ETV Bharat / science-and-technology

‘ಶ್ವಾಸ್​’ ಆಕ್ಸಿಜನ್ ಕಾನ್ಸಂಟ್ರೇಟರ್ ಅಭಿವೃದ್ಧಿಪಡಿಸಿದ ಇಸ್ರೋ - ವೈದ್ಯಕೀಯ ಆಮ್ಲಜನಕ ಸಾಂದ್ರಕ

ಉಸಿರಾಟ ಸಮಸ್ಯೆ ಇರುವ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಇಸ್ರೋ ಸಂಸ್ಥೆ ಶ್ವಾಸ್ ಎಂಬ ಪೋರ್ಟೆಬಲ್ ಆಕ್ಸಿಜನ್ ಕಾನ್ಸಂಟ್ರೇಟರ್​ ಅನ್ನ ಅಭಿವೃದ್ಧಿಪಡಿಸಿದೆ. ಇದು ಒಂದೇ ಬಾರಿಗೆ ಇಬ್ಬರು ರೋಗಿಗಳಿಗೆ ಆಕ್ಸಿಜನ್ ಪೂರೈಸಲಿದೆ.

‘ಶ್ವಾಸ್​’ ಆಕ್ಸಿಜನ್ ಕಾನ್ಸಂಟ್ರೇಟರ್ ಅಭಿವೃದ್ಧಿಪಡಿಸಿದ ಇಸ್ರೋ

author img

By

Published : May 18, 2021, 6:21 PM IST

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ರಾಕೆಟ್ ಸಂಶೋದನಾ ಕೇಂದ್ರವಾದ ವಿಎಸ್ಎಸ್​ಸಿ ಸಹಯೋಗದೊಂದಿಗೆ​​​ ವೈದ್ಯಕೀಯ ಆಮ್ಲಜನಕ ಸಾಂದ್ರಕ 'ಶ್ವಾಸ್' ಅನ್ನು ಅಭಿವೃದ್ಧಿಪಡಿಸಿದೆ.

ಈ ಯಂತ್ರವು ಉಸಿರಾಟ ಸಮಸ್ಯೆಯಿರುವ ರೋಗಿಗಳಿಗೆ ಆಮ್ಲಜನಕ ಮಟ್ಟವನ್ನು ಸುಧಾರಿಸಲಿದೆ. ನೈಸರ್ಗಿಕ ಗಾಳಿಯಲ್ಲಿ ತುಂಬಿರುವ ಸಾರಜನಕ ಪ್ರಮಾಣ ಕಡಿಮೆಗೊಳಿಸಿ ಇಲ್ಲದೇ ಬೇರ್ಪಡಿಸಿ ಆಮ್ಲಜನಕ ಪ್ರಮಾಣವನ್ನ ಹೆಚ್ಚಿಸಲಿದೆ.

ಈ ಯಂತ್ರವು ಒಂದೇ ಸಮಯಕ್ಕೆ ಇಬ್ಬರು ರೋಗಿಗಳಿಗೆ ಬೇಕಾಗುವಷ್ಟು ನಿಮಿಷಕ್ಕೆ 10 ಲೀಟರ್ ಆಮ್ಲಜನಕ ಪೂರೈಸಲಿದೆ. ಇಸ್ರೋ ಪ್ರಕಾರ 600 ವ್ಯಾಟ್ ಸಾಮರ್ಥ್ಯದ ಸಾಧನವು ವೋಲ್ಟೇಜ್ 220 / 50 ಹರ್ಟ್ಸ್​ ವೋಲ್ಟೇಜ್​​​​ನಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡು ಆಮ್ಲಜನಕ ಶೇಖರಣೆಯಲ್ಲಿ 82ರಿಂದ 95ರಷ್ಟು ಪ್ರಮಾಣದ ಪರಿಶುದ್ಧ ಆಮ್ಲಜನಕದ ಹರಿವು ಕಾಣಬಹುದಾಗಿದೆ.

42 - 44 ಕೆ.ಜಿ ತೂಕದ ಈ ಸಾಧನವು 600 ಎಂಎಂ ಎತ್ತರ, 500 ಎಂಎಂ ಉದ್ದ ಮತ್ತು 400 ಎಂಎಂ ಅಗಲವಿದೆ ಮತ್ತು ಆಮ್ಲಜನಕದ ಸಾಂದ್ರತೆ, ಹರಿವಿನ ಪ್ರಮಾಣ ಮತ್ತು ಒತ್ತಡವನ್ನು ತೋರಿಸುವ ಎಲ್‌ಸಿಡಿ ಡಿಸ್​​​ ಪ್ಲೇ ಹೊಂದಿದೆ.

ಇದನ್ನೂ ಓದಿ: ವಾಹನಗಳ ವಾರಂಟಿ, ಉಚಿತ ಸರ್ವಿಸ್ ಅವಧಿ ವಿಸ್ತರಿಸಿದ ಹೋಂಡಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.