ETV Bharat / science-and-technology

ಇಂಟರ್ನೆಟ್​ ಸೌಲಭ್ಯ ಮೂಲಭೂತ ಮಾನವ ಹಕ್ಕಾಗಲಿ: ಅಧ್ಯಯನದಲ್ಲಿ ಪ್ರತಿಪಾದನೆ

ಇಂಟರ್ನೆಟ್ ಎಂಬುದು ಈಗ ಬಹುತೇಕ ಜನರ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿದೆ. ಈಗ ಪ್ರತಿಯೊಂದು ಕೆಲಸಕ್ಕೂ ಇಂಟರ್ನೆಟ್ ಅಗತ್ಯವಾಗಿದೆ. ಹೀಗಾಗಿ ಇದನ್ನು ವಿಶ್ವದ ರಾಷ್ಟ್ರಗಳು ಮೂಲಭೂತ ಹಕ್ಕೆಂದು ಪರಿಗಣಿಸುವುದು ಅಗತ್ಯ ಎಂದು ಅಧ್ಯಯನವೊಂದು ಹೇಳಿದೆ.

Internet access must be a basic human right in developing nations: Study

author img

By

Published : Apr 9, 2023, 12:44 PM IST

ಲಂಡನ್ : ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಮೂಲಭೂತ ಮಾನವ ಹಕ್ಕು ಎಂದು ಪರಿಗಣಿಸಬೇಕು. ಇಲ್ಲದಿದ್ದರೆ ಅಸಮಾನತೆ ನಿರಂತರವಾಗಿ ವಿಸ್ತರಿಸುವ ಅಪಾಯವಿದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ. ಯುಕೆಯ ಬರ್ಮಿಂಗ್​ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಜಗತ್ತಿನಾದ್ಯಂತ ಜನರು ಶಿಕ್ಷಣ, ಆರೋಗ್ಯ, ಕೆಲಸ ಮತ್ತು ವಸತಿಗಳಂತಹ ಸಾಮಾಜಿಕ ಆರ್ಥಿಕ ಮಾನವ ಹಕ್ಕುಗಳನ್ನು ಪಡೆದುಕೊಳ್ಳಲು ಇಂಟರ್ನೆಟ್ ಅನ್ನು ಅವಲಂಬಿಸಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಇಂಟರ್ನೆಟ್ ಎಂಬುದು ಜನರು ಶಿಕ್ಷಣವನ್ನು ಪಡೆಯುವ, ಆರೋಗ್ಯವನ್ನು ಕಾಪಾಡಿಕೊಳ್ಳುವ, ಮನೆ ಹುಡುಕುವ ಮತ್ತು ಉದ್ಯೋಗವನ್ನು ಭದ್ರಪಡಿಸುವ ವಿಷಯಗಳಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸಬಹುದು. ಇಂಟರ್ನೆಟ್​ ಇಲ್ಲದಿದ್ದರೆ ಈ ಎಲ್ಲ ಸೌಲಭ್ಯಗಳಿಂದ ಆ ಜನತೆ ವಂಚಿತರಾಗಬಹುದು ಎಂದು ಪಾಲಿಟಿಕ್ಸ್, ಫಿಲಾಸಫಿ ಮತ್ತು ಎಕನಾಮಿಕ್ಸ್‌ (Politics, Philosophy & Economics) ಹೆಸರಿನ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವು ಹೇಳಿದೆ.

ನಮ್ಮ ಅನೇಕ ಸಾಮಾಜಿಕ ಆರ್ಥಿಕ ಮಾನವ ಹಕ್ಕುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇಂಟರ್ನೆಟ್ ಅನನ್ಯ ಮತ್ತು ಮೂಲಭೂತ ಸಾಧನವಾಗಿದೆ. ಜನತೆ ಉದ್ಯೋಗಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು, ವೈದ್ಯರಿಗೆ ಆರೋಗ್ಯ ಮಾಹಿತಿಯನ್ನು ಕಳುಹಿಸಲು, ಜನತೆ ತಮ್ಮ ಹಣಕಾಸು ಮತ್ತು ವ್ಯವಹಾರವನ್ನು ನಿರ್ವಹಿಸಲು, ಸಾಮಾಜಿಕ ಭದ್ರತೆ ಹಕ್ಕುಗಳನ್ನು ಪಡೆದುಕೊಳ್ಳಲು ಮತ್ತು ಶೈಕ್ಷಣಿಕ ಮೌಲ್ಯಮಾಪನಗಳನ್ನು ಸಲ್ಲಿಸಲು ಇಂಟರ್ನೆಟ್ ಅನುವು ಮಾಡಿಕೊಡುತ್ತದೆ ಎಂದು ಬರ್ಮಿಂಗ್​ಹ್ಯಾಮ್ ವಿಶ್ವವಿದ್ಯಾನಿಲಯದ ಜಾಗತಿಕ ನೀತಿಶಾಸ್ತ್ರದ ಉಪನ್ಯಾಸಕ ಡಾ ಮೆರ್ಟೆನ್ ರೆಗ್ಲಿಟ್ಜ್ ಹೇಳಿದರು.

ಇಂಟರ್‌ನೆಟ್‌ನ ರಚನೆಯು ಒಟ್ಟಾರೆಯಾಗಿ ಮಾನವಕುಲದ ಪ್ರಗತಿಗೆ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿರುವ ಮಾಹಿತಿಯ ಪರಸ್ಪರ ವಿನಿಮಯವನ್ನು ಶಕ್ತಗೊಳಿಸುತ್ತದೆ. ಹೀಗಾಗಿ ಇಂಟರ್ನೆಟ್‌ ಸೌಲಭ್ಯವನ್ನು ಮಾನವ ಹಕ್ಕು ಎಂದು ಘೋಷಿಸುವುದು ಅಗತ್ಯವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳ ಹಲವಾರು ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ವಸತಿ, ಕೆಲಸ ಮತ್ತು ಸಾಮಾಜಿಕ ಭದ್ರತೆಯಂತಹ ಸಾಮಾಜಿಕ ಆರ್ಥಿಕ ಮಾನವ ಹಕ್ಕುಗಳನ್ನು ಪಡೆದುಕೊಳ್ಳಲು ಇಂಟರ್ನೆಟ್ ಸೌಲಭ್ಯ ಅತ್ಯಗತ್ಯವಾಗಿದೆ ಎಂದು ಅಧ್ಯಯನವು ವಿವರಿಸಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಜನರಿಗೆ ಇಂಟರ್ನೆಟ್ ಸೌಲಭ್ಯವು ಅಗತ್ಯವಿರುವಷ್ಟು ಆರೋಗ್ಯ ಸೇವೆಯನ್ನು ಪಡೆಯುವ ಸಾಧನವಾಗಬಹುದು. ಇನ್ನು ಕೆಲವೊಮ್ಮೆ ಇಂಟರ್ನೆಟ್ ಸೌಲಭ್ಯ ಇಲ್ಲವೆಂಬ ಒಂದೇ ಕಾರಣಕ್ಕೆ ಅವರಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಸಿಗದೇ ಇರಬಹುದು. ಸಣ್ಣ ವ್ಯವಹಾರಗಳು ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಣವನ್ನು ಸಂಗ್ರಹಿಸಬಹುದು. ಇದಕ್ಕೂ ಇಂಟರ್ನೆಟ್ ಬೇಕೇ ಬೇಕು. ಆಫ್ರಿಕಾದಲ್ಲಿ 2015 ರಲ್ಲಿ ಕ್ರೌಡ್ ಫಂಡಿಂಗ್ ಮೂಲಕ 32 ಮಿಲಿಯನ್‌ ಡಾಲರ್ ಸಂಗ್ರಹಿಸಲಾಗಿತ್ತು. ಇದರ ಪ್ರಮಾಣ 2025 ರಲ್ಲಿ 2.5 ಶತಕೋಟಿ ಡಾಲರ್​ಗೆ ಏರಿಕೆಯಾಗಲಿದೆ ಎಂದು ವಿಶ್ವ ಬ್ಯಾಂಕ್ ನಿರೀಕ್ಷಿಸಿದೆ ಎಂದು ಅಧ್ಯಯನವು ಹೇಳಿದೆ.

ಇಂಟರ್ನೆಟ್ ಒಂದು ಜಾಗತಿಕ ನೆಟ್‌ವರ್ಕ್ ಆಗಿದ್ದು ಅದು ಪ್ರಪಂಚದಾದ್ಯಂತದ ಶತಕೋಟಿ ಕಂಪ್ಯೂಟರ್‌ಗಳನ್ನು ಪರಸ್ಪರ ಮತ್ತು ವರ್ಲ್ಡ್ ವೈಡ್ ವೆಬ್‌ಗೆ ಸಂಪರ್ಕಿಸುತ್ತದೆ. ವಿಶ್ವಾದ್ಯಂತ ಶತಕೋಟಿ ಕಂಪ್ಯೂಟರ್ ಬಳಕೆದಾರರನ್ನು ಸಂಪರ್ಕಿಸಲು ಇದು ಪ್ರಮಾಣಿತ ಇಂಟರ್ನೆಟ್ ಪ್ರೋಟೋಕಾಲ್ ಸೂಟ್ (TCP/IP) ಅನ್ನು ಬಳಸುತ್ತದೆ. ಆಪ್ಟಿಕಲ್ ಫೈಬರ್‌ಗಳು ಮತ್ತು ಇತರ ವೈರ್‌ಲೆಸ್ ಮತ್ತು ನೆಟ್‌ವರ್ಕಿಂಗ್ ತಂತ್ರಜ್ಞಾನಗಳಂತಹ ಕೇಬಲ್‌ಗಳನ್ನು ಬಳಸಿಕೊಂಡು ಇದನ್ನು ಸ್ಥಾಪಿಸಲಾಗಿದೆ. ಪ್ರಸ್ತುತ, ಇಂಟರ್ನೆಟ್ ಪ್ರಪಂಚದಾದ್ಯಂತ ಕಂಪ್ಯೂಟರ್‌ಗಳ ನಡುವೆ ಮಾಹಿತಿ ಮತ್ತು ಡೇಟಾವನ್ನು ಕಳುಹಿಸುವ ಅಥವಾ ವಿನಿಮಯ ಮಾಡುವ ಅತ್ಯಂತ ವೇಗವಾದ ಸಾಧನವಾಗಿದೆ.

ಇದನ್ನೂ ಓದಿ : ಪ್ರಾಧ್ಯಾಪಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿದ ChatGPT!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.