ETV Bharat / science-and-technology

ಭೂಮಿಯ ಉಷ್ಣಾಂಶದ ಚಿತ್ರಗಳನ್ನು ಕಳುಹಿಸಿದ 'ವಿಶ್ವದ ಥರ್ಮಾಮೀಟರ್' ಹಾಟ್​ಸ್ಯಾಟ್​-1 - ಹವಾಮಾನ ತಂತ್ರಜ್ಞಾನ ಸಂಸ್ಥೆ SatVu

ವಿಶ್ವದ ಥರ್ಮಾಮೀಟರ್ ಎಂದು ಕರೆಯಲಾಗುವ ಹಾಟ್​ಸ್ಯಾಟ್​-1 ಉಪಗ್ರಹ ಇದೇ ಪ್ರಥಮ ಬಾರಿಗೆ ಭೂಮಿಯ ಥರ್ಮಲ್ ಇಮೇಜಿಂಗ್ ಚಿತ್ರಗಳನ್ನು ಕಳುಹಿಸಿದೆ.

HotSat 1  Worlds thermomete beams back 1st heat variations on Earth

author img

By ETV Bharat Karnataka Team

Published : Oct 8, 2023, 2:00 PM IST

ಲಂಡನ್ : ನಿರಂತರವಾಗಿ ವಿಶ್ವದ ತಾಪಮಾನದ ಮೇಲೆ ನಿಗಾ ಇಡುವ ಉದ್ದೇಶದಿಂದ ಹಾರಿಬಿಡಲಾದ ಮತ್ತು ವಿಶ್ವದ ಥರ್ಮಾಮೀಟರ್ ಎಂದು ಹೆಸರಾದ ಹಾಟ್​ಸ್ಯಾಟ್​-1 ಸ್ಯಾಟಲೈಟ್​ ಭೂಮಿಯ ವಿವಿಧ ಭಾಗಗಳಲ್ಲಿ ಉಷ್ಣಾಂಶದ ಪ್ರಮಾಣ ಹೇಗಿದೆ ಎಂಬುದನ್ನು ತೋರಿಸುವ ತಾನು ಸೆರೆಹಿಡಿದ ಚಿತ್ರಗಳನ್ನು ಕಳುಹಿಸಿದೆ. ಈ ಉಪಗ್ರಹವನ್ನು ಲಂಡನ್ ಮೂಲದ ಹವಾಮಾನ ತಂತ್ರಜ್ಞಾನ ಸಂಸ್ಥೆ SatVu ಹಾರಿಸಿದೆ.

ಜೂನ್​ನಲ್ಲಿ ಸ್ಪೇಸ್ಎಕ್ಸ್​ನ ಫಾಲ್ಕನ್ 9 ರಾಕೆಟ್​ ಮೂಲಕ ಉಡಾವಣೆಯಾದ ಅದ್ಭುತ ಥರ್ಮಲ್ ಇಮೇಜಿಂಗ್ ಉಪಗ್ರಹವು ಹಲವಾರು ಕೈಗಾರಿಕೆಗಳಿಗೆ ಆರ್ಥಿಕ ಚಟುವಟಿಕೆ ಮತ್ತು ಇಂಧನ ದಕ್ಷತೆಯ ಬಗ್ಗೆ ಮೌಲ್ಯಯುತ ಮತ್ತು ಅನನ್ಯ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಬಾಹ್ಯಾಕಾಶ ನೌಕೆಯು ಸುಮಾರು 1 ಮೀಟರ್ ಉದ್ದ ಹಾಗೂ 1 ಮೀಟರ್​ ಅಗಲದ ಘನವಾಗಿದ್ದು ಧ್ರುವೀಯ ಕಕ್ಷೆಯಲ್ಲಿ ಸುತ್ತುತ್ತದೆ. ಇದು ಭೂಮಿಯ ಮೇಲಿನ ಪ್ರತಿಯೊಂದು ಸ್ಥಳವನ್ನು ಪ್ರತಿದಿನ ಸರಿಸುಮಾರು ಅದೇ ಸಮಯದಲ್ಲಿ ನೋಡುತ್ತದೆ.

ಸಾಮಾನ್ಯ ಉಪಗ್ರಹಗಳು ತಮ್ಮ ಕ್ಯಾಮೆರಾಗಳಿಗೆ ಗೋಚರಿಸುವ ಬೆಳಕಿನ ಮೂಲಕ ಭೂಮಿಯ ಮೇಲ್ವಿಚಾರಣೆ ಮಾಡುತ್ತವೆ. ಆದರೆ ಹಾಟ್​ಸ್ಯಾಟ್​-1 ನ ಕಾರ್ಯವಿಧಾನ ವಿಭಿನ್ನವಾಗಿದೆ. ಇದು ವಸ್ತುಗಳು ಅಥವಾ ಭೂದೃಶ್ಯಗಳಿಂದ ಉತ್ಪತ್ತಿಯಾಗುವ ಶಾಖದ ಪ್ರಮಾಣವನ್ನು ಇನ್​ಫ್ರಾ ರೆಡ್​ ಕಿರಣಗಳ ಮೂಲಕ ಅಳೆಯುವುದು ವಿಶೇಷವಾಗಿದೆ.

ಹಾಟ್​ಸ್ಯಾಟ್​ ಈಗ ಲಾಸ್ ವೇಗಾಸ್ ಮತ್ತು ಚಿಕಾಗೋದಲ್ಲಿನ ತಾಪಮಾನವನ್ನು ತೋರಿಸುವ, 10 ಮೀಟರ್ ರೆಸಲ್ಯೂಶನ್ ವರೆಗೆ ಜೂಮ್ ಮಾಡಬಹುದಾದ ಹೊಸ ಚಿತ್ರಗಳನ್ನು ಕಳುಹಿಸಿದೆ ಎಂದು Space ಡಾಟ್ com ವರದಿ ಮಾಡಿದೆ. ಚಿಕಾಗೋದ ಮುಖ್ಯ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಸುವ ರೈಲಿನ ಥರ್ಮಲ್ ನಕಾಶೆಯಿಂದ ಹಿಡಿದು ಜೂನ್​ನಲ್ಲಿ ಕೆನಡಾದ ವಾಯುವ್ಯ ಪ್ರದೇಶಗಳನ್ನು ನಾಶಪಡಿಸಿದ ಕಾಡ್ಗಿಚ್ಚಿನ ವಿವರವಾದ ಮಾಹಿತಿಯನ್ನು ಸಹ ಚಿತ್ರಗಳು ಒಳಗೊಂಡಿವೆ.

ಹಾಟ್​ಸ್ಯಾಟ್​ -1 ಒದಗಿಸಿದ ಅತ್ಯುತ್ತಮ ರೆಸಲ್ಯೂಶನ್ ಚಿತ್ರಗಳು ಅಗ್ನಿಶಾಮಕ ಸಿಬ್ಬಂದಿಗೆ ಜನನಿಬಿಡ ಪ್ರದೇಶಗಳಲ್ಲಿ ಬೆಂಕಿಯು ಹೇಗೆ ಹರಡುತ್ತ ಹೋಗುತ್ತದೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತವೆ ಎಂದು SatVu ನ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಸಹ-ಸಂಸ್ಥಾಪಕ ಟೋಬಿಯಾಸ್ ರೈನಿಕ್ ಹೇಳಿದ್ದಾರೆ.

ನಾಸಾದ ಲ್ಯಾಂಡ್​ಸ್ಯಾಟ್​ ಮತ್ತು ಯುರೋಪಿಯನ್ ಸೆಂಟಿನೆಲ್ ಉಪಗ್ರಹಗಳು 100 ಮೀಟರ್, 500 ಮೀಟರ್ ಅಥವಾ 1,000 ಮೀಟರ್ ರೆಸಲ್ಯೂಶನ್​ನಲ್ಲಿ ಥರ್ಮಲ್ ಇಮೇಜಿಂಗ್ ಸಂಗ್ರಹಿಸುತ್ತವೆ. ಆದರೆ 10 ಮೀಟರ್​ಗಿಂತ ಕಡಿಮೆ ರೆಸಲ್ಯೂಶನ್​ನಲ್ಲಿ ಥರ್ಮಲ್ ಇಮೇಜಿಂಗ್ ಸೆರೆಹಿಡಿಯುವ ಉಪಗ್ರಹ ಹಾಟ್​ಸ್ಯಾಟ್​-1 ಮಾತ್ರ ಆಗಿದೆ ಎಂದು ಎಂದು ಅವರು ಹೇಳಿದರು.

SatVu ಉಡಾವಣೆಗೆ ಯೋಜಿಸಿರುವ ಎಂಟು ಉಪಗ್ರಹಗಳ ಪೈಕಿ ಹಾಟ್​ಸ್ಯಾಟ್​ -1 ಮೊದಲನೆಯದಾಗಿದ್ದು, ಇದು ಇಲ್ಲಿಯವರೆಗೆ 37.1 ಮಿಲಿಯನ್ ಡಾಲರ್ ವೆಂಚರ್ ಕ್ಯಾಪಿಟಲ್ ಬಂಡವಾಳ ಧನಸಹಾಯವನ್ನು ಪಡೆದುಕೊಂಡಿದೆ. ಇದು ಮುಂದಿನ ಒಂದು ವರ್ಷದೊಳಗೆ ತನ್ನ ಎರಡನೇ ಉಪಗ್ರಹವನ್ನು ಉಡಾವಣೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ : ಸಿಂಗಾಪುರದಲ್ಲಿ ಮತ್ತೆ ಕೋವಿಡ್​ ಅಲೆ; ದಿನನಿತ್ಯ 2 ಸಾವಿರ ಜನರಿಗೆ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.