ವಾಷಿಂಗ್ಟನ್ (ಯು.ಎಸ್): 20 ವರ್ಷಗಳ ಹಿಂದೆ ಉಡಾವಣೆಗೊಂಡ ನಾಸಾದ ಬಾಹ್ಯಾಕಾಶ ನೌಕೆಯೊಂದು ಈಗಲೂ ಮಂಗಳ ಗ್ರಹದಲ್ಲಿ ಕಾರ್ಯನಿರ್ವಹಿಸುತ್ತಿದೆ.
2001ರಲ್ಲಿ ಉಡಾವಣೆಗೊಂಡ 'ಮಾರ್ಸ್ ಒಡಿಸ್ಸಿ' ಎಂಬ ಬಾಹ್ಯಾಕಾಶ ನೌಕೆ ಕಳೆದ ಎರಡು ದಶಕಗಳಿಂದ ಮಂಗಳನ ಅಂಗಳದಲ್ಲಿದೆ. ದೀರ್ಘಕಾಲ ಬದುಕಿದ ಬಾಹ್ಯಾಕಾಶ ನೌಕೆ ಎಂದೇ ಹೆಸರಾಗಿರುವ ಇದು ಮಂಗಳ ಗ್ರಹದಲ್ಲಿರುವ ನೀರಿನ ಮಂಜುಗಡ್ಡೆಯನ್ನು ಪತ್ತೆಹಚ್ಚಲು, ಲ್ಯಾಂಡಿಂಗ್ ತಾಣಗಳನ್ನು ನಿರ್ಣಯಿಸಲು ಮತ್ತು ಗ್ರಹದ ಚಂದ್ರಗಳನ್ನು ಅಧ್ಯಯನ ಮಾಡಲು ಸಹಾಯ ಮಾಡಿದೆ ಎಂದು ನಾಸಾ ಹೇಳಿದೆ.
20 ವರ್ಷಗಳ ಹಿಂದೆ ಏಪ್ರಿಲ್ 7ರಂದು ಇದನ್ನು ಮಂಗಳದ ಮೇಲ್ಮೈಗೆ ಕಳುಹಿಸಲಾಗಿದ್ದು, ಇದು ಗ್ರಹದ ಸಂಯೋಜನೆಯ ನಕ್ಷೆಯನ್ನು ಕೂಡಾ ಕಳುಹಿಸುತ್ತದೆ. ಈ ನೌಕೆ ಇತರ ನೌಕೆಗಳ ಸುರಕ್ಷಿತ ಲ್ಯಾಂಡಿಂಗ್ಗೆ ಮಾತ್ರವಲ್ಲದೇ ಭವಿಷ್ಯದ ಗಗನಯಾತ್ರಿಗಳಿಗೂ ದಾರಿ ಮಾಡಿಕೊಡಲು ಸಹಾಯ ಮಾಡುತ್ತಿದೆ.
ಆದರೆ, ಈ ನೌಕೆ ಮಾಡಿದ ಮುಖ್ಯ ಕಾರ್ಯ ಎಂದರೆ, ನೀರಿನ ಮಂಜುಗಡ್ಡೆಗಳನ್ನು ಪತ್ತೆಹಚ್ಚಿರುವುದು. ಈ ಮೂಲಕ ಇದು ಇತರ ಬಾಹ್ಯಾಕಾಶ ನೌಕೆಗಳಿಗೆ ನಿರ್ಣಾಯಕ ಸಂವಹನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರಹದಲ್ಲಿ ನೀರಿನ ಮಂಜುಗಡ್ಡೆ ಎಲ್ಲಿದೆ ಎಂದು ನಿರ್ಧರಿಸಲು ಕೆಲಸ ಮಾಡುವ ಸಂಶೋಧಕರಿಗೆ ಇದು ಸಹಾಯ ಮಾಡುತ್ತಿದೆ.
ಇದರಲ್ಲಿರುವ ಕ್ಯಾಮೆರಾ ಹಗಲು ರಾತ್ರಿ ಮಂಗಳನ ಮೇಲ್ಮೈ ತಾಪಮಾನವನ್ನು ಅಳೆಯುತ್ತಿದ್ದು, ವಿಜ್ಞಾನಿಗಳಿಗೆ ಕಲ್ಲು, ಮರಳು ಅಥವಾ ಧೂಳಿನಂತಹ ಭೌತಿಕ ವಸ್ತುಗಳು ಅಸ್ತಿತ್ವದಲ್ಲಿವೆ ಎಂಬುದನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತಿದೆ.