ETV Bharat / science-and-technology

ಸ್ಯಾಮ್​ಸಂಗ್​ ಗ್ಯಾಲಕ್ಸಿ S23 FE ಇದೇ ವಾರ ಬಿಡುಗಡೆ: ಬೆಲೆ 50 ಸಾವಿರದಿಂದ ಆರಂಭ - ಫ್ಯಾನ್ ಎಡಿಷನ್ ಎಂದು ಕರೆಯಲಾಗುವ ಸ್ಯಾಮ್​ಸಂಗ್​ ಎಫ್​ಇ

ಹಬ್ಬದ ಸೀಸನ್ ಆರಂಭವಾಗಿರುವ ಮಧ್ಯೆ ಸ್ಯಾಮ್​ಸಂಗ್​ ತನ್ನ ಹೊಸ ಪ್ರೀಮಿಯಂ ಶ್ರೇಣಿಯ ಸ್ಮಾರ್ಟ್​ಫೋನ್​ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ.

Samsung Galaxy S23 FE to arrive around Rs 50K in India this week

author img

By ETV Bharat Karnataka Team

Published : Oct 3, 2023, 1:23 PM IST

ನವದೆಹಲಿ: ಸ್ಯಾಮ್​​ಸಂಗ್​ನ ಪ್ರೀಮಿಯಂ ಸ್ಮಾರ್ಟ್​ಫೋನ್​ ಗ್ಯಾಲಕ್ಸಿ ಎಸ್ 23 ಎಫ್ಇ ಇದೇ ವಾರ ಭಾರತದಲ್ಲಿ ಬಿಡುಗಡೆಯಾಗಲಿದೆ. ಇದರ ಆರಂಭಿಕ ಬೆಲೆ ಸುಮಾರು 50,000 ರೂಪಾಯಿ ಆಗಿರಲಿದೆ. ಗ್ಯಾಲಕ್ಸಿ ಎಸ್ 23 ಎಫ್ಇ ಸ್ಯಾಮ್​ಸಂಗ್​ನ ಪ್ರಮುಖ ನೈಟೋಗ್ರಫಿ ಅಥವಾ ನೈಟ್ ಮೋಡ್ ವೈಶಿಷ್ಟ್ಯವನ್ನು ಹೊಂದಿರಲಿದೆ. ಇದರಿಂದ ಕತ್ತಲೆಯಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆ ಹಿಡಿಯಬಹುದಾಗಿದೆ.

ಹೆಚ್ಚಿನ ಬಾಳಿಕೆಗಾಗಿ ಈ ಸ್ಮಾರ್ಟ್​ಫೋನ್​ನಲ್ಲಿ ಐಪಿ 68 ಪ್ರಮಾಣೀಕರಣವಿದ್ದು, ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಉತ್ತಮ ಗೇಮಿಂಗ್ ಅನುಭವಕ್ಕಾಗಿ ಸ್ಯಾಮ್​ಸಂಗ್​ನ ಪ್ರಮುಖ ಪ್ರೊಸೆಸರ್​ ಇದರಲ್ಲಿದೆ ಎಂದು ಮೂಲಗಳು ಸೋಮವಾರ ಐಎಎನ್ಎಸ್​ಗೆ ತಿಳಿಸಿವೆ. ಗ್ಯಾಲಕ್ಸಿ ಎಸ್ 23 ಎಫ್ಇ ಅಮೆಜಾನ್, ಸ್ಯಾಮ್​ಸಂಗ್ ಡಾಟ್​ ಕಾಂ ಮತ್ತು ಚಿಲ್ಲರೆ ಅಂಗಡಿಗಳಲ್ಲಿ 50,000 ರೂ.ಗಳ ನಿವ್ವಳ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಹಬ್ಬದ ಋತುವಿನಲ್ಲಿ ಪ್ರೀಮಿಯಂ ಸ್ಮಾರ್ಟ್​ಫೋನ್ ಖರೀದಿಸಲು ಬಯಸುವ ಗ್ರಾಹಕರನ್ನು ಆಕರ್ಷಿಸಲು ಸ್ಯಾಮ್​​ಸಂಗ್​​ ತನ್ನ ಹೊಸ ಪ್ರೀಮಿಯಂ ಫೋನ್ ಅನ್ನು ಬಿಡುಗಡೆ ಮಾಡಿದೆ.

ಹೊಸ ಫೋನ್​ಗೆ ಅತ್ಯಂತ ಸ್ಪರ್ಧಾತ್ಮಕ ಬೆಲೆಯನ್ನು ನಿಗದಿ ಮಾಡಿರುವುದರಿಂದ ಹಬ್ಬದ ಮಾರಾಟದ ಸಮಯದಲ್ಲಿ ಪ್ರೀಮಿಯಂ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗಲಿದೆ ಎಂಬುದು ಕಂಪನಿಯ ನಂಬುಗೆಯಾಗಿದೆ. ಫ್ಯಾನ್ ಎಡಿಷನ್ ಎಂದು ಕರೆಯಲಾಗುವ ಸ್ಯಾಮ್​ಸಂಗ್​ ಎಫ್​ಇ ಶ್ರೇಣಿಯನ್ನು 2020 ರಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಗ್ಯಾಲಕ್ಸಿ ಎಫ್ಇ ಸರಣಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗಿದೆ ಮತ್ತು ಸೂಕ್ತವಾದ ಬೆಲೆ ನಿಗದಿ ಮಾಡಿದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗಬಹುದು ಎನ್ನುತ್ತಾರೆ ವಿಶ್ಲೇಷಕರು.

ಕ್ಲೌಡ್ ಗೇಮಿಂಗ್ ಆರಂಭಿಸಿದ ಸ್ಯಾಮ್​​ಸಂಗ್: ಸದ್ಯದಲ್ಲೇ ಸ್ಯಾಮ್​ಸಂಗ್ ತನ್ನದೇ ಆದ ಕ್ಲೌಡ್ ಗೇಮಿಂಗ್ ಸೇವೆಯನ್ನು ಆರಂಭಿಸಲಿದೆ. ಅಕ್ಟೋಬರ್ 5 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯಲಿರುವ ಮುಂಬರುವ ಸ್ಯಾಮ್​ಸಂಗ್​​ ಡೆವಲಪರ್ ಕಾನ್ಫರೆನ್ಸ್ 2023 ರಲ್ಲಿ ಕ್ಲೌಡ್ ಗೇಮಿಂಗ್ ಸೇವೆಯನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಉತ್ತರ ಅಮೆರಿಕಾದಲ್ಲಿ ಗ್ಯಾಲಕ್ಸಿ ಸಾಧನಗಳಲ್ಲಿ ಸ್ಯಾಮ್​ಸಂಗ್ ಕ್ಲೌಡ್​ ಗೇಮಿಂಗ್​​ನ ಪರೀಕ್ಷೆ ನಡೆಸುತ್ತಿದೆ.

ತನ್ನ ಜಾಗತಿಕ ಮೊಬೈಲ್ ಫೋನ್ ಮಾರಾಟದ ಬೆಳವಣಿಗೆಯು ಒಂದೇ ಮಟ್ಟದಲ್ಲಿ ಸ್ಥಿರವಾಗುತ್ತಿರುವುದನ್ನು ಗಮನಿಸಿದ ಕಂಪನಿ, ಹೊಸ ಆದಾಯದ ಮೂಲಗಳನ್ನು ಶೋಧಿಸುತ್ತಿದೆ. ಅದರ ಭಾಗವಾಗಿ ಕ್ಲೌಡ್​ ಗೇಮಿಂಗ್ ಆರಂಭಿಸಲಾಗುತ್ತಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. ಸೇವೆಯು ಬಳಸಲು ಉಚಿತವಾಗಿದ್ದರೂ, ಬಳಕೆದಾರರು ಇತ್ತೀಚಿನ ಗೇಮ್​ಗಳನ್ನು ಆಡಲು ಬಯಸಿದರೆ ಹಣ ಪಾವತಿಸಿ ಆಡಬಹುದು. ಇದು ಗೂಗಲ್ ಪ್ಲೇನಿಂದ ಸ್ವತಂತ್ರವಾಗಿರುವುದರಿಂದ, ಗೇಮ್ ಡೆವಲಪರ್​ಗಳು ಯಾವುದೇ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ : ವರ್ಕ್​ ಫ್ರಂ ಹೋಮ್​ ನಿಲ್ಲಿಸಿದ ಟಿಸಿಎಸ್​; ಅ.1 ರಿಂದ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಸೂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.