ETV Bharat / science-and-technology

ಮನುಕುಲದ ಅವನತಿಗೆ ಕಾರಣವಾಗಲಿದೆ ಎಐ ತಂತ್ರಜ್ಞಾನ: ಅಪಾಯದ ಎಚ್ಚರಿಕೆ ನೀಡಿದ ವಿಜ್ಞಾನಿಗಳು

ಕೃತಕ ಬುದ್ದಿಮತ್ತೆ ಇಂದು ನಮಗೆ ಸ್ನೇಹಿಯಾಗಿ ಕಂಡರೂ ಭವಿಷ್ಯದಲ್ಲಿ ಅವು ಮಾರಕವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Scientists warn of AI dangers but don't agree on solutions

author img

By

Published : May 4, 2023, 2:02 PM IST

ಕೇಂಬ್ರಿಡ್ಜ್​( ಲಂಡನ್​): ಜಗತ್ತನ್ನು ಇಂದು ಆಳುತ್ತಿರುವ ಕೃತ್ತಕ ಬುದ್ದಿಮತ್ತೆ ಭವಿಷ್ಯದಲ್ಲಿ ತಂದೊಡ್ಡಬಹುದಾದ ಅಪಾಯಗಳ ಕುರಿತು ಎಐ ಗಾಡ್​ಫಾದರ್​​ ಜೆಫ್ರಿ ಹಿಂಟನ್​ ಈಗಾಗಲೇ ಎಚ್ಚರಿಸಿದ್ದಾರೆ. ಎಐ ಕ್ಷೇತ್ರದಲ್ಲಿನ ಅಪಾಯ ಅರಿತ ಅವರು ಗೂಗಲ್​ ತೊರೆದ ಬಳಿಕ ಮೆಸಚ್ಯೂಸೆಟ್ಸ್​ ಇನ್ಸ್​​ಟಿಟ್ಯೂಟ್​ ಆಫ್​ ಟೆಕ್ನಾಲಾಜಿಯಲ್ಲಿ ಇದರ ಕುರಿತು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ಮನುಕುಲದ ವಿನಾಶಕ್ಕೆ ದಾರಿ: ಸ್ಮಾರ್ಟ್​ ವಿಷಯಗಳು ಔಟ್​ಸ್ಮಾರ್ಟ್​ ಆದಾಗ ಅದು ಮನುಕುಲದ ಉಳಿಯುವಿಕೆಗೆ ಬೆದರಿಕೆ ಒಡ್ಡಬಹುದು ಎಂದಿದ್ದಾರೆ. ಈ ಎಐಗಳು ವಿದ್ಯುತ್​ ಕೇಂದ್ರಗಳನ್ನು ಚಾಲನೆಯಲ್ಲಿಡಲು ನಮ್ಮನ್ನು ಕೆಲ ಕಾಲ ಬದುಕಿಸಬಹುದು. ಆದರೆ, ನಂತರ ಇದಕ್ಕೆ ನಮ್ಮ ಅವಶ್ಯಕತೆ ಇಲ್ಲದಂತೆ ಆಗಬಹುದು ಎನ್ನುವ ಮೂಲಕ ಇವು ಮಾನವ ಕುಲಕ್ಕೆ ಯಾವ ಮಟ್ಟಿನ ಅಪಾಯ ತಂದೊಡ್ಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ತಮ್ಮ ಇಡೀ ಜೀವನವನ್ನು ಕಂಪ್ಯೂಟರ್​ ಸಿಸ್ಟಂಗಳ ಸಾಮರ್ಥ್ಯಗಳ ಅಭಿವೃದ್ಧಿಗೆ ಕಳೆದ ಹಿಂಟನ್,​ ಇದೀಗ ಎಐ ಅಪಾಯ ಅರಿತು ತಮ್ಮ ಅಭಿಪ್ರಾಯವನ್ನು ಬದಲಾಯಿಸಿದ್ದು, ಇದರ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

ಈ ಎಐಗಳು ಎಲ್ಲವುಗಳನ್ನು ನಮ್ಮಿಂದ ಕಲಿತಿವೆ. ಮಾಕ್ಸಿಯಾವೆಲ್ಲಿಯ ಕಾದಂಬರಿಯಲ್ಲಿ ಬರೆದ ಎಲ್ಲಾ ವಿಷಯಗಳನ್ನು ಕಲಿತಿದ್ದು, ಜನರನ್ನು ತಿರುಚುವುದನ್ನು ಅವು ತಿಳಿದಿದೆ. ಅದರ ಸನ್ಹೆಗಳನ್ನು ನಮ್ಮನ್ನು ನೇರವಾಗಿ ಎಳೆಯಲು ಸಾಧ್ಯವಾಗದಿದ್ದರೂ, ಅದು ನಿಶ್ಚಿತವಾಗಿ ನಮ್ಮ ಎಳೆಯುತ್ತದೆ. ಈ ಎಐ ಅನ್ನು ತಡೆಯಬಹುದಾದ ಪರಿಹಾರ ನನ್ನ ಬಳಿ ಹೊಂದಿದ್ದೇನೆ. ಅದನ್ನು ತಡೆಯಬೇಕು ಎಂದು ಬಯಸುತ್ತೇನೆ. ಆದರೆ, ಇದಕ್ಕೆ ಖಚಿತ ಪರಿಹಾರ ಇಲ್ಲ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ

ಸರ್ಕಾರ, ಸಂಸ್ಥೆಗಳು ಎಚ್ಚರಗೊಳ್ಳಬೇಕಿದೆ: ಹಿಂಟನ್​ ಸಹರ್ವತಿ, ಅವರ ಜೊತೆಗೆ ಕಂಪ್ಯೂಟರ್​ ಸೈನ್ಸ್​ ಪ್ರಶಸ್ತಿ ಪಡೆದ ಹಿರಿಯ ಎಐ ಪರಿಣಿತ ಯೊಶುಹ ಬೆಂಗಿ 'ದಿ ಅಸೋಸಿಯೇಟ್​ ಪ್ರೆಸ್​' ನೊಂದಿಗೆ ಮಾತನಾಡಿದ್ದು, ಹಿಂಟನ್​ ರೀತಿಯ ಕಳವಳವನ್ನು ಇವರೂ ವ್ಯಕ್ತಪಡಿಸಿದ್ದಾರೆ. ಚಾಟ್​ಜಿಪಿಟಿಯಂತಹ ಚಾಟ್​ಬೂಟ್​ಗಳ ಅನೇಕ ತಂತ್ರಜ್ಞಾನಗಳಿಗೆ ನಾವು ಹೊಂದಿಕೊಂಡಿದ್ದು, ಇದು ನಮ್ಮನ್ನು ಅವನತಿಗೆ ಎಳೆಯುತ್ತದೆಯೇ ಹೊರತು ಇದು ಸಹಾಯ ಮಾಡುವುದಿಲ್ಲ.

ಈ ವಿಚಾರದಲ್ಲಿ ನಾವು ನಿರಾಶಾವಾದಿಯಲ್ಲ. ನಾವು ಅವಕಾಶವಾದಿಯಾಗಿದ್ದೇವೆ. ಇದು ದೊಡ್ಡ ವ್ಯತ್ಯಾಸವಾಗಿದೆ. ಇದು ಅಪಾಯಕಾರಿಯಾಗಿದೆ ಎಂದು ನಾನು ಚಿಂತಿಸುತ್ತೇನೆ. ಇದು ಅಲ್ಪಕಾಲ, ದೀರ್ಘಕಾಲ ಗಂಭೀರವಾಗಿರಬಹುದು. ಕೆಲವು ಸಂಶೋಧಕರು, ಸರ್ಕಾರ ಮತ್ತು ಜನರು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಈ ಸಂಬಂಧ ಸರ್ಕಾರಗಳು ಕೂಡ ಅದರ ಅಪಾಯ ಅರಿಯಲು ಮುಂದಾಗಿದ್ದು, ಇದೇ ಕಾರಣಕ್ಕೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​, ಎಐ ಅಭಿವೃದ್ಧಿಗೆ ಮುಂದಾಗಿರುವ ಗೂಗಲ್​, ಮೈಕ್ರೋಸಾಫ್ಟ್​ ಮತ್ತು ಚಾಟ್​ಜಿಪಿಟಿ ಸೃಷ್ಟಿಕರ್ತ ಒಪನ್​ಎಐ ಸಂಸ್ಥೆಗಳ ಸಿಇಒಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ, ಈ ತಂತ್ರಜ್ಞಾನದಿಂದ ದೀರ್ಘ ಮತ್ತು ಅಲ್ಪಕಾಲದ ಅಪಾಯ ಕುರಿತು ಅವರು ಚರ್ಚೆ ನಡೆಸಲಿದ್ದಾರೆ. ಯುರೋಪಿಯನ್​ ಆಡಳಿತಗಾರರು ಇದರ ಅಪಾಯದ ಆಳ ಅರಿತು ಈಗಾಗಲೇ ಹೊಸ ಎಐ ನಿಯಮಗಳನ್ನು ಜಾರಿಗೆ ತರಲು ಕೂಡ ಮುಂದಾಗಿದ್ದಾರೆ.

ಇದನ್ನೂ ಓದಿ: ತಂತ್ರಜ್ಞಾನ ದಿಗ್ಗಜರೊಂದಿಗೆ ಕಮಲಾ ಹ್ಯಾರಿಸ್ ಮಾತುಕತೆ: ಓಪನ್ ಎಐ ಅಪಾಯಗಳ ಬಗ್ಗೆ ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.