕೆ ಹೊಗೆಯನ್ನು ಪಂಪ್ ಮಾಡಬಹುದು ಮತ್ತು ಹೀಗೆ ಅಲ್ಲಿಗೆ ಹೋದ ಹೊಗೆಯ ಕಣಗಳು ವರ್ಷದವರೆಗೆ ಅಲ್ಲಿಯೇ ತೇಲಬಹುದು ಎಂದು ಹೇಳಿದ್ದಾರೆ.
ಅಲ್ಲಿಯೇ ಗಾಳಿಯಲ್ಲಿ ಅಂಟಿಕೊಂಡ ಈ ಕಣಗಳು ಓಝೋನ್ ಪದರವನ್ನು ಸವೆತಗೊಳಿಸುವ ರಾಸಾಯನಿಕ ಪ್ರತಿಕ್ರಿಯೆಗಳನ್ನು ಹೆಚ್ಚಾಗಿಸಬಹುದು. ನೇಚರ್ ಜರ್ನಲ್‌ನಲ್ಲಿ ಈ ಸಂಶೋಧನಾ ವರದಿಯು ಪ್ರಕಟವಾಗಿದ್ದು, ಇದು ಪೂರ್ವ ಆಸ್ಟ್ರೇಲಿಯಾದಲ್ಲಿ ಬ್ಲ್ಯಾಕ್ ಸಮ್ಮರ್ ಮೆಗಾಫೈರ್‌ನ ಹೊಗೆಯ ಮೇಲೆ ಅಧ್ಯಯನವನ್ನು ಕೇಂದ್ರೀಕರಿಸಿದೆ. ಬ್ಲ್ಯಾಕ್ ಸಮ್ಮರ್ ಮೆಗಾ ಫೈರ್ ಕಾಳ್ಗಿಚ್ಚು ಡಿಸೆಂಬರ್ 2019 ರಿಂದ ಜನವರಿ 2020 ರವರೆಗೆ ಉಂಟಾಗಿತ್ತು. ಆಸ್ಟ್ರೇಲಿಯಾದ ಇತಿಹಾಸದಲ್ಲೇ ಅತಿ ಭೀಕರ ಕಾಳ್ಗಿಚ್ಚು ಎಂದು ಹೇಳಲಾಗಿರುವ ಇದು, ಹತ್ತಾರು ಮಿಲಿಯನ್ ಎಕರೆಗಳಷ್ಟು ಕಾಡು ಸುಟ್ಟುಹಾಕಿತು ಮತ್ತು ಒಂದು ಮಿಲಿಯನ್ ಟನ್‌ಗಿಂತಲೂ ಹೆಚ್ಚು ಹೊಗೆಯನ್ನು ವಾತಾವರಣಕ್ಕೆ ಪಂಪ್ ಮಾಡಿದೆ.
ಆಸ್ಟ್ರೇಲಿಯಾದ ಕಾಳ್ಗಿಚ್ಚುಗಳಿಂದ ಹೊಗೆ ಕಣಗಳು ಓಝೋನ್ ಸವಕಳಿಯನ್ನು ಇನ್ನಷ್ಟು ಹದಗೆಡಿಸುವ ಹೊಸ ರಾಸಾಯನಿಕ ಕ್ರಿಯೆಯನ್ನು ಸಂಶೋಧಕರು ಗುರುತಿಸಿದ್ದಾರೆ. ಈ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಮೂಲಕ, ದಕ್ಷಿಣ ಗೋಳಾರ್ಧದ ಮಧ್ಯ ಅಕ್ಷಾಂಶಗಳಲ್ಲಿ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ಭಾಗಗಳಲ್ಲಿ ಒಟ್ಟು ಓಝೋನ್‌ನ 3-5 ಪ್ರತಿಶತದಷ್ಟು ಸವಕಳಿಗೆ ಬೆಂಕಿಯು ಕೊಡುಗೆ ನೀಡುತ್ತದೆ. ಸಂಶೋಧಕರ ಮಾದರಿಯು ಧ್ರುವ ಪ್ರದೇಶಗಳಲ್ಲಿ ಬೆಂಕಿಯ ಪರಿಣಾಮವನ್ನು ಬೀರುತ್ತದೆ ಎಂದು ಸೂಚಿಸಿದೆ.
2020 ರ ಅಂತ್ಯದ ವೇಳೆಗೆ, ಆಸ್ಟ್ರೇಲಿಯಾದ ಕಾಳ್ಗಿಚ್ಚುಗಳಿಂದ ಹೊರಬಂದ ಹೊಗೆ ಕಣಗಳು ಅಂಟಾರ್ಕ್ಟಿಕ್ ಓಝೋನ್ ರಂಧ್ರವನ್ನು 2.5 ಮಿಲಿಯನ್ ಚದರ ಕಿಲೋಮೀಟರ್ಗಳಷ್ಟು ಹೆಚ್ಚಾಗಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅದರ ಪ್ರದೇಶದ ಶೇಕಡಾ 10 ರಷ್ಟು ಪ್ರದೇಶವನ್ನು ಹೊಗೆ ಕಣಗಳು ವ್ಯಾಪಿಸಿವೆ ಎಂದು ಸಂಶೋಧಕರು ಹೇಳಿದ್ದಾರೆ. ಓಝೋನ್ ಪದರು ಚೇತರಿಕೆಯ ಮೇಲೆ ಕಾಳ್ಗಿಚ್ಚುಗಳು ಯಾವ ರೀತಿಯಲ್ಲಿ ದೀರ್ಘಕಾಲೀನ ಪರಿಣಾಮ ಬೀರುತ್ತವೆ ಎಂಬುದು ಅಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ವಿಶ್ವಸಂಸ್ಥೆಯು ಇತ್ತೀಚೆಗೆ ಓಝೋನ್ ರಂಧ್ರ ಮತ್ತು ಓಝೋನ್ ಸವಕಳಿಯು ಪ್ರಪಂಚದಾದ್ಯಂತ ಕಡಿಮೆಯಾಗುವ ಹಾದಿಯಲ್ಲಿದೆ ಎಂದು ವರದಿ ಮಾಡಿದೆ.
ಆದಾಗ್ಯೂ, ಇತ್ತೀಚಿನ ಅಧ್ಯಯನದ ಪ್ರಕಾರ- ರಾಸಾಯನಿಕಗಳು ವಾತಾವರಣದಲ್ಲಿ ಉಳಿದಿರುವಾಗ ಮತ್ತೆ ದೊಡ್ಡ ಪ್ರಮಾಣದ ಬೆಂಕಿ ಉಂಟಾದಾಗ ಓಝೋನ್ ಪದರು ತಾತ್ಕಾಲಿಕವಾಗಿ ಕ್ಷೀಣಿಸುವ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ. 2020 ರ ಆಸ್ಟ್ರೇಲಿಯಾದ ಕಾಳ್ಗಿಚ್ಚು ನಿಜವಾಗಿಯೂ ವಿಜ್ಞಾನಿಗಳ ಸಮುದಾಯಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದು MIT ಯ ಪ್ರಾಧ್ಯಾಪಕ ಸುಸಾನ್ ಸೊಲೊಮನ್ ಹೇಳಿದರು.
ಇದನ್ನೂ ಓದಿ : ಕುಡುತನಕ್ಕೆ ಕಾರಣವಾಗಬಹುದಾದ IIH ತಲೆನೋವಿಗೆ ಹೊಷ ಔಷಧ: ಅಧ್ಯಯನ