ETV Bharat / science-and-technology

ಪೂರ್ಣ ಸೂರ್ಯನ ಮೊದಲ ಚಿತ್ರ ಸೆರೆಹಿಡಿದು ಭೂಮಿಗೆ ರವಾನಿಸಿದ ಆದಿತ್ಯ ಎಲ್​-1 ನೌಕೆ: ಇಸ್ರೋ - Aditya L 1 Mission

ಸೂರ್ಯನ ಅಧ್ಯಯನ ನಡೆಸುತ್ತಿರುವ ಆದಿತ್ಯ ಎಲ್​ 1 ಸೌರ ನೌಕೆ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಪೂರ್ಣ ಸೂರ್ಯನ ಮೊದಲ ಚಿತ್ರವನ್ನು ಸೆರೆಹಿಡಿದು ಭೂಮಿಗೆ ರವಾನಿಸಿದೆ.

ಆದಿತ್ಯ ಎಲ್​ 1 ನೌಕೆ
ಆದಿತ್ಯ ಎಲ್​ 1 ನೌಕೆ
author img

By ETV Bharat Karnataka Team

Published : Dec 9, 2023, 11:36 AM IST

Updated : Dec 9, 2023, 11:49 AM IST

ಹೈದರಾಬಾದ್: ಸೌರ ಅಧ್ಯಯನಕ್ಕಾಗಿ ಹಾರಿ ಬಿಡಲಾದ ಭಾರತದ ಆದಿತ್ಯ ಎಲ್ 1 ಮಿಷನ್ ಮೊದಲ ಬಾರಿಗೆ ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದು ಕಳುಹಿಸಿದೆ. ಅಲ್ಟ್ರಾವೈಲೆಟ್ ತರಂಗಾಂತರದ ಬಳಿಯ ಈ ಫೋಟೋಗಳಿಂದ ಸೂರ್ಯನ ಫೋಟೋಸ್ಪಿಯರ್ (ದ್ಯುತಿಗೋಳ) ಹಾಗೂ ಕ್ರೋಮೋಸ್ಪಿಯರ್ ಸಂಕೀರ್ಣವಾದ ಒಳನೋಟಗಳನ್ನು ಇದು ಒದಗಿಸುತ್ತದೆ ಎಂದು ಇಸ್ರೋ ತಿಳಿಸಿದೆ.

ಆದಿತ್ಯ ಎಲ್​-2 ನೌಕೆ ಕಳುಹಿಸಿಕೊಟ್ಟಿರುವ ಸೂರ್ಯನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮವಾದ ಎಕ್ಸ್, ಇನ್​ಸ್ಟ್ರಾಗ್ರಾಮ್​​ನಲ್ಲಿ ಇಸ್ರೋ ಹಂಚಿಕೊಂಡಿದೆ. ನೌಕೆಯಲ್ಲಿರುವ ಸೌರ ಅಲ್ಟ್ರಾವೈಲೆಟ್ ಟೆಲಿಸ್ಕೋಪ್ ಅಥವಾ ಸ್ಯೂಟ್​( SUIT) ಉಪಕರಣವು 200-400 ಎನ್​ಎಂ ತರಂಗಾಂತರ ವ್ಯಾಪ್ತಿಯಲ್ಲಿ ಚಿತ್ರಗಳನ್ನು ಸೆರೆಹಿಡಿದಿದೆ. ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಮಾಹಿತಿ ನೀಡಿದೆ.

ನವೆಂಬರ್ 20 ರಂದು SUIT ಪೇಲೋಡ್ ಅನ್ನು ಕಾರ್ಯಾಚರಣೆ ನಡೆಸಲು ಸಕ್ರಿಯಗೊಳಿಸಲಾಗಿತ್ತು. ಅದು ಡಿಸೆಂಬರ್​ 6 ರಂದು ಪೂರ್ವ ನಿಯೋಜನೆಯಂತೆ ತನ್ನ ಮೊದಲ ಸೂರ್ಯನ ಚಿತ್ರಗಳನ್ನು ಸೆರೆಹಿಡಿಯಿತು. ಈ ಅಭೂತಪೂರ್ವ ಚಿತ್ರಗಳನ್ನು 11 ವಿಭಿನ್ನ ಫಿಲ್ಟರ್‌ಗಳನ್ನು ಬಳಸಿ ತೆಗೆಯಲಾಗಿದೆ. ಮೊದಲ ಬಾರಿಗೆ ಪೂರ್ಣ ಡಿಸ್ಕ್ ಸೂರ್ಯನ ತೋರಿಸುತ್ತದೆ. ಸೂರ್ಯನ ಸಂಪೂರ್ಣ ಡಿಸ್ಕ್ ಚಿತ್ರಗಳನ್ನು ಇತರ ವೀಕ್ಷಣಾಲಯಗಳಿಂದ ಅಧ್ಯಯನ ಮಾಡಲಾಗಿದೆ.

ಸೂರ್ಯನ ದ್ಯುತಿಗೋಳ ಮತ್ತು ಕ್ರೋಮೋಸ್ಪಿಯರ್‌ನ ಸಂಕೀರ್ಣ ವಿವರಗಳ ಕುರಿತು ವಿಜ್ಞಾನಿಗಳಿಗೆ ಇದು ಒಳನೋಟಗಳನ್ನು ಒದಗಿಸುತ್ತದೆ. ಜೊತೆಗೆ ಸೂರ್ಯನ ಕಲೆಗಳು, ಪ್ಲೇಜ್ ಮತ್ತು ಸೂರ್ಯನ ಶಾಂತ ಪ್ರದೇಶಗಳ ಲಕ್ಷಣಗಳ ಬಗ್ಗೆಯೂ ಅಧ್ಯಯನಕ್ಕೆ ನೆರವು ನೀಡಲಿದೆ ಎಂದು ಇಸ್ರೋ ತಿಳಿಸಿದೆ.

  • Aditya-L1 Mission:
    The SUIT payload captures full-disk images of the Sun in near ultraviolet wavelengths

    The images include the first-ever full-disk representations of the Sun in wavelengths ranging from 200 to 400 nm.

    They provide pioneering insights into the intricate details… pic.twitter.com/YBAYJ3YkUy

    — ISRO (@isro) December 8, 2023 " class="align-text-top noRightClick twitterSection" data=" ">

SUIT ಉಪಕರಣವನ್ನು ಪುಣೆಯ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದ ಅಂತರ ವಿಶ್ವವಿದ್ಯಾಲಯದ ಕೇಂದ್ರ (IUCAA)ದ ನೇತೃತ್ವದಲ್ಲಿ ಇಸ್ರೋ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಕೋಲ್ಕತ್ತಾದ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಸ್ಪೇಸ್ ಸೈನ್ಸ್ ಇಂಡಿಯನ್ (CESSI), ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಉದಯಪುರದ ಸೌರ ವೀಕ್ಷಣಾಲಯ (USO-PRL), ಮತ್ತು ತೇಜ್‌ಪುರದ ಅಸ್ಸಾಂ ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಲಾಗಿದೆ.

ಆದಿತ್ಯ ಸೋಲಾರ್​ ವಿಂಡ್​ ಪಾರ್ಟಿಕಲ್​ ಎಕ್ಸ್​​ಪಿರಿಮೆಂಟ್​ (ASPEX) ಪೆಲೋಡ್​ನಲ್ಲಿನ ಅತ್ಯಾಧುನಿಕ ಎರಡು ಉಪಕರಣಗಳಾದ ಸೋಲಾರ್ ವಿಂಡ್ ಐಯಾನ್ ಸ್ಪೆಕ್ಟ್ರೋಮೀಟರ್ (SWIS) ಮತ್ತು ಸುಪ್ರಾಥರ್ಮಲ್ ಅಂಡ್​ ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್ (STEPS) ಸೌರ ಮಾರುತದ ಕಣಗಳ ಪ್ರಯೋಗವನ್ನು ಆರಂಭಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈಚೆಗೆ ತಿಳಿಸಿತ್ತು.

ಇದನ್ನೂ ಓದಿ: ಆದಿತ್ಯ ಎಲ್1ನ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪೆರಿಮೆಂಟ್ ಪೇಲೋಡ್​ನ ಕಾರ್ಯಾಚರಣೆ ಆರಂಭ: ಇಸ್ರೋ

Last Updated : Dec 9, 2023, 11:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.