ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ 3 ಮಿಷನ್ (Chandrayaan 3 mission) ಉಡಾವಣೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ಗಗನಕ್ಕೆ ಬಾಹ್ಯಾಕಾಶ ನೌಕೆ ಜಿಗಿಯಲಿದೆ. ಆಗಸ್ಟ್ 23 ಅಥವಾ ಆಗಸ್ಟ್ 24ರಂದು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಗುರಿ ಹೊಂದಲಾಗಿದೆ.
-
Announcing the launch of Chandrayaan-3:
— ISRO (@isro) July 6, 2023 " class="align-text-top noRightClick twitterSection" data="
🚀LVM3-M4/Chandrayaan-3 🛰️Mission:
The launch is now scheduled for
📆July 14, 2023, at 2:35 pm IST
from SDSC, Sriharikota
Stay tuned for the updates!
">Announcing the launch of Chandrayaan-3:
— ISRO (@isro) July 6, 2023
🚀LVM3-M4/Chandrayaan-3 🛰️Mission:
The launch is now scheduled for
📆July 14, 2023, at 2:35 pm IST
from SDSC, Sriharikota
Stay tuned for the updates!Announcing the launch of Chandrayaan-3:
— ISRO (@isro) July 6, 2023
🚀LVM3-M4/Chandrayaan-3 🛰️Mission:
The launch is now scheduled for
📆July 14, 2023, at 2:35 pm IST
from SDSC, Sriharikota
Stay tuned for the updates!
ಇಸ್ರೋ ಜುಲೈ 12 ಮತ್ತು 19ರ ನಡುವೆ ಚಂದ್ರಯಾನ 3ರ ಉಡಾವಣೆ ಮಾಡಲಿದೆ ಎಂದು ವರದಿಯಾಗಿತ್ತು. ಇದೀಗ ದಿನಾಂಕವನ್ನು ಅಂತಿಮಗೊಳಿಸಿದೆ. ಚಂದ್ರಯಾನ-3 ಮಿಷನ್‌ನ ಮುಖ್ಯ ಗಮನವು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಯಶಸ್ವಿ ಲ್ಯಾಂಡಿಂಗ್ ಸಾಧಿಸುವುದಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಭಾರತದ ಅಭಿವೃದ್ಧಿ ಹೊಂದುತ್ತಿರುವ ಬಾಹ್ಯಾಕಾಶ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಆಗಲಿದೆ.
ಚಂದ್ರಯಾನ-3 ಮಿಷನ್ ಉಡಾವಣೆ ದಿನಾಂಕ ಹಾಗೂ ಸಮಯದ ಬಗ್ಗೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅಧಿಕೃತವಾಗಿ ಖಚಿತ ಪಡಿಸಿದೆ. ಆಗಸ್ಟ್ 23 ಅಥವಾ 24ರ ನಡುವೆ ಚಂದ್ರನ ಮೇಲೆ ಲ್ಯಾಡಿಂಗ್ಗೆ ಪ್ರಯತ್ನಿಸಲಿದೆ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ 3ರ ಉಡಾವಣೆಗೆ ಭರದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಈ ಬಾಹ್ಯಾಕಾಶ ನೌಕೆಯನ್ನು ಲಾಂಚ್ ವೆಹಿಕಲ್ ಮಾರ್ಕ್-III (LVM3)ನೊಂದಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ.
-
LVM3-M4/Chandrayaan-3 Mission:
— ISRO (@isro) July 7, 2023 " class="align-text-top noRightClick twitterSection" data="
Vehicle electrical tests completed.
Citizens are invited to witness the launch from the Launch View Gallery at SDSC-SHAR, Sriharikota, by registering at https://t.co/J9jd8ylRcC
">LVM3-M4/Chandrayaan-3 Mission:
— ISRO (@isro) July 7, 2023
Vehicle electrical tests completed.
Citizens are invited to witness the launch from the Launch View Gallery at SDSC-SHAR, Sriharikota, by registering at https://t.co/J9jd8ylRcCLVM3-M4/Chandrayaan-3 Mission:
— ISRO (@isro) July 7, 2023
Vehicle electrical tests completed.
Citizens are invited to witness the launch from the Launch View Gallery at SDSC-SHAR, Sriharikota, by registering at https://t.co/J9jd8ylRcC
ಇದು ಬಾಹ್ಯಾಕಾಶ ನೌಕೆ ಮತ್ತು ಉಡಾವಣಾ ವಾಹನವು ಮುಂದಿನ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಖಚಿತಪಡಿಸುತ್ತದೆ. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಏಕೀಕರಣ ಪ್ರಕ್ರಿಯೆಯು ಪೂರ್ಣಗೊಂಡಿದೆ. ಜುಲೈ 14ರಂದು ಮಧ್ಯಾಹ್ನ 2:30ಕ್ಕೆ ಯೋಜಿತ ಉಡಾವಣೆಗೆ ವೇದಿಕೆ ಸಿದ್ಧಪಡಿಸಲಾಗಿದೆ. ಚಂದ್ರಯಾನ-3 ಮಿಷನ್‌ನ ಮೂಲ ಉದ್ದೇಶವು ಚಂದ್ರನ ಮೇಲೆ ಯಶಸ್ವಿ ಲ್ಯಾಂಡಿಂಗ್ ಮೂಲಕ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವುದಾಗಿದೆ.
ಚಂದ್ರನ ಮೇಲ್ಮೈಗೆ ಲ್ಯಾಂಡರ್ ಮತ್ತು ರೋವರ್ ಅನ್ನು ತಲುಪಿಸುವ ಮೂಲಕ ಇದನ್ನು ಸಾಧಿಸಲಾಗುತ್ತದೆ. ಚಂದ್ರಯಾನ 2 ಮಿಷನ್‌ನ ಬಾಹ್ಯಾಕಾಶ ನೌಕೆಯು ಲ್ಯಾಂಡಿಂಗ್ ಪ್ರಯತ್ನದ ಸಮಯದಲ್ಲಿ ಅನಿರೀಕ್ಷಿತ ಹಿನ್ನಡೆಯನ್ನು ಎದುರಿಸಿತು. ಚಂದ್ರಯಾನ 3ರ ಯೋಜನೆಯು ಹಿಂದಿನ ಮಿಷನ್‌ನ ನ್ಯೂನತೆಗಳನ್ನು ಸರಿಪಡಿಸಿ ಮತ್ತು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸುವ ಗುರಿಯನ್ನು ಹೊಂದಲಾಗಿದೆ.
-
🚀LVM3-M4/Chandrayaan-3🛰️ Mission:
— ISRO (@isro) July 6, 2023 " class="align-text-top noRightClick twitterSection" data="
Early hours today, at SDSC-SHAR, the movement of the LVM3 M4 vehicle with Chandrayaan-3 to the launch pad has commenced pic.twitter.com/Oxb7arzpYr
">🚀LVM3-M4/Chandrayaan-3🛰️ Mission:
— ISRO (@isro) July 6, 2023
Early hours today, at SDSC-SHAR, the movement of the LVM3 M4 vehicle with Chandrayaan-3 to the launch pad has commenced pic.twitter.com/Oxb7arzpYr🚀LVM3-M4/Chandrayaan-3🛰️ Mission:
— ISRO (@isro) July 6, 2023
Early hours today, at SDSC-SHAR, the movement of the LVM3 M4 vehicle with Chandrayaan-3 to the launch pad has commenced pic.twitter.com/Oxb7arzpYr
ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಮೂರು ಪ್ರಮುಖ ಅಂಶಗಳು: ಮಹತ್ವಾಕಾಂಕ್ಷೆಯ ಚಂದ್ರಯಾನ 3 ಬಾಹ್ಯಾಕಾಶ ನೌಕೆಯು ಲ್ಯಾಂಡರ್ ಮಾಡ್ಯೂಲ್ (Lander Module), ಪ್ರೊಪಲ್ಷನ್ ಮಾಡ್ಯೂಲ್ (Propulsion Module) ಮತ್ತು ರೋವರ್ (Rover) ಎಂಬ ಪ್ರಮುಖ ಮೂರು ಅಂಶಗಳನ್ನು ಒಳಗೊಂಡಿದೆ. ಲ್ಯಾಂಡರ್ ಮಾಡ್ಯೂಲ್ ಅನ್ನು ನಿರ್ದಿಷ್ಟವಾಗಿ ಚಂದ್ರನ ಮೇಲೆ ಪೂರ್ವನಿರ್ಧರಿತ ಸ್ಥಳದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಸಾಧಿಸಲು ವಿನ್ಯಾಸಗೊಳಿಸಲಾಗಿದೆ.
ಈ ಲ್ಯಾಂಡರ್ ಮಾಡ್ಯೂಲ್ ಪೂರ್ವನಿರ್ಧರಿತ ಸ್ಥಳದಲ್ಲಿ ರೋವರ್ಅನ್ನು ನಿಯೋಜಿಸುತ್ತದೆ. ಚಂದ್ರನ ಮೇಲ್ಮೈಯ ರಾಸಾಯನಿಕ ವಿಶ್ಲೇಷಣೆಗಳನ್ನು ನಡೆಸುವುದು ಮತ್ತು ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ರೋವರ್‌ನ ಪ್ರಾಥಮಿಕ ಕಾರ್ಯವಾಗಿದೆ. ಲ್ಯಾಂಡರ್ ಮತ್ತು ರೋವರ್ಅನ್ನು ಲಾಂಚ್ ವೆಹಿಕಲ್ ಇಂಜೆಕ್ಷನ್ ಹಂತದಿಂದ 100 ಕಿಲೋಮೀಟರ್ ವೃತ್ತಾಕಾರದ ಧ್ರುವ ಚಂದ್ರನ ಕಕ್ಷೆಗೆ ಇತರ ಮಾಡ್ಯೂಲ್‌ಗಳಿಂದ ಬೇರ್ಪಡಿಸುವ ಮೊದಲು, ಇವುಗಳನ್ನು ಸಾಗಿಸುವಲ್ಲಿ ಪ್ರೊಪಲ್ಷನ್ ಮಾಡ್ಯೂಲ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೆಚ್ಚುವರಿಯಾಗಿ ಪ್ರೊಪಲ್ಷನ್ ಮಾಡ್ಯೂಲ್ ತನ್ನದೇ ಆದ ವೈಜ್ಞಾನಿಕ ಪೇಲೋಡ್ ಅನ್ನು ಹೊಂದಿರುತ್ತದೆ. ಇದು ಬೇಪಟ್ಟ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ.
ಚಂದ್ರಯಾನ-3 ಮಿಷನ್‌ನ ಉಡಾವಣೆಗೆ ಅನುಕೂಲವಾಗುವಂತೆ ಇಸ್ರೋ ಜಿಎಸ್ಎಲ್ವಿ (GSLV) ಮಾರ್ಕ್ III ಎಂದೂ ಕರೆಯಲ್ಪಡುವ ಲಾಂಚ್ ವೆಹಿಕಲ್ ಮಾರ್ಕ್-III (LVM-3) ಅನ್ನು ಬಳಸಿಕೊಳ್ಳುತ್ತದೆ. ಇಸ್ರೋ ಅಭಿವೃದ್ಧಿಪಡಿಸಿದ ಎಲ್ವಿಎಂ -3 ಸಂಸ್ಥೆಯ ಫ್ಲೀಟ್‌ನಲ್ಲಿ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ. 4 ಮೀಟರ್ ವ್ಯಾಸದೊಂದಿಗೆ 43.5 ಮೀಟರ್ ಎತ್ತರ ಇರುವ ಇದು 640 ಟನ್ ತೂಕವನ್ನು ಎತ್ತುವ ಸಾಮರ್ಥ್ಯವನ್ನು ಹೊಂದಿದೆ.
ಉಡಾವಣೆ ವೀಕ್ಷಣೆಗೆ ಅವಕಾಶ: ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಮಿಷನ್ ಉಡಾವಣೆ ವೀಕ್ಷಣೆಗೆ ಸಾರ್ವಜನಿಕರಿಗೆ ಇಸ್ರೋ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಹೆಸರು ನೋಂದಾಯಿಸಲು ಹೇಳಿದ್ದು, ಲಿಂಕ್ ಸಹ ನೀಡಿದೆ. ಶ್ರೀಹರಿಕೋಟಾದ ಲಾಂಚ್ ವ್ಯೂ ಗ್ಯಾಲರಿಯಿಂದ ಉಡಾವಣೆ ವೀಕ್ಷಿಸಲು ಹೆಸರು ನೋಂದಾಯಿಸಿ ಎಂದು ಇಸ್ರೋ ಟ್ವೀಟ್ ಮಾಡಿದೆ.
ಇದನ್ನೂ ಓದಿ: Chandrayaan -3 : ಜುಲೈ 14ರ ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡಾವಣೆ..ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್