ETV Bharat / science-and-technology

ಬಿಂಗ್, ಎಡ್ಜ್​​ ಬ್ರೌಸರ್​ನಲ್ಲಿ AI ಶಾಪಿಂಗ್​ ಟೂಲ್ಸ್​: ಶಾಪಿಂಗ್ ಆಗಲಿದೆ ಸ್ಮಾರ್ಟ್​! - ಎಡ್ಜ್‌ನಲ್ಲಿನ ಬೈಯಿಂಗ್ ಗೈಡ್ ಜಾಗತಿಕವಾಗಿ ಲಭ್ಯ

ಇನ್ನು ಮುಂದೆ ಬಿಂಗ್ ಮತ್ತು ಎಡ್ಜ್​​ ಬ್ರೌಸರ್​ನಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಶಾಪಿಂಗ್ ಟೂಲ್​ಗಳನ್ನು ಅಳವಡಿಸುವುದಾಗಿ ಮೈಕ್ರೊಸಾಫ್ಟ್​ ಹೇಳಿದೆ.

Microsoft announces AI-powered shopping tools in Bing, Edge

author img

By

Published : Jun 30, 2023, 1:31 PM IST

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಟೆಕ್ ದೈತ್ಯ ಮೈಕ್ರೋಸಾಫ್ಟ್ ತನ್ನ ಬಿಂಗ್ ಮತ್ತು ಎಡ್ಜ್‌ನಲ್ಲಿ ಹೊಸ ಕೃತಕ ಬುದ್ಧಿಮತ್ತೆ (AI) ಆಧಾರಿತ ಶಾಪಿಂಗ್ ಟೂಲ್​ಗಳನ್ನು ಅಳವಡಿಸುವುದಾಗಿ ಘೋಷಿಸಿದೆ. ಅದು ಬಳಕೆದಾರರಿಗೆ ವಿಶ್ವಾಸದಿಂದ ಶಾಪಿಂಗ್ ಮಾಡಲು ಮತ್ತು ಹಣ ಉಳಿಸಲು ಸಹಾಯ ಮಾಡುತ್ತದೆ. ಹೊಸ ಪರಿಕರಗಳು ಬಳಕೆದಾರರಿಗೆ AI ಯ ಶಕ್ತಿಯನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತವೆ. ನೀವು ಖರೀದಿಸಲು ಬಯಸಿದ ವಸ್ತುಗಳನ್ನು ಸುಲಭವಾಗಿ ಹುಡುಕಲು, ಸಂಶೋಧಿಸಲು ಮತ್ತು ಖರೀದಿಯನ್ನು ಪೂರ್ಣಗೊಳಿಸಲು ಪರಿಣಿತ ಮೂಲಗಳಿಂದ ನಿಮಗೆ ಅಗತ್ಯವಿರುವ ಮಾಹಿತಿಯು ಈಗ ಒಂದೇ ಸ್ಥಳದಲ್ಲಿ ಲಭ್ಯವಾಗಲಿದೆ ಎಂದು ಮೈಕ್ರೊಸಾಫ್ಟ್​ ಗುರುವಾರ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ.

ಖರೀದಿ ಮಾರ್ಗದರ್ಶಿ ಅಥವಾ Buying Guide ಪ್ರತಿ ವರ್ಗದಲ್ಲಿ ಯಾವುದು ಉತ್ತಮವಾಗಿದೆ ಎಂಬುದನ್ನು ಬಳಕೆದಾರರಿಗೆ ತಿಳಿಸುತ್ತದೆ, ಉತ್ಪನ್ನಗಳ ಬಗ್ಗೆ ಸಲಹೆ ನೀಡುತ್ತದೆ ಮತ್ತು ಸ್ಮಾರ್ಟ್ ಹೋಲಿಕೆ ಕೋಷ್ಟಕದಲ್ಲಿ ಒಂದಕ್ಕೊಂದು ಸಮಾನವಾದ ಐಟಂಗಳ ವಿಶೇಷಣಗಳನ್ನು ತೋರಿಸುತ್ತದೆ. ಇದರಿಂದಾಗಿ ಬಳಕೆದಾರರು ವಿವಿಧ ವೆಬ್‌ಸೈಟ್‌ಗಳನ್ನು ಕ್ಲಿಕ್ ಮಾಡದೆಯೇ ಆಯ್ಕೆಗಳನ್ನು ತ್ವರಿತವಾಗಿ ಹೋಲಿಕೆ ಮಾಡಬಹುದು. ಬಿಂಗ್​​ನಲ್ಲಿನ ಈ ಟೂಲ್ ಈಗ ಯುಎಸ್​ನಲ್ಲಿ ಲಭ್ಯವಿದೆ ಮತ್ತು ಕಾಲಾನಂತರದಲ್ಲಿ ಇತರ ಮಾರುಕಟ್ಟೆಗಳಿಗೆ ಬರಲಿದೆ.

ಎಡ್ಜ್‌ನಲ್ಲಿನ ಬೈಯಿಂಗ್ ಗೈಡ್ ಜಾಗತಿಕವಾಗಿ ಲಭ್ಯವಾಗಲಾರಂಭಿಸಿದೆ. ಯಾವುದೇ ಉತ್ಪನ್ನವನ್ನು ಶಾಪಿಂಗ್ ಮಾಡುವಾಗ ಯಾವೆಲ್ಲ ಅಂಶಗಳನ್ನು ಪರಿಗಣಿಸಬೇಕು ಎಂಬುದನ್ನು 'Review Summaries' ಟೂಲ್ ಸೂಚಿಸುತ್ತದೆ. ಬಳಕೆದಾರರು ತಾವು ಇಷ್ಟಪಡುವ ನಿರ್ದಿಷ್ಟ ಉತ್ಪನ್ನವನ್ನು ಒಮ್ಮೆ ಕಂಡುಕೊಂಡರೆ, ಆನ್‌ಲೈನ್‌ನಲ್ಲಿ ಜನರು ಅದರ ಬಗ್ಗೆ ಏನು ಹೇಳುತ್ತಿದ್ದಾರೆ ಎಂಬುದನ್ನು ಸಂಕ್ಷಿಪ್ತವಾಗಿ ಸಾರಾಂಶ ಮಾಡಿ ತೋರಿಸುವಂತೆ ಗ್ರಾಹಕರು ಎಡ್ಜ್‌ನಲ್ಲಿನ ಬಿಂಗ್ ಚಾಟ್​ಗೆ ಸೂಚಿಸಬಹುದು.

ಈ ಸಾಧನವು ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಇದರಲ್ಲಿನ ನಮ್ಮ ಬೆಲೆ ಪರಿಶೀಲನೆ (Price Match feature) ವೈಶಿಷ್ಟ್ಯವು ನಿಮ್ಮ ಖರೀದಿ ಮುಗಿದ ನಂತರವೂ ಕೆಲಸ ಮಾಡುತ್ತಿರುತ್ತದೆ. ನೀವು ಖರೀದಿಸಿದ ಅಥವಾ ಖರೀದಿಸಲು ಬಯಸಿದ ವಸ್ತುವಿನ ಬೆಲೆ ಕಡಿಮೆಯಾದಲ್ಲಿ ಅದು ನಿಮಗೆ ಮಾಹಿತಿ ನೀಡುತ್ತದೆ ಎಂದು ಮೈಕ್ರೊಸಾಫ್ಟ್​ ಹೇಳಿದೆ.

ಇದಲ್ಲದೆ, ಬಿಂಗ್ ಚಾಟ್‌ನಿಂದಲೇ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಕೂಪನ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಅನ್ನು ಸ್ವಯಂಚಾಲಿತವಾಗಿ ಅನ್ವಯಿಸಲು ಎಡ್ಜ್ ಬಳಕೆದಾರರಿಗೆ ಸಹಾಯ ಮಾಡುತ್ತದೆ. 'ಪ್ಯಾಕೇಜ್ ಟ್ರ್ಯಾಕಿಂಗ್' ವೈಶಿಷ್ಟ್ಯವು ಎಡ್ಜ್ ಸೈಡ್‌ಬಾರ್‌ನಿಂದ ಖರೀದಿಯ ಮೇಲೆ ಟ್ಯಾಬ್‌ಗಳನ್ನು ತೋರಿಸುತ್ತದೆ. ಇದರಿಂದ ಬಳಕೆದಾರರು ಶಿಪ್ಪಿಂಗ್ ದೃಢೀಕರಣಗಳು ಮತ್ತು ಟ್ರ್ಯಾಕಿಂಗ್ ಸಂಖ್ಯೆಗಳಿಗಾಗಿ ತಮ್ಮ ಇನ್‌ಬಾಕ್ಸ್ ಗೆ ಮತ್ತೆ ಹೋಗುವ ಅವಶ್ಯಕತೆ ಇರುವುದಿಲ್ಲ.

ಬೆಲೆ ಪರಿಶೀಲನೆ ವೈಶಿಷ್ಟ್ಯವು ಅಮೆರಿಕದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಬೆಲೆ ಇತಿಹಾಸ, ಬೆಲೆ ಹೋಲಿಕೆ, ಕೂಪನ್‌ಗಳು, ಕ್ಯಾಶ್‌ಬ್ಯಾಕ್ ಮತ್ತು ಪ್ಯಾಕೇಜ್ ಟ್ರ್ಯಾಕಿಂಗ್ ವೈಶಿಷ್ಟ್ಯಗಳು ಈಗಾಗಲೇ ಆಯ್ದ ಮಾರುಕಟ್ಟೆಗಳಲ್ಲಿ ಲಭ್ಯವಿವೆ ಮತ್ತು ಎಡ್ಜ್‌ನಲ್ಲಿ ಆಂತರಿಕವಾಗಿ ಅಳವಡಿಸಲಾಗಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ : ಇಂಟರ್​ನೆಟ್​ನಿಂದ ಡೇಟಾ ಕದ್ದ ಆರೋಪ: Open AI ವಿರುದ್ಧ ಯುಎಸ್​ನಲ್ಲಿ ಮೊಕದ್ದಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.